Email: ಇಮೇಲ್ ಬಳಸುವವರಿಗೆ ಶಾಕ್, ಈಗಲೇ ನಿಮ್ಮ ಪಾಸ್‌ವರ್ಡ್ ಚೇಂಜ್ ಮಾಡಿ!
ಈಗಿನ ತಂತ್ರಜ್ಞಾನ ಯುಗದಲ್ಲಿ ಜಿಮೇಲ್, ಇಮೇಲ್ ಬಳಸದೆ ಇರುವವರು ಕಡಿಮೆ ಮಂದಿ. ಇಂದು ವ್ಯವಹಾರ, ಮಾತುಕತೆಗೂ ಇಮೇಲ್‌ನ ಮೊರೆ ಹೋಗುತ್ತೇವೆ. ಕೋಟ್ಯಂತರ ರೂಪಾಯಿಗಳ ವ್ಯವಹಾರ ಈ ಮೇಲ್ ಮೂಲಕವೇ ನಡೆಯುತ್ತಿದೆ. ಇದೀಗ ಜಿಮೇಲ್ ಬಳಸುವವರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಜಗತ್ತಿನೆಲ್ಲೆಡೆ ಗೂಗಲ್ ಜಿಮೇಲ್ ಬಳಕೆದಾರರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಬರೋಬ್ಬರಿ 183 ಮಿಲಿಯನ್ ಜಿಮೇಲ್ ಇಮೇಲ್ ಮತ್ತು ಪಾಸ್‌ವರ್ಡ್‌ಗಳ ಡೇಟಾ ಸೋರಿಕೆಯಾಗಿರುವುದಾಗಿ ವರದಿಯಾಗಿದೆ.
ಈ ಡೇಟಾ ಸೋರಿಕೆ ಏಪ್ರಿಲ್ ತಿಂಗಳಲ್ಲಿ ಸಂಭವಿಸಿದ್ದು, ಟ್ರ್ಯಾಕಿಂಗ್ ವೆಬ್‌ಸೈಟ್ ಇದನ್ನು ಗಮನಿಸಿದೆ. ಸೋರಿಕೆಯಾದ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಬಳಸಿ ಹ್ಯಾಕರ್‌ಗಳು ಬಳಕೆದಾರರ ಜಿಮೇಲ್ ಮತ್ತು ಇನ್ನಿತರೆ ಬ್ಯಾಂಕ್, ಶಾಪಿಂಗ್, ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಪ್ರವೇಶಿಸುವ ಅಪಾಯ ಇದೆ ಎಂದು ಎಚ್ಚರಿಸಲಾಗಿದೆ. ಈ ಸೋರಿಕೆಯೊಂದಿಗೆ ತಮ್ಮ ಮೇಲ್ ಐಡಿಯಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಸುತ್ತಿದ್ದರೆ, ಎಲ್ಲಾ ಖಾತೆಗಳು ಕೂಡ ಅಪಾಯದಲ್ಲಿದೆ ಎಂದು ಹೇಳಲಾಗುತ್ತಿದೆ.

