ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ವೈದ್ಯೆಗೆ ಗೂಗಲ್ ಡೂಡಲ್ ನಮನ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ನವೆಂಬರ್ 22: ಭಾರತದ ಹಲವು ಸಾಮಾಜಿಕ ಕ್ರಾಂತಿಗಳಿಗೆ ನಾಂದಿ ಹಾಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ. ರುಕ್ಮಾಬಾಯಿ ಅವರನ್ನು ಗೂಗಲ್ ಡೂಗಲ್ ನೆನಪಿಸಿಕೊಂಡು ನಮನ ಸಲ್ಲಿಸಿದೆ. ನ.22ರಂದು ಅವರ 153 ನೇ ಜನ್ಮದಿನವಾದ್ದರಿಂದ ಅವರ ಸಾಧನೆಗಳನ್ನು ಗೂಗಲ್ ನೆನಪಿಸಿಕೊಂಡಿದೆ.

  ಭಾರತದ ಮೊದಲ ಮಹಿಳಾ ವಕೀಲೆಗೆ ಗೂಗಲ್ ಡೂಡಲ್ ನಮನ

  ಭಾರತದ ಮೊದಲ ಮಹಿಳಾ ವೈದ್ಯೆ ಆನಂದಬಾಯಿ ಜೋಶಿಯಾದರೆ ಮೊದಲ ವೃತ್ತಿನಿರತ ಮಹಿಳಾ ವೈದ್ಯೆ ರುಕ್ಮಾಬಾಯಿಯಾಗಿದ್ದಾರೆ. ತಾವು ಕಂಡ ಕಷ್ಟಗಳನ್ನು ಬೇರೆ ಹೆಣ್ಣು ಮಕ್ಕಳು ಅನುಭವಿಸಬಾರದು ಎಂದು ಬಾಲ್ಯ ವಿವಾಹ ಪದ್ಧತಿಯನ್ನು ನಿರ್ನಾಮಗೊಳಿಸದೆ ಹಾಗೂ ಸ್ತ್ರೀ ಶಿಕ್ಷಣವನ್ನು ಹೆಚ್ಚುಹೆಚ್ಚಾಗಿ ಪಸರಿಸದೆ ನಮ್ಮ ಪರಿಸ್ಥಿತಿ ಸುಧಾರಿಸದು ಎಂದು ಸಮಾಜಕ್ಕೆ ಕೂಗಿ ಹೇಳಿದ್ದರು. ಇಂದು ಲಕ್ಷಾಂತರ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರೆ ಅದಕ್ಕೆ ರುಕ್ಮಾಬಾಯಿ ಕೂಡ ಕಾರಣಕರ್ತರು.

  Google respect to Indian social reformer

  ರುಕ್ಮಾಬಾಯಿ ಅವರು ಮುಂಬೈನಲ್ಲಿ 1864ರಲ್ಲಿ ಜನಸಿದರು. ರುಕ್ಮಾಬಾಯಿ ಅವರ ತಾಯಿಯ ವಿವಾಹವಾದಾಗ ತಾಯಿಗೆ 14ವರ್ಷ, ರುಕ್ಮಾಬಾಯಿ ಅವರು ಜನಿಸಿದಾಗ ಅವರಿಗೆ ಕೇವಲ 15 ವರ್ಷ ವಯಸ್ಸಾಗಿತ್ತು. ರುಕ್ಮಾಬಾಯಿ ಎರಡು ವರ್ಷವಿರುವಾಗಲೇ ತಾಯಿ ವಿಧವೆಯಾದರು.

  ಭಾರತದ ಅನಸೂಯಾರ ಕೊಡುಗೆ ಸ್ಮರಿಸಿದ ಗೂಗಲ್ ಡೂಡಲ್

  ವಿಧವಾ ವಿವಾಹ ನಿಷಿದ್ಧವಿರದ ಜಾತಿಗೆ ಸೇರಿದ ಕಾರಣ ಡಾ. ಸಕ್ರಾಮ್ ಅರ್ಜುನ್ ಎಂಬ ವೈದ್ಯರನ್ನು ವಿವಾಹವಾದರು. ನಂತರ ಅವರಿಗೆ ಉತ್ತಮ ಶಿಕ್ಷಣವನ್ನು ಪೋಷಕರು ನೀಡಿದರು. ಆದರೆ ತನ್ನ ತಂದೆ ತಾಯಿ ಒತ್ತಾಯಕ್ಕೆ ಮಣಿದು11ನೇ ವಯಸ್ಸಿನಲ್ಲಿ ದಾದಾಜಿ ಭಿಕಾಜಿಯೊಂದಿಗೆ ಮದುವೆಯಾದರು.

  ಮದುವೆಯ ನಂತರ1889ರಲ್ಲಿ ಲಂಡನನ್ನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದರು. 19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಕ್ರಮಿತ ಭಾರತ ಹಾಗೂ ಬ್ರಿಟನ್ ನಲ್ಲಿ ಶಾಕ್ ತರಂಗಳನ್ನೆಬ್ಬಿಸಿದ್ದು ರುಕ್ಮಾಬಾಯಿ ಪ್ರಕರಣ, ಹಿರಿಯರು ತನಗೆ ಬಾಲ್ಯದಲ್ಲೇ ಮದುವೆ ಮಾಡಿಸಿದ ಒಲ್ಲದ ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆ ರುಕ್ಮಾಬಾಯಿಯವರು.

  ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ: ಹೆಣ್ಣುಮಕ್ಕಳು ಮನೆಯಿಂದಾಚೆಗೆ ಬರದ ಕಾಲದಲ್ಲಿ ಪತಿಯೇ ಪರದೈವ ಎಂದು ತಿಳಿದಿದ್ದ ಸಮಾಜದಲ್ಲಿ ತನಗಾದ ಅನ್ಯಾಯದ ವಿರುದ್ಧ ಕಾನೂನು ರೂಪುಗೊಳ್ಳುವಲ್ಲಿ ನೆರವಾಯಿತು. ಸಮಾಜ ಸುಧಾರಕರೂ ಪತ್ರಕರ್ತರೂ ಆದ ಬೆಹ್ರಾಂಜಿ ಮಲಬಾರಿ ಎಂಬುವರು ಈ ಪ್ರಕರಣದ ವಿರುದ್ಧ ದನಿಯೆತ್ತಿ 1891ರಲ್ಲಿ ಕಾಯ್ದೆಯನ್ನು ಜಾರಿಗೆ ತಂದರು. ಇದರ ಮೂಲಕ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 10ರಿಂದ 12ಕ್ಕೆ ಏರಿಸಲಾಯಿತು.

  ಮುಂದೆ 1929ರಲ್ಲಿ "ಶಾರದಾ ಕಾಯ್ದೆ' ಅದನ್ನು 14ಕ್ಕೆ ಏರಿಸಿತು. ಸ್ವತಂತ್ರ ಭಾರದಲ್ಲಿ ಈ ಅದು ಹೆಣ್ಣುಮಕ್ಕಳು ಮಾನಸಿಕವಾಗಿ ಪ್ರಬುದ್ಧರಾಗುವ ವಯಸ್ಸು 18 ಆಗಿದೆ. ಭಾರತದ ಮಹಿಳಾ ಸಮಾಜದ ಕೃತಜ್ಞತೆ ರುಕ್ಮಾಬಾಯಿಗೆ ಸಲ್ಲಬೇಕು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Google paid respect to social reformer and first Indian practising lady doctor, Google has paid an ode to her dedicating todays Google Doodle to her depicting a self assured.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more