ಗೋವಾ ಶಾಸಕನಿಂದ ರೇಪ್ ಕೇಸ್ : ಮಹಿಳಾ ಪೊಲೀಸರಿಂದ ತನಿಖೆ

Posted By:
Subscribe to Oneindia Kannada

ಗೋವಾ, ಮೇ 05: ಗೋವಾದ ಮಾಜಿ ಶಿಕ್ಷಣ ಸಚಿವ ಅತಾನಾಯಸಿಯೋ ಮಾನ್ಸರಾಟ್ ಅಲಿಯಾಸ್ ಬಾಬುಷ್ ಮಾನ್ಸರಾಟ್ ಅವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ಗುರುವಾರ ವರ್ಗಾಯಿಸಲಾಗಿದೆ. ಕ್ರೈಂ ಬ್ರ್ಯಾಂಚ್ ಪೊಲೀಸ್ ವಿಭಾಗದ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿದೆ.

ಕಾಂಗ್ರೆಸ್ ಮುಖಂಡ ಅತಾನಾಯಸಿಯೋ ಅವರು ತಮ್ಮ ಸೈಂಟ್ ಕ್ರೂಜ್ ಕ್ಷೇತ್ರದ ಅಪ್ರಾಪ್ತ ಬಾಲಕಿಯ ಮೇಲೆ ಮಾರ್ಚ್ ತಿಂಗಳಿನಲ್ಲಿ ಅತ್ಯಾಚಾರವರೆಸಗಿದ್ದಾರೆ ಎಂದು ಪಣಜಿ ಪೊಲೀಸ್ ಠಾಣೆಯಲ್ಲಿ ಬುಧವಾರ ತಡರಾತ್ರಿ ದೂರು ದಾಖಲಿಸಿಕೊಂಡು, ಎಫ್​ಐಆರ್ ಹಾಕಲಾಗಿತ್ತು. ಶಾಸಕ ಬಾಬುಷ್ ಅವರಿಗೆ ಸೇರಿದ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿದ್ದ ಬಾಲಕಿ ಮೇಲೆ ಅನೇಕ ಬಾರಿ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

Goa MLA minor rape case transferred to crime branch unit

ಬಾಬುಷ್ ವಿರುದ್ಧ ಐಪಿಸಿ ಸೆಕ್ಷನ್ 376, 342, 328, 370 ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಗೋವಾ ಮಕ್ಕಳ ಹಕ್ಕು ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಾಗಿದೆ.

ಆರೋಪ ತಳ್ಳಿ ಹಾಕಿದ ಬಾಬುಷ್: ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಬಾಬುಷ್ , ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಇದು ರಾಜಕೀಯ ಪಿತೂರಿ, ಆ ಬಾಲಕಿ ನನ್ನ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದದ್ದು ನಿಜ ಆದರೆ, ಕಳ್ಳತನದ ಆರೋಪದ ಮೇಲೆ ಆಕೆಯನ್ನು ಕೆಲಸದಿಂದ ಹೊರ ಹಾಕಲಾಯಿತು, ಹೀಗಾಗಿ ಆಕೆ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾಳೆ ಎಂದಿದ್ದಾರೆ.

ಕ್ರಿಮಿನಲ್ ಹಿನ್ನಲೆ: ಸೇಟ್ ಕ್ರೂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಆರೋಪದಿಂದ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಬಾಬುಷ್ ಮಗ ರೋಹಿತ್ ಸಹ 5 ವರ್ಷಗಳ ಹಿಂದೆ ಅಪ್ರಾಪ್ತ ಜರ್ಮನ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿತನಾಗಿ, ನಂತರ ದೋಷಮುಕ್ತನಾಗಿ ಬಿಡುಗಡೆಯಾಗಿದ್ದ (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The rape case involving former education minister and unattached Congress MLA Atanasio Monserrate has been transferred to the Women police station which functions under the crime branch, a senior police official said on Thursday.
Please Wait while comments are loading...