ಬಳಕೆದಾರರು ತಕ್ಷಣವೇ ತಮ್ಮ ಜಿಮೇಲ್ ಪಾಸ್‌ವರ್ಡ್ ಕೂಡಲೇ ಬದಲಾವಣೆ ಮಾಡಬೇಕು. ಎರಡು ಹಂತದ ದೃಢೀಕರಣ ಆಕ್ಟಿವೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ನಿಮ್ಮ ಅಕೌಂಟ್ ಡೇಟಾ ಸೋರಿಕೆಯಾಗಿದ್ದರೆ ಅದನ್ನು ಕೂಡ ಪತ್ತೆಹಚ್ಚಬಹುದಾಗಿದೆ. ತಕ್ಷಣವೇ ಬಲವಾದ, ವಿಶಿಷ್ಟ ಪಾಸ್‌ವರ್ಡ್ ಬದಲಿಸುವಂತೆ ಸೂಚನೆ ನೀಡಲಾಗಿದೆ. ಸೈಬರ್ ತಜ್ಞರು ಮುಂದಿನ ಹಂತಗಳಲ್ಲಿ ಹೆಚ್ಚು ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ. ಪಾಸ್‌ವರ್ಡ್ ಬದಲಾವಣೆ ಮತ್ತು ಎರಡು ಹಂತದ ದೃಢೀಕರಣ ಪ್ರತಿಯೊಬ್ಬರೂ ಸಕ್ರಿಯಗೊಳಿಸಬೇಕು. ಹೆಚ್ಚಿನ ಸುರಕ್ಷತೆಗಾಗಿ ಹಳೆಯ ಪಾಸ್‌ವರ್ಡ್ ಬಳಕೆ ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸದ್ಯ 183 ಮಿಲಿಯನ್ ಜಿಮೇಲ್ ಇಮೇಲ್ ಹಾಗೂ ಪಾಸ್‌ವರ್ಡ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದು ಗೂಗಲ್ ಜಿಮೇಲ್ ಹಾಗೂ ಅನೇಕ ಖಾತೆಗಳಿಗೆ ಅಪಾಯ ಉಂಟುಮಾಡಿದೆ. ಈ ಸಂಗ್ರಹಿತ ಡೇಟಾ ಒಂದು ದೊಡ್ಡ ಹ್ಯಾಕ್‌ನಿಂದ ಬಂದಿದೆ. ಇದನ್ನು ಹಲವು ವೆಬ್‌ಸೈಟ್‌ಗಳಿಂದ ಸಂಗ್ರಹಿಸಿರುವುದು ಪತ್ತೆಯಾಗಿದೆ.
ಬಳಕೆದಾರರ ಖಾತೆಯು ಹ್ಯಾಕ್ ಆಗಿದ್ದರೆ, ಸರಳವಾದ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಬಳಕೆದಾರರು ತಮ್ಮ ಜಿಮೇಲ್ ಪಾಸ್‌ವರ್ಡ್ ಅನ್ನು ಬದಲಾಯಿಸಲು ಮತ್ತು ಎರಡು ಅಂಶಗಳ ದೃಢೀಕರಣ ಹೊಂದುವಂತೆ ಸೂಚಿಸಲಾಗುತ್ತಿದೆ. ಈ ಎರಡು-ಹಂತದ ದೃಢೀಕರಣವು ನಿಮ್ಮ ಖಾತೆಗೆ ಹೆಚ್ಚುವರಿ ಭದ್ರತೆ ನೀಡುತ್ತದೆ. ಇದರಿಂದಾಗಿ ಬಳಕೆದಾರರ ಪಾಸ್‌ವರ್ಡ್ ಕದ್ದ ಹ್ಯಾಕರ್ ಕೂಡ ಅದರ ಮೂಲಕ ಪ್ರವೇಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಎಚ್ಚರವಾಗಿರುವಂತೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸೋರಿಕೆಯಾದ ಪಾಸ್‌ವರ್ಡ್‌ಗಳಿಂದ ಹ್ಯಾಕರ್‌ಗಳು ಬಳಸಿದಲ್ಲಿ, ನಿಮ್ಮ ಇಮೇಲ್ ಮಾತ್ರವಲ್ಲದೆ ನೀವು ನಿಭಾಯಿಸುವ ಆ್ಯಪ್‌ಗಳು, ಬ್ಯಾಂಕ್ ಮತ್ತು ಇತರೆ ಖಾತೆಗಳಿಗೂ ಅಪಾಯವಿದೆ. ಒಂದೇ ಪಾಸ್‌ವರ್ಡ್‌ನಿಂದ ಅನೇಕ ಖಾತೆಗಳು ಗರಿಷ್ಠ ಅಪಾಯದಲ್ಲಿದೆ ಎಂದು ಎಚ್ಚರಿಸಲಾಗಿದೆ.












Click it and Unblock the Notifications