ರಕ್ತದಾನಿಗಳ ದಿನ, ಗೂಗಲ್ ಡೂಡ್ಲ್ , ಟ್ವಿಟ್ಟರ್ ಸಂದೇಶಗಳು

Posted By:
Subscribe to Oneindia Kannada

ಬೆಂಗಳೂರು, ಜೂನ್ 14: ಆಸ್ಟ್ರಿಯಾ ಹಾಗೂ ಅಮೆರಿಕದ ಮಹಾನ್ ವೈದ್ಯ ಕಾರ್ಲ್ ಲ್ಯಾಂಡ್ ಸ್ಟೇನರ್ ಅವರ 148 ನೇ ಹುಟ್ಟುಹಬ್ಬ ವಾರ್ಷಿಕೋತ್ಸವವನ್ನು ಗೂಗಲ್ ಸಂಸ್ಥೆ ಡೂಡ್ಲ್ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿದೆ.

ಮಾನವ ದೇಹದ ರಕ್ತಗಳಿಗೆ ಪ್ರತ್ಯೇಕ ಗುಂಪುಗಳಿವೆ ಎಂದು ಕಾರ್ಲ್ ಅವರು ತೋರಿಸಿಕೊಟ್ಟವರು. ಎ, ಬಿ, ಎಬಿ ಹಾಗೂ ಒ ಗುಂಪು ಎಂದು ವಿಂಗಡಿಸಿದ್ದು 1900 ರ ಸುಮಾರಿನಲ್ಲಿ ಆದರೆ, ಈಗಲೂ ಇದೇ ವಿಧಾನದಲ್ಲಿ ರಕ್ತದ ಗುಂಪುಗಳನ್ನು ಬಳಸಲಾಗುತ್ತಿದೆ. [ಅವಿರತದಿಂದ ರಕ್ತದಾನಿಗಳ ಮಾಹಿತಿ ನೀಡುವ ಅಪ್ಲಿಕೇಷನ್]

Google doodle pays tribute to Karl Landsteiner on his 148th birth anniversary

ಅನಿಮೇಷನ್ ಡೂಡ್ಲ್ ಪ್ರದರ್ಶಿಸುವ ಮೂಲಕ ಕಾರ್ಲ್ ಗೆ ಗೂಗಲ್ ಗೌರವ ಸೂಚಿಸಿದೆ. ಕಾರ್ಲ್ ಅವರ ಚಿತ್ರ ಪಕ್ಕದಲ್ಲಿ ವಿವಿಧ ರಕ್ತಗಳ ಗುಂಪಿನ ಸ್ಯಾಂಪಲ್ ಇರುವ ನಳಿಕೆಗಳನ್ನು ನೀಡಲಾಗಿದೆ. ಪಕ್ಕದಲ್ಲಿ ಮೈಕ್ರೋಸೋಪ್ಕ್ ಕೂಡಾ ಇದೆ.[ಸ್ಮಾರ್ಟ್ ಫೋನ್ ಆಪ್: ರಕ್ತದಾನಕ್ಕೆ ಬ್ಲಡ್ ಫಾರ್ ಶ್ಯೂರ್]

ಕಾರ್ಲ್ ಅವರ ಸಂಶೋಧನೆ ಪ್ರಯೋಜನ ಅನೇಕ ಪೀಳಿಗೆಗಳಿಗೆ ಆಗಿದೆ. ಇದಲ್ಲದೆ ಆಸ್ಟ್ರಿಯಾದ ವೈದ್ಯರಾದ ಎರ್ವಿನ್ ಪೊಪ್ಪರ್, ರೋಮಾನಿಯಾದ ಕಾನ್ಸ್ಟಾಟಿಣ್ ಲೆವಡಿಟಿ ಜತೆಗೂಡಿ ಪೋಲಿಯೊ ವೈರಾಣು ಪತ್ತೆ ಹಚ್ಚಿದರು. ಇದರಿಂದಾಗಿ ವಿಶ್ವದಾದ್ಯಂತ ಅನೇಕ ಪೋಲಿಯೊ ನಿರ್ಮೂಲನೆ ಬೇಕಾದ ಕ್ರಮಗಳನ್ನು ಜರುಗಿಸಲು ಸಾಧ್ಯವಾಗಿದೆ.[ರಕ್ತಬೇಕೆ? ವೆಬ್‌ಸೈಟ್‌ಗೆ ಭೇಟಿ ಕೊಡಿ]

-
-
-
-
-
-
-
ವಿಶ್ವ ರಕ್ತದಾನಿಗಳ ದಿನಾಚರಣೆ ಮಾಹಿತಿಯುಕ್ತ ಟ್ವಿಟ್ಟರ್

ವಿಶ್ವ ರಕ್ತದಾನಿಗಳ ದಿನಾಚರಣೆ ಮಾಹಿತಿಯುಕ್ತ ಟ್ವಿಟ್ಟರ್


1930 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕಾರ್ಲ್ ಅವರ ಜನ್ಮದಿನ(ಜೂನ್ 14)ವನ್ನು ವಿಶ್ವ ರಕ್ತದಾನಿಗಳ ದಿನ ಎಂದು ಆಚರಿಸಲಾಗುತ್ತದೆ. ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಗೂಗಲ್ ಡೂಡ್ಲ್ ನೋಡಿದ ಮೇಲೆ ಮಾಹಿತಿಯುಕ್ತ ಟ್ವಿಟ್ಟರ್ ಸಂದೇಶಗಳನ್ನು ಗ್ಯಾಲರಿಯಲ್ಲಿ ನೋಡಿ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Google commemorates Karl Landsteiner, an Austrian and American biologist and physician, who discovered the existence of blood types A, B, AB and O in 1900, on his 148th birth anniversary.
Please Wait while comments are loading...