ಅವಧಿಗೆ ಮುನ್ನ PPF ಖಾತೆ ಮುಚ್ಚುವುದಕ್ಕೆ ಅವಕಾಶ - ಕೇಂದ್ರದ ಚಿಂತನೆ
ನವದೆಹಲಿ, ಫೆಬ್ರವರಿ 14: ಅವಧಿಗೂ ಮುನ್ನವೇ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯನ್ನು ಮುಚ್ಚುವುದಕ್ಕೆ ಅವಕಾಶ ನೀಡಲು ಸರ್ಕಾರ ಚಿಂತೆ ನಡೆಸುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ತುರ್ತು ಸಂದರ್ಭಗಳಲ್ಲಿ ಅಂದರೆ ಆರೋಗ್ಯ ಸಮಸ್ಯೆ ಮತ್ತು ಉನ್ನತ ಶಿಕ್ಷಣದ ಅಗತ್ಯಕ್ಕೆ ಪಿಪಿಎಫ್ ಖಾತೆಯನ್ನು ಅವಧಿಗೂ ಮುನ್ನವೇ ಮುಚ್ಚುವುದಕ್ಕೆ ಅವಕಾಶ ನೀಡಲಾಗುವುದು ಎದು ಅದು ಹೇಳಿದೆ.
2018 ರ ಹಣಕಾಸು ಮಸೂದೆ ಪ್ರಕಾರ ಸಣ್ಣ ಉಳಿತಾಯ ಯೋಜನೆಯಲ್ಲೂ ಕೆಲವು ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದ್ದು, ಅಪ್ರಾಪ್ತರೂ ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಲಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ ಪತ್ರ ಮತ್ತು ಇನ್ನಿತರ ನಿರ್ದಿಷ್ಟ ಅವಧಿ ಠೇವಣಿ ಯೋಜನೆಗಳನ್ನು ಸರ್ಕಾರ ಒಂದೇ ಯೋಜನೆಯಡಿ ವಿಲೀನಗೊಳಿಸಲು ಚಿಂತಿಸಿದ ಹಿನ್ನೆಲೆಯಲ್ಲಿ ಪಿಪಿಎಫ್ ಖಾತೆಯಲ್ಲಿ ಈ ಮಹತ್ವದ ಬದಲಾವಣೆ ತರಲು ನಿರ್ಧರಿಸಲಾಗಿದೆ.
ಈ ಮೊದಲ ನಿಯಮವೇನು?
ಈಗ ಇರುವ ಸಾರ್ವಜನಿಕ ಭವಿಷ್ಯ ನಿಧಿ ಕಾಯ್ದೆ ಪ್ರಕಾರ, 15 ವರ್ಷಗಳ ಪಿಪಿಎಫ್ ಖಾತೆಯಿಂದ ಏಳನೇ ವರ್ಷದಲ್ಲಿ ಮಾತ್ರ ಮೊದಲ ಬಾರಿ ಹಣ ಹಿಂದಕ್ಕೆ ಪಡೆಯಲು ಸಾಧ್ಯ. ಅದಕ್ಕೂ ಮತ್ತೆ ಒಂದಷ್ಟು ಶರತ್ತುಗಳಿವೆ. ಏಳನೇ ವರ್ಷದಲ್ಲಿ ಪಿಪಿಎಫ್ ಮೊತ್ತ ಹಿಂದಕ್ಕೆ ಪಡೆದರೆ, ನಾಲ್ಕನೇ ವರ್ಷದ ಕೊನೆಗೆ ಇದ್ದ ಮೊತ್ತದ ಅರ್ಧದಷ್ಟನ್ನು ಮಾತ್ರ ವಾಪಸ್ ಪಡೆಯಬಹುದು.
ತುರ್ತು ಸ್ಥಿತಿಯಲ್ಲಿ ಪಿಪಿಎಫ್ ಖಾತೆ ಮುಚ್ಚಲು ಅವಕಾಶವಿದೆಯಾದರೂ ಅದಕ್ಕೆ ದಂಡ ತೆರಬೇಕಾದ ಅನಿವಾರ್ಯತೆ ಇರುತ್ತದೆ. ರಾಷ್ಟ್ರೀಯ ಉಳಿತಾಯ ಪತ್ರದ ಹಣವನ್ನು ವಾಪಸ್ ಪಡೆಯುವ ನಿಯಮಗಳು ತುಂಬಾ ಕಠಿಣವಾಗಿವೆ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications