ಸೈನಿಕರ ಮಕ್ಕಳ ಶೈಕ್ಷಣಿಕ ಖರ್ಚು ಸಂಪೂರ್ಣ ಭರಿಸಲಿದೆ ಕೇಂದ್ರ ಸರಕಾರ
ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ನಾಪತ್ತೆಯಾದ, ಕಾರ್ಯಾಚರಣೆಯಲ್ಲಿ ಅಂಗವೈಕಲ್ಯವಾದ- ಮೃತಪಟ್ಟ ಸೈನಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರ್ಣ ಹಣ ಸಹಾಯವನ್ನು ಸರಕಾರ ಮಾಡುತ್ತದೆ ಎಂದು ಆರ್ಥಿಕ ಸಚಿವಾಲಯದ ಪ್ರಕಟಣೆ ಗುರುವಾರ ತಿಳಿಸಿದೆ. ಈಚೆಗಷ್ಟೇ ಶೈಕ್ಷಣಿಕ ವಿನಾಯಿತಿ ತಿಂಗಳಿಗೆ ಹತ್ತು ಸಾವಿರ ರುಪಾಯಿ ಮಾತ್ರ ನೀಡಲಾಗುವುದು ಎಂದು ತಿಳಿಸಲಾಗಿತ್ತು.
"ತಿಂಗಳಿಗೆ ಹತ್ತು ಸಾವಿರ ರುಪಾಯಿ ಎಂಬ ಮಿತಿ ಹೇರದೆ ಶೈಕ್ಷಣಿಕ ವಿನಾಯಿತಿಯು ಮುಂದುವರಿಯಲಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಶೈಕ್ಷಣಿಕ ವಿನಾಯಿತಿಯು ಸರಕಾರಿ/ಸರಕಾರಿ ಅನುದಾನಿತ ಶಾಲೆಗಳಿಗೆ ಅನ್ವಯಿಸುತ್ತದೆ. ಮಿಲಿಟರಿ/ಸೈನಿಕ ಶಾಲೆ ಮತ್ತು ಕೇಂದ್ರ -ರಾಜ್ಯ ಸರಕಾರದಿಂದ ಮಾನ್ಯರೆ ಪಡೆದ ಇತರ ಶಾಲೆ, ಕಾಲೇಜು, ಕೇಂದ್ರ/ರಾಜ್ಯ್ ಸರಕಾರದಿಂದ ಹಣಕಾಸು ನೆರವು ಪಡೆಯುತ್ತಿರುವ ಸ್ವಾಯತ್ತ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಈ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಕಾರ್ಯಾಚರಣೆಯಲ್ಲಿ ನಾಪತ್ತೆಯಾದ, ಅಂಗವೈಕಲ್ಯಕ್ಕೆ ಈಡಾದ ಅಥವಾ ಮೃತಪಟ್ಟವರ ಮಕ್ಕಳಿಗೆ ಈ ಶೈಕ್ಷಣಿಕ ವಿನಾಯಿತಿಯು ಅನ್ವಯ ಆಗುತ್ತದೆ.












Click it and Unblock the Notifications