ಮೂರನೇ ಬಾರಿಗೆ ಗೋವಾ ಸಿಎಂ ಆಗಿ ಪರಿಕ್ಕರ್ ಪ್ರಮಾಣ ವಚನ

Posted By:
Subscribe to Oneindia Kannada

ಪಣಜಿ, ಮಾರ್ಚ್ 14 : ಗೋವಾದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ಯಾರು ಸರ್ಕಾರ ರಚಿಸುತ್ತಾರೆ ಎಂಬ ಕುತೂಹಲಕ್ಕೆ ಇನ್ನೇನು ತೆರೆ ಬಿತ್ತು ಎನ್ನುವಷ್ಟರಲ್ಲೇ ಹೊರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿಗದಿಯಂತೆ ಮನೋಹರ್ ಪರಿಕ್ಕರ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಬೇಕಿದೆ.. ಈ ದಿನ ಎಲ್ಲಾ ಅಪ್ಡೇಟ್ಸ್ ಇಲ್ಲಿದೆ...

ಗೋವಾ ಫಲಿತಾಂಶ : 40 ಸ್ಥಾನಗಳು (ಬಹುಮತಕ್ಕೆ 21 ಬೇಕು): ಬಿಜೆಪಿ 13. ಕಾಂಗ್ರೆಸ್ 17, ಎನ್ ಸಿಪಿ 1, ಎಂಜಿಪಿ 3, ಜಿಎಫ್ಪಿ 3, ಇತರೆ 3

5.30: ಮೂರನೇ ಬಾರಿಗೆ ಗೋವಾ ಮುಖ್ಯಮಂತ್ರಿ ಆಗಿ ಮನೋಹರ್ ಪರಿಕ್ಕರ್ ಅವರಿಂದ ಪ್ರಮಾಣ ವಚನ ಸ್ವೀಕಾರ.

12.45 : ಬಹುಮತ ಸಾಬೀತುಪಡಿಸಲು ನಮಗೆ ಒಂದು ಅವಕಾಶ ಸಿಗಬೇಕಿದೆ. ಇದು ಪ್ರಜಾಪ್ರಭುತ್ವದ ಅಳಿವಿನ ಪ್ರಶ್ನೆ: ದಿಗ್ವಿಜಯ್ ಸಿಂಗ್.

12.30: ಮನೋಹರ್ ಪರಿಕ್ಕರ್ ಪ್ರಮಾಣ ವಚನ ಸಮಾರಂಭಕ್ಕೆ ತಡೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರದಂದು ತಳ್ಳಿ ಹಾಕಿದೆ.

12.00: ಮಾರ್ಚ್ 16ರಂದು ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತುಪಡಿಸಲು ಮನೋಹರ್ ಪರಿಕ್ಕರ್ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

11.45: ನಿಮ್ಮ (ಕಾಂಗ್ರೆಸ್) ಬಳಿ ಸರ್ಕಾರ ರಚನೆಗೆ ಬೇಕಾದ ಸ್ಥಾನಗಳಿಲ್ಲದ ಕಾರಣ ನಿಮಗೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿಲ್ಲ. ನೀವು ಕೂಡಾ ಸರ್ಕಾರ ರಚಿಸುವ ಯತ್ನವನ್ನು ಮಾಡಿಲ್ಲ ಎಂದು ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ತಮ್ಮ ಆದೇಶದಲ್ಲಿ ಹೇಳಿದರು.

ಗೋವಾದಲ್ಲಿಅತಂತ್ರ ವಿಧಾನಸಭೆ ಸ್ಥಿತಿ ಉಂಟಾದ ಹಿನ್ನಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಕಾಂಗ್ರೆಸಿಗೆ ಸರ್ಕಾರ ರಚಿಸಲು ರಾಜ್ಯಪಾಲೆ ಮೃದ್ದುಲಾ ಸಿನ್ಹಾ ಅವರು ಆಹ್ವಾನ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, ಎರಡನೇ ಸ್ಥಾನದಲ್ಲಿರುವ ಬಿಜೆಪಿ, ಪ್ರಾದೇಶಿಕ ಪಕ್ಷಗಳ ನೆರವಿನಿಂದ ಅಧಿಕಾರ ಸ್ಥಾಪಿಸಲು ಹಕ್ಕು ಮಂಡನೆ ಮಾಡಿದೆ.

Goa political drama Live: Cong MLAs to meet Governor shortly after CLP meet

ಈ ನಡುವೆ ಮನೋಹರ್ ಪರಿಕ್ಕರ್ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿಎಂ ಆಗಲು ಗೋವಾಕ್ಕೆ ಬಂದಿದ್ದಾರೆ.


ಕಾಂಗ್ರೆಸ್ ಪಕ್ಷದ ಶಾಸಕರನ್ನು ಒಟ್ಟು ಗೂಡಿಸಿ ದಿಗ್ವಿಜಯ್ ಸಿಂಗ್ ಅವರು ಶಾಸಕಾಂಗ ಸಭೆ ನಡೆಸಿದ್ದು, ನಂತರ ರಾಜ್ಯಪಾಲೆಯನ್ನು ಭೇಟಿ ಮಾಡಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Goa has been witnessing heavy political activity since Saturday. With the results throwing a hung assembly and the BJP managing to consolidated the required number to form the government, Manohar Parrikar is all set to return as the Chief Minister of Goa.
Please Wait while comments are loading...