ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ: ಬಸವರಾಜ ಬೊಮ್ಮಾಯಿ

ಆಂಧ್ರಪ್ರದೇಶ, ಜನವರಿ: 13: ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಕರ ಸಂಕ್ರಾಂತಿ ವಿಶೇಷ ಪುಟ

ಶುಕ್ರವಾರ ಆಂಧ್ರದ ಶ್ರೀಶೈಲಂನಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘ, ಬಾಗಲಕೋಟೆ ಇವರ ವತಿಯಿಂದ ಆಯೋಜಿಸಿರುವ ನಿತ್ಯ ಅನ್ನದಾನ ಛತ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗದ್ಗುರುಗಳು ಸಣ್ಣ ವಯಸ್ಸಿನವರಾದರೂ, ದೊಡ್ಡ ಸಾಧನೆ ಮಾಡುವ ಶಕ್ತಿ ಅವರಿಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಜೊತೆಗೆ ನಿಲ್ಲಬೇಕಿದೆ. 500 ಕಿಮೀ ಪಾದಯಾತ್ರೆ ಮಾಡಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಕಂಬಿ ಮಂಟಪ, ಕಲ್ಯಾಣ ಮಂಟಪ ಮೊದಲ ಹೆಜ್ಜೆಯಾಗಿದೆ. ಶಾಲೆ, ಆಸ್ಪತ್ರೆ ನಿರ್ಮಾಣದ ಸಂಕಲ್ಪಕ್ಕೆ ಶ್ರೀ ಶೈಲ ಮಲ್ಲಿಕಾರ್ಜುನ ಆಶೀರ್ವಾದ ಮಾಡುತ್ತಾರೆ. ಸರ್ಕಾರ ಈಗಾಗಲೇ 5 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಇನ್ನೂ ಹೆಚ್ಚಿ ನ ಅನುದಾನ ನೀಡಲಾಗುವುದು ಎಂದರು. ಎಲ್ಲಿಯೂ ಕೆಲಸ ನಿಲ್ಲದಂತೆ ಎಲ್ಲರೂ ಮನಸ್ಸು ಮಾಡಬೇಕು. ಎಲ್ಲಾ ಪೀಠಗಳಿಗೆ ಭೇಟಿ ನೀಡಲಾಗುವುದು ಎಂದರು.

ಶ್ರೀ ಕ್ಷೇತ್ರದ ಅಭಿವೃದ್ಧಿ ಯಾಗಬೇಕು

ಈ ದೇಶದಲ್ಲಿ ಅತಿ ಹೆಚ್ಚು ಭಕ್ತಿ ಚಳವಳಿಗಳಾಗಿವೆ. ಭಕ್ತಿಯ ಮಾರ್ಗದ ವಿಭಿನ್ನ ಚಳವಳಿಗಳು ಆಗಿದ್ದಾರೂ ಅಂತಿಮವಾಗಿ ಬೇಕಿರುವುದು ಮನ ಪರಿವರ್ತನೆ. ತಾಂತ್ರಿಕತೆ ಹಾಗೂ ನಾಗರಿಕತೆಯ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಯಾವುದಕ್ಕಾಗಿ ಹುಟ್ಟು, ಬದುಕು ಸನ್ಮಾನ ತೋರಿಸಲು ಪಂಚ ಪೀಠಾಧ್ಯಕ್ಷರು ಸಂಚಾರ ಮಾಡುತ್ತಿದ್ದಾರೆ. ಅವರ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಬದುಕಿನ ಉನ್ನತೀಕರಣ ಮಾಡಿಕೊಳ್ಳಬೇಕು. ಶ್ರೀಶೈಲ ಕ್ಷೇತ್ರಕ್ಕೆ ತನ್ನದೇ ಇತಿಹಾಸವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಈ ಕ್ಷೇತ್ರ ಚನ್ನಮಲ್ಲಿಕಾರ್ಜುನನ ಸ್ಥಾಪಿತ ಕ್ಷೇತ್ರದಲ್ಲಿ ಧರ್ಮ ಪ್ರಚಾರ ವಾಗುತ್ತಿದ್ದು 12 ನೇ ಶತಮಾನದ ಶಿವಶರಣರ ಅನುಭಾವದ ಸಂಗಮವನ್ನು ಕಾಣುತ್ತೇವೆ. ಅಲ್ಲಮಪ್ರಭು, ಅಕ್ಕಮಹಾದೇವಿ, ದೇವರ ದಾಸೀಮಯ್ಯನ ಸಂಬಂಧವಿದೆ. ಶರಣರ ಸಂಬಂಧ, ಸ್ಥಾಪಿತ ಧರ್ಮ ಪೀಠವೂ ಇದೆ. ಇದರ ಸಮನ್ವಯ ಜನರಿಗೆ ಧರ್ಮ, ನ್ಯಾಯ, ನೀತಿಯ ಬದುಕಿನ ಇತಿಹಾಸವಿದೆ. ಈ ಕ್ಷೇತ್ರ ಅಭಿವೃದ್ಧಿ ಅತ್ಯಗತ್ಯ ಎಂದರು.

