LPG Charge: ಎಲ್‌ಪಿಜಿ ಬಳಕೆದಾರರಿಗೆ ನೆಮ್ಮದಿಯ ಸುದ್ದಿ, ಇನ್ಮುಂದೆ ಈ ಶುಲ್ಕ ಇಲ್ಲ!

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ಹೊರಬಿದ್ದಿದೆ. ಈಗಾಗಲೇ ಎಲ್‌ಪಿಜಿ ದರ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಈಗ ಪ್ರತಿ ಮನೆಯಲ್ಲೂ ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿದ್ದು, ಪೂರೈಕೆಯೂ ಭರದಿಂದ ಸಾಗುತ್ತಿದೆ. ಗ್ರಾಹಕರ ಮನೆ ಬಾಗಿಲಿಗೇ ಎಲ್‌ಪಿಜಿ ಸಿಲಿಂಡರ್‌ ವಿತರಣೆ ಮಾಡುವ ವ್ಯವಸ್ಥೆಯೂ ಚಾಲ್ತಿಯಲ್ಲಿದೆ. ಇದಕ್ಕಾಗಿ ಪ್ರತ್ಯೇಕ ಡೆಲಿವರಿ ಸಿಬ್ಬಂದಿ ಕೂಡ ಇದ್ದಾರೆ. ಮನೆ ಬಾಗಿಲಿಗೆ ಸಿಲಿಂಡರ್‌ ತಂದು ಕೊಡುವ ಸಿಬ್ಬಂದಿ ಹೆಚ್ಚುವರಿ ಹಣ ಪಡೆಯುತ್ತಾರೆ ಎಂಬ ಆರೋಪವಿದೆ. ಆದರೆ ಇನ್ನು ಮುಂದೆ ಗ್ರಾಹಕರು ನಿಶ್ಚಿಂತೆಯಿಂದ ಸಿಲಿಂಡರ್‌ ಪಡೆಯಬಹುದು.

ಸಾಮಾನ್ಯವಾಗಿ ಮನೆಬಾಗಿಲಿಗೆ ಸಿಲಿಂಡರ್‌ ಪೂರೈಕೆ ಮಾಡುವ ಗ್ಯಾಸ್‌ ಏಜೆನ್ಸಿಯ ಡೆಲಿವರಿ ಸಿಬ್ಬಂದಿ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಮೊದಲೆಲ್ಲ ಏಜೆನ್ಸಿ ಬಳಿಯೇ ಹೋಗಿ ಸಾಲುಗಟ್ಟಿ ನಿಂತು ಸಿಲಿಂಡರ್‌ ಪಡೆಯಬೇಕಿತ್ತು. ಈ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಸಿಲಿಂಡರ್‌ ತಲುಪಿಸುವ ಉದ್ದೇಶದಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದು ಅನುಕೂಲವೇ ಆದರೂ ದುಬಾರಿ ಸಿಲಿಂಡರ್‌ ದರದ ಜೊತೆಗೆ ಸಿಬ್ಬಂದಿಗೆ ಹೆಚ್ಚುವರಿ ಹಣ ಕೂಡ ಕೊಡಬೇಕು.

