ಗೋವಾ ಬೀಚುಗಳಲ್ಲಿ ನೀರಾಟ ನಿಷೇಧ

ಪಣಜಿ, ಅ.30: ಮೋಜಿನ ಆಟಗಳ ತವರೆನಿಸಿರುವ ಗೋವಾದ ಕಡಲ ತೀರದಲ್ಲಿ ಈಗ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ರಷ್ಯಾ ಮೂಲದ ಮಹಿಳೆಯರು 'ವಾಟರ್ ಸ್ಪೋರ್ಟ್ಸ್' ಆಡುವಾಗ ಸಾವನ್ನಪ್ಪಿದ್ದರು, ಇದಾದ ಬೆನ್ನಲ್ಲೇ ಇಲ್ಲಿನ ಬಿಜೆಪಿ ಸರ್ಕಾರ ಬೀಚ್ ಗಳಲ್ಲಿ ಆಟೋಟಕ್ಕೆ ನಿಷೇಧ ಹೇರಿದೆ.

ಗೋವಾದ ಮನೋಹರ್ ಪಾರಿಕ್ಕರ್ ಅವರ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದ್ದು, ರಷ್ಯನ್ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಲಿದೆ. ಸದ್ಯಕ್ಕೆ ರಾಜ್ಯದ ಎಲ್ಲಾ ಸಮುದ್ರಗಳಲ್ಲಿ 'ಜಲಕ್ರೀಡೆ' ಗೆ ನಿಷೇಧ ಹೇರಲಾಗಿದೆ. ಅಕ್ರಮವಾಗಿ ಮೋಟರ್ ಸ್ಪೋರ್ಟ್ಸ್ ಆಯೋಜಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿದೆ. [ಬೀಚಿನಲ್ಲಿ ಈಜಾಟವಾಡಿದರೆ, ಸಾವು ನಿಮಗೆ]

Goa govt suspends water sports after death of Russian tourists

ರಷ್ಯಾ ಮೂಲದ ಮೂವರು ಪ್ರವಾಸಿ ಮಹಿಳೆ ಪಣಜಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಬೆಟುಲ್ ಗ್ರಾಮದ ಬಳಿ ಜಲ ಕ್ರೀಡೆಯಲ್ಲಿ ತೊಡಗಿದ್ದಾಗ ಅವರಿದ್ದ ಬೋಟು ಮಗಚಿಕೊಂಡಿದೆ. ಸರಿಯಾದ ಸುರಕ್ಷತ ಕ್ರಮಗಳನ್ನು ಅನುಸರಿಸದೆ, ಜಲ ಕ್ರೀಡೆ ಆಯೋಜಿಸಲು ಪರವಾನಗಿ ಪಡೆಯದೆ ಇರುವ ಅನೇಕ ಮೋಟರ್ ಸ್ಪೋರ್ಟ್ಸ್ ಸಂಸ್ಥೆಗಳು ನಾಯಿಕೊಡೆಯಂತೆ ಗೋವಾದಲ್ಲಿ ಹುಟ್ಟಿಕೊಂಡಿವೆ.[ಗೋವಾದಲ್ಲಿ ರಾಮಸೇನೆಗೆ ನಿಷೇಧ]

ಮಂಗಳವಾರದಿಂದ ಜಾರಿಗೊಳ್ಳುವಂತೆ ಎಲ್ಲಾ ಮೋಟರ್ ಸ್ಪೋರ್ಟ್ಸ್ ಕಂಪನಿಗಳು ತಮ್ಮ ಚಟುವಟಿಕೆಗಳನ್ನು ಬಂದ್ ಮಾಡುವಂತೆ ಗೋವಾ ಸರ್ಕಾರ ಆದೇಶ ನೀಡಿದೆ. ಸುಮಾರು 1500ಕ್ಕೂ ಅಧಿಕ ಸಂಸ್ಥೆಗಳಿಗೆ ಬಂದರು ಇಲಾಖೆ ಲೈಸನ್ಸ್ ನೀಡಿದೆ. ಅದರೆ, ಈ ಸಂಸ್ಥೆಗಳಲ್ಲಿ ಅಕ್ರಮವಾಗಿ ನೇಮಕಾತಿ ನಡೆದಿರುವುದು ಕಂಡು ಬಂದಿದೆ.

ರಷ್ಯನ್ನರ ದುರಂತ ಸಾವಿಗೆ ಕಾರಣನಾದ ಬೋಟ್ ಚಾಲಕ ಕೂಡಾ ಬೋಟು ಚಲಿಸಲು ಲೈಸನ್ಸ್ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ. ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಲೈಫ್ ಜಾಕೆಟ್ ಇಲ್ಲದೆ ಚಾಲಕ ಬೋಟು ತೆಗೆದುಕೊಂಡು ಹೋಗಿದ್ದು ಅಪರಾಧ ಎಂದು ಬಂದರು ಇಲಾಖೆ ಮುಖ್ಯಸ್ಥ ಜೇಮ್ಸ್ ಬ್ರಗಾಂಜಾ ಹೇಳಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+