Govt Committed To Developing Of Peetas Saya Basavaraja Bommai

ಭಕ್ತರ ಮನೆ ಬಾಗಿಲಿಗೆ ಪೀಠ

ಜ್ಯೋತಿರ್ಲಿಂಗಗಳಲ್ಲಿ ಶ್ರೀ ಶೈಲದ ಮಲ್ಲಿಕಾರ್ಜುನ ಅತ್ಯಂತ ಮಹತ್ವವನ್ನು ಪಡೆದಿದೆ. ಪಂಚಪೀಠಗಳಲ್ಲಿ ಒಂದು ಪೀಠ ಸ್ಥಾಪಿತವಾಗಿ ಮಲ್ಲಿಕಾರ್ಜುನನ ಭಕ್ತಿ ಇಡೀ ಜಗತ್ತಿಗೆ ಸಾರುವ ಕೆಲಸವನ್ನು ಈ ಪೀಠ ಮಾಡಿಕೊಂಡು ಬಂದಿದೆ. ಇಂದಿನ ಜಗದ್ಗುರುಗಳು ಅತ್ಯಂತ ಕಷ್ಟ ಕಾಲದಲ್ಲಿ ಪೀಠ ಅಭಿವೃದ್ಧಿ ಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ. ಈ ಪಂಚಪೀಠಗಳು ಭಕ್ತರಿಂದ ದೂರವಾಗಿವೆ. ದೊಡ್ಡ ಸಮೂಹವಿದ್ದರೂ, ಇವುಗಳ ಅಭಿವೃದ್ಧಿ ಯಾವ ವೇಗದಲ್ಲಿ ಆಗಿಲ್ಲ. ಆದರೆ ಈಗಿನ ಜಗದ್ಗುರುಗಳು ಪೀಠವೇ ಭಕ್ತರ ಮನೆಯ ಬಾಗಿಲಿಗೆ ಸಂಚರಿಸಿ ಆಶೀರ್ವಾದ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬದಲಾವಣೆ. ಭಕ್ತರ ಬಳಿಗೆ ಜಗದ್ಗುರುಗಳು ಹೋದರೆ ದೊಡ್ಡ ಭಕ್ತರಲ್ಲಿ ದೊಡ್ಡ ಪರಿವರ್ತನೆ ಮನೆ, ಮನ ಹಾಗೂ ಬದುಕಿನಲ್ಲಿ ಆಗುತ್ತದೆ. ಪೀಠಗಳ ಅಭಿವೃದ್ಧಿಯ ಅವಶ್ಯಕತೆ ಇದೆ ಎಂದರು.

