ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಎರಡು ವರ್ಷದಲ್ಲಿ ದೇಶದಲ್ಲೇ ಎಲ್ಲ ನೋಟು ಮುದ್ರಣ

ಸದ್ಯಕ್ಕೆ ಶೇ 70ರಷ್ಟು ನೋಟುಗಳನ್ನು ಮಾತ್ರ ದೇಶದಲ್ಲಿ ಮುದ್ರಿಸಲಾಗುತ್ತಿದೆ. ಬಾಕಿ 30 ಪರ್ಸೆಂಟ್ ವಿದೇಶಗಳಲ್ಲಿ ಆಗುತ್ತಿದೆ. ಯುನೈಟೆಡ್ ಕಿಂಗ್ ಡಮ್ ಹಾಗೂ ಫ್ರಾನ್ಸ್ ನಿಂದ ನೋಟು ದೇಶಕ್ಕೆ ಆಮದಾಗುತ್ತಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 12: ಮುಂದಿನ ಎರಡು ವರ್ಷಗಳಲ್ಲಿ ಶೇ 100ರಷ್ಟು ಕರೆನ್ಸಿ ನೋಟುಗಳನ್ನು ಭಾರತದಲ್ಲೇ ಮುದ್ರಿಸುವ ಪ್ರಸ್ತಾವನೆ ಇದೆ. ಸದ್ಯಕ್ಕೆ ಶೇ 70ರಷ್ಟು ನೋಟುಗಳನ್ನು ಮಾತ್ರ ದೇಶದಲ್ಲಿ ಮುದ್ರಿಸಲಾಗುತ್ತಿದೆ. ಬಾಕಿ 30 ಪರ್ಸೆಂಟ್ ವಿದೇಶಗಳಲ್ಲಿ ಆಗುತ್ತಿದೆ. ಯುನೈಟೆಡ್ ಕಿಂಗ್ ಡಮ್ ಹಾಗೂ ಫ್ರಾನ್ಸ್ ನಿಂದ ನೋಟು ದೇಶಕ್ಕೆ ಆಮದಾಗುತ್ತಿದೆ. ಬಾಕಿ ನೋಟು ದೇಶದಲ್ಲೇ ಮುದ್ರಣವಾಗುತ್ತದೆ.

ಅದಿಕಾರಿಗಳು ಹೇಳುವ ಪ್ರಕಾರ, ಮುಂದಿನ ಎರಡು ವರ್ಷದಲ್ಲಿ ಎಲ್ಲ ನೋಟುಗಳನ್ನು ಭಾರತದಲ್ಲೇ ಮುದ್ರಿಸುವ ಗುರಿ ಇದೆ. ಈಗ ಹೊಸದಾಗಿ ಬಿಡುಗಡೆಯಾಗಿರುವ 2,000 ನೋಟು ದೇಶದಲ್ಲೇ ಮುದ್ರಣವಾಗಿದೆ. ಆದರೆ ಹೊಸ 500 ರುಪಾಯಿ ನೋಟಿಗಾಗಿ ಕಾಗದವನ್ನು ಆಮದು ಮಾಡಿಕೊಳ್ಳಲಾಗಿದೆ.[ಹಳೆ 500, 1,000 ನೋಟುಗಳ ವೈಕುಂಠ ಸಮಾರಾಧನೆ!]

Note

ಪ್ರಧಾನಿ ಕಾರ್ಯಾಲಯದಿಂದಲೇ ಈ ಬಗ್ಗೆ ಅಧಿಕೃತ ಸೂಚನೆ ಬಂದಿದ್ದು, ಎಲ್ಲ ನೋಟುಗಳನ್ನು ದೇಶದಲ್ಲೇ ಮುದ್ರಿಸಬೇಕು ಎಂದು ಸೂಚಿಸಲಾಗಿದೆ. ಅದರಲ್ಲಿ ಸ್ಪಷ್ಟ ಆದೇಶಯಿದ್ದು, ಮುಂದಿನ ಎರಡು ವರ್ಷಗಳಲ್ಲಿ ಶೇ ನೂರರಷ್ಟು ನೋಟುಗಳು ದೇಶದೊಳಗೆ ಮುದ್ರಿಸಬೇಕು. ಹೊರ ದೇಶಗಳಲ್ಲಿ ಭಾರತದ ನೋಟುಗಳು ಮುದ್ರಣವಾಗುವುದನ್ನು ನಿಲ್ಲಿಸಬೇಕು ಎನ್ನಲಾಗಿದೆ.

ಭಾರತದಲ್ಲೇ ನೋಟುಗಳನ್ನು ಮುದ್ರಿಸಬೇಕು ಎಂಬ ನಡೆಯ ಹಿಂದೆ ಸುರಕ್ಷತಾ ಕಾರಣಗಳಿವೆಯೇ ಎಂದು ಪ್ರಶ್ನಿಸಿದರೆ, ಅದಕ್ಕೆ ಅಧಿಕಾರಿಯೊಬ್ಬರು ನಕಾರಾತ್ಮಕವಾಗಿ ಉತ್ತರಿಸಿದ್ದಾರೆ. ವಿದೇಶಗಳಿಂದ ಭಾರತಕ್ಕೆ ನೋಟು ಮುದ್ರಣ ಮಾಡಿಕೊಡುತ್ತಿರುವ ಕಂಪನಿಗಳು ಸುರಕ್ಷತಾ ಕ್ರಮಗಳಲ್ಲಿ ರಾಜೀ ಮಾಡಿಕೊಂಡಿವೆ ಅನ್ನೋದನ್ನು ನಾವು ನಂಬಲ್ಲ. ಇದೇ ವ್ಯವಹಾರವನ್ನು ಬಹಳ ಹಿಂದಿನಿಂದಲೂ ಅವರು ಸರಿಯಾಗಿ ಮಾಡಿಕೊಂಡು ಬಂದಿದ್ದಾರೆ.[ನಿರೀಕ್ಷಿಸಿ! 1,000 ರೂಪಾಯಿ ನೋಟು ಮತ್ತೆ ಬರಲಿದೆ]

ಈ ಹಿಂದೆ ಎರಡು ಕಂಪನಿಗಳ ಮೇಲೆ ಕಣ್ಣಿಡಲಾಗಿತ್ತು. ಆದರೆ ತನಿಖೆ ನಡೆದ ನಂತರ ಆ ಕಂಪನಿಗಳ ಕಾರ್ಯಾಚರಣೆಯಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂಬುದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.

English summary
In the next two years, the government proposes to print 100 per cent of the currency notes in India. At the moment only 70 per cent of the notes are being printed in India, while the remaining abroad. India imports bank notes from the United Kingdom and France while the rest are printed in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X