'ಯೋಗಿ' ನಾಡಲ್ಲಿ ಮುಗಿಲು ಮುಟ್ಟಿದ ಸಂಭ್ರಮ

Subscribe to Oneindia Kannada

ಬೆಂಗಳೂರು, ಮಾರ್ಚ್ 19: ಗೋರಖ್ ಪುರ ಮೂಲದ ಸಂಸದ ಯೋಗಿ ಆದಿತ್ಯನಾಥ್ ಅಚ್ಚರಿಯ ರೀತಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದಂತೆ ಅವರ ಸ್ವ ಕ್ಷೇತ್ರ ಹಾಗೂ ತವರು ಮನೆಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಉತ್ತರಾಖಂಡ್ ನ ತವರು ಗ್ರಾಮದಲ್ಲಿ ಯೋಗಿ ಆದಿತ್ಯನಾಥ್ ತಂದೆ ತಾಯಿಯನ್ನು ಜನ ಮೆರವಣಿಗೆ ಮಾಡಿ ಹೊತ್ತು ತಿರುಗಾಡಿದ್ದಾರೆ. ಇನ್ನು ಸ್ವ ಕ್ಷೇತ್ರ ಗೋರಖ್ ಪುರ್ ನಲ್ಲೂ ಜನ ಭಾರೀ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.[ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?]

ಗೋರಖ್ ಪುರ್

ಗೋರಖ್ ಪುರ್

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸ್ಥಳೀಯ ಬಿಜೆಪಿ ಬೆಂಬಲಿಗರು ಇಲ್ಲಿನ ಗೋರಖ್ ಪುರ್ ದೇವಸ್ಥಾನದ ಹೊರಗಡೆ ಸಂಭ್ರಮಾಚರಣೆ ನಡೆಸಿದರು. ಹಿಂದೊಮ್ಮೆ ಇದೇ ಗೋರಖ್ ಪುರ್ ದೇವಸ್ಥಾನದ ಮುಖ್ಯಸ್ಥರಾಗಿ ಯೋಗಿ ಆದಿತ್ಯನಾಥ್ ಕಾರ್ಯ ನಿರ್ವಹಿಸಿದ್ದರು.

ಯೋಗಿ ನೆಲದಲ್ಲಿ ಸಂಭ್ರಮಾಚರಣೆ

ಯೋಗಿ ನೆಲದಲ್ಲಿ ಸಂಭ್ರಮಾಚರಣೆ

ಯೋಗಿ ಆದಿತ್ಯನಾಥ್ ಮೂಲ ಮನೆ ಉತ್ತರಖಂಡ್ ನ ಯಮಕೇಶ್ವರ್ ದಲ್ಲಿರುವ ಪಂಚೂರ್ ನ ನಿವಾಸದಲ್ಲಿ ಗ್ರಾಮಸ್ಥರು ಸಂಭ್ರಮಾಚರಣೆ ನಡೆಸಿದರು. ಡೋಲು, ಬ್ಯಾಂಡುಗಳನ್ನು ಬಡಿದು, ಪಟಾಕಿ ಸಿಡಿಸಿ ಸಿಹಿ ಹಂಚಿ ಇಲ್ಲಿನ ಜನ ಸಂಭ್ರಮಿಸಿದರು.[ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ]

ಸಹೋದರಿ ಹೇಳುವುದೇನು?

ಸಹೋದರಿ ಹೇಳುವುದೇನು?

ನಾವೆಲ್ಲಾ ನಿನ್ನೆ ಕಾತರದಿಂದ ಟಿವಿ ನೋಡುತ್ತಿದ್ದೆವು. ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸುದ್ದಿ ಬರುತ್ತಿದ್ದಂತೆ ನಾವು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದೆವು ಎಂದು ಯೋಗಿ ಆದಿತ್ಯನಾಥ್ ಸಹೋದರಿ ಹೇಳಿದ್ದಾರೆ.

ತುಂಬಾ ಸಂಭ್ರಮವಾಗುತ್ತಿದೆ

ತುಂಬಾ ಸಂಭ್ರಮವಾಗುತ್ತಿದೆ

ಜನರಿಗೆ ಸೇವೆ ನೀಡಬೇಕು ಎಂಬ ಗುರಿ ಆತನಲ್ಲಿ ಆರಂಭದಿಂದಲೂ ಇತ್ತು. ಈಗ ಆತ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದಾರೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ತಂದೆ ಹೇಳಿದ್ದಾರೆ.

ಮೇರೆ ಮೀರಿದ ಸಂಭ್ರಮಾಚರಣೆ

ಮೇರೆ ಮೀರಿದ ಸಂಭ್ರಮಾಚರಣೆ

ಯೋಗಿ ಆದಿತ್ಯನಾಥ್ ರನ್ನು ಮುಖ್ಯಮಂತ್ರಿ ಎಂದು ಬಿಜೆಪಿ ಘೋಷಣೆ ಮಾಡುತ್ತಿದ್ದಂತೆ ಪಕ್ಷಾತೀತ ಧರ್ಮಾತೀತವಾಗಿ ಗೋರಖ್ ಪುರ್ ಜನ ಸಂಭ್ರಮಿಸಿದ್ದಾರೆ. ಪ್ರಮಾಣ ವಚನಕ್ಕೂ ಮೊದಲೇ ಅಂದರೆ ಇಂದು ಬೆಳಿಗ್ಗೆ ಇಲ್ಲಿನ ಜನ ಸಂಭ್ರಮಾಚರಣೆಗೆ ಇಳಿದಿದ್ದರು.

ಇನ್ನು ನಿನ್ನ ಅಲಹಾಬಾದ್, ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಯೋಗಿ ಆದಿತ್ಯನಾಥ್ ಅಭಿಮಾನಿಗಳು ವಿಜಯೋತ್ಸವ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
People in Gorakhpur and Uttarakhand’s Panchur celebrate and rejoice as Yogi Adityanath take oath as Uttar Pradesh Chief Minister today.
Please Wait while comments are loading...