ಭಕ್ತರಿಗೆ ವ್ಯವಸ್ಥೆ

ಕರ್ನಾಟಕದಿಂದ ಪ್ರತಿದಿನ ಸಾವಿರಾರು ಜನ ಕಾಶಿಗೆ ಹೋಗುತ್ತಾರೆ. ಅಲ್ಲಿಯ ಜಂಗಮ ಮಠ ಬಿಟ್ಟರೆ ಕನ್ನಡಿಗರಿಗೆ ಬೇರೆ ಸ್ಥಳವಿಲ್ಲ. ಶ್ರೀ ಶೈಲಕ್ಕೆ ಬಂದರೆ ಶ್ರೀಮಠದ ಆಶ್ರಯ. ಉಜ್ಜಯನಿ ಮಠವೂ ಹಾಗೆ ಇದೆ. ಪೀಠಗಳ ಅಭಿವೃದ್ಧಿ ಹಾಗೂ ಭಕ್ತರಿಗೆ ವ್ಯವಸ್ಥೆ ಗಳೂ ಆಗಬೇಕು. ಪರಮಪೂಜ್ಯರು ಭಕ್ತರ ಬಳಿಗೆ ಹೋಗುವ ಕಾರ್ಯ ಮುಂದುವರೆಯಬೇಕು. ಆಗ ಗುರು ಮತ್ತು ಭಕ್ತರಿಗೆ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಭಕ್ತರ ಏಳಿಗೆ ಗುರುಗಳಿಗೆ ಬಹಳ ಮುಖ್ಯ. ಈ ದೇಶದಲ್ಲಿ ಆಚಾರ್ಯರಿದ್ದಾರೆ, ಆಚರಣೆ ಬೇಕಾಗಿದೆ. ತತ್ವ ಆದರ್ಶಗಳನ್ನು ಆಚರಣೆ ಮಾಡುವ ಭಕ್ತ ಸಮೂಹ ಬೇಕು. ಈ ದೇಶಕ್ಕೆ ಚರಿತ್ರೆ ಇದೆ. ಚಾರಿತ್ರ್ಯ ಬೇಕಾಗಿದೆ. ಚಾರಿತ್ಯವಂತ ಸಮಾಜದ ಮೂಲಕ ದೇಶದ ಮೌಲ್ಯ ಹೆಚ್ಚಾಗುತ್ತದೆ. ವಿಶ್ವದಲ್ಲಿ ನಮ್ಮದೇ ಆದ ಸುಸಂಸ್ಕೃತವಾದ, ಸಂಬಂಧಗಳಿಗೆ ಗೌರವ ನೀಡುವ ಸಮಾಜ ಎಂದು ಗುರುತಿಸಲಾಗಿದೆ. ಅದನ್ನು ಕಾಪಾಡಲು ಆಚರಣೆ, ಚರಿತ್ರೆ ಅಗತ್ಯ ಎಂದರು.

ಧರ್ಮದ ಹೆಸರಿನಲ್ಲಿ ಸಂಘರ್ಷ

ಧರ್ಮದ ಹೆಸರಿನಲ್ಲಿ ಬಹಳಷ್ಟು ಸಂಘರ್ಷವಾಗುತ್ತಿದೆ. ಯಾವ ಧರ್ಮ ಮನುಜರನ್ನು ಕೂಡಿಸಬೇಕೋ ಅದೇ ಧರ್ಮದ ಹೆಸರಿನಲ್ಲಿ ಸಂಘರ್ಷವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಯಾಗುತ್ತಿರುವುದು ಆತಂಕದ ಸಂಗತಿ. ಹಿಂಸೆ, ಅತ್ಯಾಚಾರ, ಅನಾಚಾರಗಳಿಗೆ ಧರ್ಮದ ಲೇಪನ ನೀಡಿ ಸ್ವರ್ಗ ಸಿಗುತ್ತದೆ ಎನ್ನುವುದು ಕಂಡಾಗ ಭಯವಾಗುತ್ತದೆ. ಈ ಮನುಕೂಲವನ್ನು ಉಳಿಸಲು ಮನಪರಿವರ್ತನೆ ಬಹಳ ಮುಖ್ಯ. ಇದು ಪರಮಪೂಜ್ಯ ರಿಂದ ಮಾತ್ರ ಸಾಧ್ಯ. ಎಂಥ ಕಠಿಣ ಮನಸ್ಸಿದ್ದರೂ ಅವರಿಗೆ ಅರಿವು ಮೂಡಿಸಿದಾಗ ಮಾತ್ರ ಮನ ಪರಿವರ್ತನೆಯಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+