ಹಿಂದಿನ ಜನ್ಮದಲ್ಲಿ ನೀನು ನನ್ನ ಪತ್ನಿಯೆಂದು ಸ್ವಾಮೀಜಿಯಿಂದ ಅತ್ಯಾಚಾರ!

Posted By:
Subscribe to Oneindia Kannada

ಮುಂಬೈ, ನ 9: ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹಿಂದಿನ ಜನ್ಮದಲ್ಲಿ ನೀನು ನನ್ನ ಪತ್ನಿಯಾಗಿದ್ದೆ ಎಂದು ಸ್ವಯಂಘೋಷಿತ ದೇವಮಾನವನೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಈಗ ಈ ಘಟನೆಯಿಂದ ಹೊರಬರಲು ಕೋರ್ಟ್ ಮೊರೆಹೋಗಿದ್ದಾನೆ.

ಮೌಖಿಕ ಲೈಂಗಿಕತೆ ಅತ್ಯಾಚಾರವೆ? ನಿರ್ಧರಿಸಲಿದೆ ಕೋರ್ಟ್

ಅಸ್ಸಾಂನ ಗುವಹಾಟಿ ಮೂಲದ ಸಲೀಲ್ ಜೇದಿಯಾ ಎನ್ನುವ ದೇವಮಾನವ, ನನ್ನನ್ನು ಎರಡು ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದಾನೆ ಎಂದು ಥಾಣೆ ಮೂಲದ 37ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

Godman accused of raping woman claims she is wife from past life

2015ರಲ್ಲಿ ಕ್ಯಾನ್ಸರ್ ಪೀಡಿತ ತಂದೆಗೆ ಯಾವ ರೀತಿಯ ಚಿಕಿತ್ಸೆ ಕೊಡಿಸಿದರೆ ಅದು ಫಲಕಾರಿಯಾಗಬಹುದು ಎಂದು ಸಾಮಾಜಿಕ ತಾಣದಲ್ಲಿ ಹುಡುಕುತ್ತಿದ್ದಾಗ ಸಂಪರ್ಕಕ್ಕೆ ಬಂದ ದೇವಮಾನವ, ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿಕೊಂಡ ಎಂದು ಮಹಿಳೆ ದೂರಿದ್ದಾರೆ.

ಕ್ಯಾನ್ಸರ್ ಯಾವ ಹಂತದಲ್ಲಿದ್ದರೂ ಅದಕ್ಕೆ ನನ್ನಲ್ಲಿ ಪರಿಹಾರವಿದೆ, ಸಾಯಿಬಾಬಾನ ಪರಮಭಕ್ತನಾದ ನನ್ನಲ್ಲಿ ಅಲೌಕಿಕ ಶಕ್ತಿಯಿದೆ ಎಂದು ಮೂರು ಲಕ್ಷ ರೂಪಾಯಿ ನನ್ನಿಂದ ಇದುವರೆಗೆ ತೆಗೆದುಕೊಂಡಿದ್ದಾನೆ.

ಜೊತೆಗೆ, ಹೋದ ಜನ್ಮದಲ್ಲಿ ನೀನು ನನ್ನ ಪತ್ನಿಯಾಗಿದ್ದೆ ಎಂದು ನನ್ನನ್ನು ಅಸ್ಸಾಂನ ಕಾಮಾಕ್ಯ ದೇವಾಲಯ ಮತ್ತು ದೆಹಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ, ಪೊಲೀಸರಲ್ಲಿ ನೋವು ತೋಡಿಕೊಂಡಿದ್ದಾರೆ.

ಮಹಿಳೆಯನ್ನು ಅತ್ಯಾಚಾರವೆಸಗಿ ಅದನ್ನು ವಿಡಿಯೋ ಮಾಡಿಕೊಂಡಿರುವ ದೇವಮಾನವ ಆಲಿಯಾಸ್ ಸಲೀಲ್ ಜೇದಿಯಾನಿಗೆ ಯಾವ ಕಾರಣಕ್ಕೂ ಕೋರ್ಟ್ ಕ್ಷಮೆನೀಡಬಾರದು. ಅಸಂಖ್ಯಾತ ಹಿಂಬಾಲಕರನ್ನು ಹೊಂದಿರುವ ಈತನನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಬೇಕೆಂದು, ಮಹಿಳೆಯ ಪರ ವಕೀಲರು ಕೋರ್ಟಿನಲ್ಲಿ ಅವಲತ್ತು ತೋಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A self-proclaimed godman from Guwahati, booked on charges of rape and supernatural powers to cure cancer, moved Thane sessions court to seek relief from arrest. Godman charged victim woman family Rs 3 lakh for various rituals to cure cancer and also told her that she was his wife from his previous life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