ಭಾರತಕ್ಕಾಗಿ ಗೂಗಲ್, ಪಿಚ್ಚೈ ಹಂಚಿದ ಕನಸುಗಳೇನು?

Posted By:
Subscribe to Oneindia Kannada

ನವದೆಹಲಿ, ಡಿ.16: ಭಾರತ ಪ್ರವಾಸದಲ್ಲಿರುವ ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚ್ಚೈ ಅವರು ದೆಹಲಿಯಲ್ಲಿ ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳನ್ನು ಹಂಚಿಕೊಂಡರು. ಇಂಟರ್ನೆಟ್, ಆಂಡ್ರಾಯ್ಡ್, ಅತ್ಯಾಧುನಿಕ ಉಪಕರಣಗಳನ್ನು ಹೇಗೆ ಭಾರತದೆಲ್ಲೆಡೆ ತಲುಪಿಸುವ ಕಾರ್ಯ ಯೋಜನೆ ರೂಪಿಸಲಾಗಿದೆ ಎಂಬುದನ್ನು ವಿವರಿಸಿದರು.

ಪ್ರತಿ ತಿಂಗಳು ಲಕ್ಷಾಂತರ ಮಂದಿ ಭಾರತೀಯರು ಇಂಟರ್ನೆಟ್ ಬಳಕೆದಾರರಾಗುತ್ತಿದ್ದಾರೆ. ಭಾರತದಲ್ಲಿ ಸದ್ಯಕ್ಕೆ ಡಿಜಿಟಲ್ ಕ್ರಾಂತಿಯಾಗುತ್ತಿದೆ. ಗೂಗಲ್ ಸಂಸ್ಥೆಯ ಮುಖ್ಯ ಉದ್ದೇಶಕ್ಕೆ ತಕ್ಕಂತೆ ಗ್ರಾಮೀಣ ಭಾಗಗಳಿಗೆ ಇಂಟರ್ನೆಟ್ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮೋದಿ ಅವರ ಸರ್ಕಾರವೂ ಕಾರ್ಯನಿರ್ವಹಿಸುತ್ತಿದೆ ಎಂದರು.[ಫೇಸ್ ಬುಕ್, ಗೂಗಲ್ ಕಚೇರಿಯಲ್ಲಿ ಮೋದಿ ಸಂಚಾರ]

Google CEO Sundar Pichai

ಸುಂದರ್ ಅವರು ಹಂಚಿಕೊಂಡ ಕನಸುಗಳು ಹೀಗಿವೆ:
* ಮುಂದಿನ ಮೂರು ವರ್ಷಗಳಲ್ಲಿ ಭಾರತದ 3,00,000 ಗ್ರಾಮಗಳ ಮಹಿಳೆಯರ ಸಬಲೀಕರಣ ಯೋಜನೆ.
* ಬೆಂಗಳೂರು ನಂತರ ಹೈದರಾಬಾದಿನಲ್ಲಿ ಹೊಸ ಇಂಜಿನಿಯರಿಂಗ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಗೂಗಲ್ ಮುಂದಾಗಿದೆ.
* ಗೂಗಲ್ ನಿಂದ ಭಾರತದ 11 ಭಾಷೆಗಳಿಗೆ ನೆರವಾಗಬಲ್ಲ ಇಂಡಿಕ್ ಕೀಬೋರ್ಡ್. [ಲಿಂಕ್ ಇಲ್ಲಿದೆ]
* 2016ರ ಅಂತ್ಯಗೊಳಗೆ ಗೂಗಲ್ ಸರ್ಚ್ ಮೂಲಕ ಕ್ರಿಕೆಟ್ ಲೈವ್ ಅಪ್ಡೇಟ್ ಸಿಗುವಂತೆ ಮಾಡಲಾಗುವುದು.[ಸುಂದರ್ ಪಿಚೈ- ಗೂಗಲ್ ಸಿಇಒ ಬಗ್ಗೆ ಒಂದಿಷ್ಟು]
* ಇಂಟರ್ನೆಟ್ ಸಂಪರ್ಕ ಎಲ್ಲರಿಗೂ ಸಿಗುವಂತೆ ಮಾಡುವುದು. ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಜನತೆಗೆ ಸಿಗುವಂತಾಗಬೇಕು.
* 2017ರ ವೇಳೆಗೆ ಭಾರತದ 500 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಅಳವಡಿಕೆ.[ವರದಿ ಇಲ್ಲಿದೆ]
* 2016ರ ಅಂತ್ಯಕ್ಕೆ ಯುನೈಟೆಡ್ ಸ್ಟೇಟ್ಸ್ ಗಿಂತ ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರು ಹೆಚ್ಚಾಗಲಿದ್ದಾರೆ.
* ಗ್ರಾಮೀಣ ಭಾಗಕ್ಕೆ ನೆರವಾಗಬಲ್ಲ ಕಡಿಮೆ ದರದಲ್ಲಿ ಸಂಪರ್ಕ ಸಾಧ್ಯತೆ ನೀಡುವ ಪ್ರಾಜೆಕ್ಟ್ ಲೂನ್ ಭಾರತಕ್ಕೂ ತರಲಾಗುವುದು.

ಭಾರತದಿಂದ ನಾನು ಹೆಚ್ಚು ಪಡೆದುಕೊಂಡಿದ್ದೇನೆ ಈಗ ಗೂಗಲ್ ಮೂಲಕ ಭಾರತಕ್ಕೆ ವಾಪಸ್ ಕೊಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ತಮ್ಮ ಭಾಷಣ ಮುಗಿಸಿದರು. ಮಹಿಳಾ ಸಬಲೀಕರಣಕ್ಕಾಗಿ 'ಇಂಟರ್ನೆಟ್ ಸಾಥಿ' ಯೋಜನೆಯ ಬಗ್ಗೆ ವಿಡಿಯೋ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Google CEO Sundar Pichai at #GoogleForIndia event. Sundar addressed a session with media, developers, entrepreneurs and marketers at an event in New Delhi. Here goes 8 takeaways unzipped by Pichai for India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