ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣವನ್ನು ಅನಾಹುತ ಎಂದು ಕರೆದು ಅಂಕಿ-ಅಂಶ ತೆರೆದಿಟ್ಟ ಚಿದಂಬರಂ

|
Google Oneindia Kannada News

Recommended Video

ಪಿ.ಚಿದಂಬರಂ: ಮತ್ತೆ ಅಪನಗದೀಕರಣದ ಬಗ್ಗೆ ಟೀಕೆ | Oneindia kannada

ಅಪನಗದೀಕರಣ ಘೋಷಣೆಯ ನಂತರದ ಸ್ಥಿತಿಯ ಬಗ್ಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ವಿರುದ್ಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅಂಕಿ-ಅಂಶಗಳ ಸಹಿತ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.

* ಜಿಡಿಪಿ ಅಭಿವೃದ್ಧಿ ದರದ ಲೆಕ್ಕಾಚಾರದಲ್ಲಿ ಹೇಳಬೇಕು ಅಂದರೆ 1.5 ಪರ್ಸೆಂಟ್ ನಷ್ಟು ಭಾರತದ ಆರ್ಥಿಕತೆಯು ನಷ್ಟವಾಗಿದೆ. ಇದೊಂದರ ಲೆಕ್ಕಾಚಾರವನ್ನೇ ಹಿಡಿದು ಹೇಳುವುದಾದರೆ ವರ್ಷಕ್ಕೆ 2.25 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.

'ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ!''ಅಪನಗದೀಕರಣದಿಂದ ಅತೀ ಹೆಚ್ಚು ನಷ್ಟವಾಗಿದ್ದು ಗಾಂಧಿ ಕುಟುಂಬಕ್ಕೆ!'

* ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 15 ಕೋಟಿ ದಿನಗೂಲಿ ಕಾರ್ಮಿಕರು ಹಲವು ವಾರಗಳ ಕಾಲ ತಮ್ಮ ದುಡಿಮೆ ಕಳೆದುಕೊಂಡರು. ಸಾವಿರಾರು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ಬಾಗಿಲು ಹಾಕಿದವು. ಲಕ್ಷಾಂತರ ಉದ್ಯೋಗಗಳು ನಾಶವಾದವು.

Government actually demonetised only 13000 crore and the country paid a huge price

* ಇನ್ನು ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ಅಮಾನ್ಯ ಮಾಡಲು ಸಾಧ್ಯವಾಗಿದ್ದು 13 ಸಾವಿರ ಕೋಟಿ ರುಪಾಯಿ ಮಾತ್ರ ಮತ್ತು ಅದಕ್ಕಾಗಿ ದೇಶವೇ ದೊಡ್ಡ ಬೆಲೆ ತೆರಬೇಕಾಯಿತು

* ನನಗನಿಸುತ್ತದೆ ಆ 13 ಸಾವಿರ ಕೋಟಿ ರುಪಾಯಿ ನೋಟುಗಳು ನೇಪಾಳ ಮತ್ತು ಭೂತಾನ್ ನಲ್ಲಿ ಇದ್ದಿರಬಹುದು. ಮತ್ತಷ್ಟು ಕಳೆದುಹೋಗಿರಬಹುದು ಅಥವಾ ಹಾಳಾಗಿರಬಹುದು.

ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ಮೇಲೆ ಸಿಬಿಐ ಚಾರ್ಜ್ ಶೀಟ್ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ಮೇಲೆ ಸಿಬಿಐ ಚಾರ್ಜ್ ಶೀಟ್

* 15.42 ಲಕ್ಷ ಕೋಟಿಯಲ್ಲಿ ಪ್ರತಿ ರುಪಾಯಿಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ವಾಪಸಾಗಿದೆ (ಕೇವಲ 13,000 ಕೋಟಿ ರುಪಾಯಿ ಬಯಲಿಗೆಳೆಯಲು ಇಷ್ಟೆಲ್ಲ ಮಾಡಿದ್ದಾರೆ).

* ಈಗ ನೆನಪಿಸಿಕೊಳ್ಳಿ, 3 ಲಕ್ಷ ಕೋಟಿ ರುಪಾಯಿ ಹಣ ವಾಪಸಾಗುವುದಿಲ್ಲ ಮತ್ತು ಇದು ಸರಕಾರಕ್ಕೆ ಲಾಭ ಅಂತ ಹೇಳಿದ್ದರು

English summary
Government and RBI actually demonetised only Rs 13,000 crore and the country paid a huge price, said former central minister P Chidamabaram. Every rupee of the Rs 15.42 lakh crore (barring a small sum of Ra 13,000 crore) has come back to the RBI. Remember who had said that Rs 3 lakh crore will not come back and that will be a gain for the government!? further added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X