good-news-for-lpg-users-delivery-extra-charge-removed-from-now-on

ಡೆಲಿವರಿ ಸಿಬ್ಬಂದಿಯು ಪ್ರತಿ ಸಿಲಿಂಡರ್‌ ನೀಡುವಾಗ ಹೆಚ್ಚುವರಿಯಾಗಿ 50 ರೂಪಾಯಿ ಹಣ ಪಡೆಯುತ್ತಾರೆ. ಕೆಲವೆಡೆ ಇದಕ್ಕಿಂತಲೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಅಡುಗೆ ಅನಿಲದ ಸಿಲಿಂಡರ್‌ ಅನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಸಿಬ್ಬಂದಿಗೆ ಗ್ರಾಹಕರು ಹೆಚ್ಚಿನ ಶುಲ್ಕ ನೀಡುವ ಅಗತ್ಯವಿಲ್ಲ. ನಿಮ್ಮ ಬಿಲ್‌ನಲ್ಲಿ ನಮೂದಾಗಿರುವ ಮೊತ್ತವನ್ನಷ್ಟೇ ಪಾವತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಗ್ಯಾಸ್ ಏಜೆನ್ಸಿಗಳು ಗೃಹ ಬಳಕೆಯ ಸಿಲಿಂಡರ್‌ಗಳನ್ನು ನೇರವಾಗಿ ಗೋಡೌನ್‌ನಿಂದ ಗ್ರಾಹಕರಿಗೆ ಸರಬರಾಜು ಮಾಡಬೇಕು. ಅಲ್ಲದೆ ಯಾವ ಕಾರಣಕ್ಕೂ ಈ ಸಿಲಿಂಡರ್‌ಗಳನ್ನು ರಸ್ತೆಬದಿಗಳಲ್ಲಿ, ಮೈದಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂಬ ನಿಯಮವೂ ಇದೆ. ಹೀಗಾಗಿ ಕೆಲವೆಡೆ ಹೆಚ್ಚುವರಿ ಡೆಲಿವರಿ ಶುಲ್ಕದ ಹೆಸರಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವ ಆರೋಪವಿದ್ದು, ಇದಕ್ಕೆ ಪರಿಹಾರವೂ ಇದೆ.

5 ಕಿ.ಮೀ ಒಳಗೆ ಡೆಲಿವರಿ ಉಚಿತ

ಗೃಹೋಪಯೋಗಿ ಗ್ಯಾಸ್ ಸಿಲಿಂಡರ್‌ಗೆ ನಾಗರಿಕ ತಿದ್ದುಪಡಿಯಲ್ಲಿ ನಿಗದಿಪಡಿಸಿರುವಂತೆ 5 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಸಿಲಿಂಡರ್‌ ಪೂರೈಕೆ ಮಾಡಬೇಕು. 5 ಕಿ.ಮೀಗಿಂತ ಹೆಚ್ಚಿನ ದೂರದ ಡೆಲಿವರಿಗೆ ಮಾತ್ರವೇ ಹೆಚ್ಚುವರಿ ಶುಲ್ಕವಿದ್ದು, ಪ್ರತಿ ಸಿಲಿಂಡರ್‌ ಅಥವಾ ಟ್ರಿಪ್‌ಗೆ 1.60 ಪೈಸೆ ಶುಲ್ಕ ವಿಧಿಸಬಹುದು. ಆದರೆ ಐದು ಕಿಲೋಮೀಟರ್‌ ಒಳಗೆ ಡೆಲಿವರಿ ಮಾಡಿದರೆ ನಿಮ್ಮ ಬಿಲ್‌ನಲ್ಲಿರುವ ಮೊತ್ತವನ್ನು ಮಾತ್ರವೇ ಪಾವತಿಸಬೇಕು.

good-news-for-lpg-users-delivery-extra-charge-removed-from-now-on

ದೂರು ಕೊಡುವುದು ಹೇಗೆ?

ಒಂದು ವೇಳೆ ಸಿಲಿಂಡರ್‌ ಪೂರೈಕೆ ಮಾಡುವಾಗ ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದರೆ ದೂರು ನೀಡಲು ಅವಕಾಶವೂ ಇದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ದೂರು ಕೊಡಬಹುದು ಅಥವಾ ಕಚೇರಿಯ ದೂರವಾಣಿ ಸಂಖ್ಯೆ 08172-268229ಗೆ ಕರೆ ಮಾಡಿಯೂ ದೂರು ನೀಡಬಹುದು. ನಿಮ್ಮ ತಾಲ್ಲೂಕಿನ ತಹಶೀಲ್ದಾರ್‌ ಕಚೇರಿಯಲ್ಲಿರುವ ಆಹಾರ ಶಾಖೆಯಲ್ಲೂ ದೂರು ಕೊಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+