ಕಸ್ಟಮ್ಸ್ ಇಲಾಖೆಯ ಸುಪರ್ದಿಯಲ್ಲಿದ್ದ 67.4 ಕೆಜಿ ಚಿನ್ನ ನಾಪತ್ತೆ!

Posted By:
Subscribe to Oneindia Kannada

ನವದೆಹಲಿ, ಡಿ 5: ವಿಮಾನನಿಲ್ದಾಣದಲ್ಲಿ ನಿಯಮ ಉಲ್ಲಂಘಿಸಿ ಚಿನ್ನ ಸಾಗಣೆ ಮಾಡುವ ಪ್ರಯಾಣಿಕರಿಗೆ ದಂಡ ವಿಧಿಸುವ ಕಸ್ಟಮ್ಸ್ ಇಲಾಖೆ ಮುಜುಗರಕ್ಕೀಡಾಗುವಂತಹ ವರದಿಯೊಂದು ಹೊರಬಿದ್ದಿದೆ.

ದಂಡದ ರೂಪದಲ್ಲಿ ಕಳೆದ ಏಳು ತಿಂಗಳಿನಿಂದ ಸಂಗ್ರಹಿಸಲಾಗಿದ್ದ 67.4 ಕೆಜಿ ಚಿನ್ನ ಇಲಾಖೆಯ ಸುಪರ್ದಿಯಿಂದ ನಾಪತ್ತೆಯಾಗಿದೆ. ಇಷ್ಟೂ ಬಂಗಾರ ನಾಪತ್ತೆಯಾಗಿರುವುದು ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಿಂದ. (ಚಿನ್ನ ಖರೀದಿ ಮೇಲೆ ನಿರ್ಬಂಧ)

Gold kept under Customs vaults missing in Delhi's IGI airport

ಕಳೆದ ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ಏಳು ತಿಂಗಳಲ್ಲಿ ಇಷ್ಟು ಬಂಗಾರ ನಾಪತ್ತೆಯಾಗಿದ್ದರೆ, ಕಳೆದ ಒಂದು ವರ್ಷದಲ್ಲಿ ನಾಪತ್ತೆಯಾಗಿರುವ ಬಂಗಾರದ ತೂಕ 130 ಕೆಜಿ. ಈ ಸಂಬಂಧ ಇದುವರೆಗೆ 47 ಕೇಸುಗಳು ದಾಖಲಾಗಿದ್ದು, ಎಲ್ಲವೂ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಗೆ ಸಂಬಂಧಿಸಿದ್ದಾಗಿದೆ.

ಕಳೆದ ನಾಲ್ಕು ವರ್ಷಕ್ಕೆ ಹೋಲಿಕೆ ಮಾಡಿದರೆ ನಾಪತ್ತೆ ಪ್ರಕರಣ ಈ ವರ್ಷವೇ ಅತಿಹೆಚ್ಚು ದಾಖಲಾಗಿರುವುದು. ಕೆಲವೊಂದು ಕೇಸಿನಲ್ಲಿ ಅಪ್ಪಟ ಬಂಗಾರವನ್ನೇ ಹೋಲುವಂತಹ ನಕಲಿ ಬಂಗಾರವನ್ನಿಟ್ಟು ಅಸಲಿಯನ್ನು ಲಪಟಾಯಿಸಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯದ ಸಿಬಿಇಸಿ (Central Board of Excise and Customs) ಇಲಾಖೆಯ ವ್ಯಾಪ್ತಿಗೆ ಬರುವ ಕಸ್ಟಮ್ಸ್ ಇಲಾಖೆಯಲ್ಲಿ ನಡೆದಿರುವ ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪ್ರಕರಣ ಹೆಚ್ಚಾಗುತ್ತಿರುವುದನ್ನು ಕಸ್ಟಮ್ಸ್ ಇಲಾಖೆಯ ಹಿರಿಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ 8.83 ಲಕ್ಷ ರೂಪಾಯಿ ಮೌಲ್ಯದ ಚಿನ್ನ ನಾಪತ್ತೆಯಾಗಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳ ಮೇಲೆ FIR ದಾಖಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gold kept under Customs vaults missing in Delhi's IGI airport. During April to October 2016, a total of 67.4 kg of gold has been deemed to have disappeared.tags: gold, airport, new delhi, missing
Please Wait while comments are loading...