25 ವರ್ಷಗಳ ಹಿಂದಿನ ಜಾಗತೀಕರಣದಿಂದ ಸದೃಢ ಆರ್ಥಿಕತೆ: ಸಿಂಗ್
ನವದೆಹಲಿ, ಸೆಪ್ಟೆಂಬರ್ 23: ಇಪ್ಪತ್ತೈದು ವರ್ಷಗಳ ಹಿಂದೆ ಭಾರತದ ಆರ್ಥಿಕತೆಯು ಜಾಗತೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡ ನಂತರವೇ ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆಯಲು ಸಹಾಯವಾಯಿತು ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ವಿತ್ತ ಸಚಿವ ಮನಮೋಹನ್ ಸಿಂಗ್ ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಶನಿವಾರ (ಸೆ. 23) ನಡೆದ 'ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಲೀಡರ್ ಶಿಪ್ ಸಮ್ಮೇಳನ 2017' ಮಾತನಾಡಿದ ಅವರು, ''ಜಾಗತೀಕರಣವು ಮಾರ್ಪಾಟು ಮಾಡಲಾಗದ್ದು. ಅಂದು ಭಾರತದ ಆರ್ಥಿಕತೆ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ನಾವು (1991ರಲ್ಲಿ ಮನಮೋಹನ್ ಸಿಂಗ್ ಅವರು ವಿತ್ತಮಂತ್ರಿಯಾಗಿದ್ದಾಗಲೇ ಭಾರತವು ಡಬ್ಲ್ಯೂಟಿಒ ಒಪ್ಪಂದಕ್ಕೆ ಸಹಿ ಹಾಕಿತ್ತು) ಜಾಗತೀಕರಣಕ್ಕೆ ಮುನ್ನುಡಿ ಬರೆದಿದ್ದವು. 25 ವರ್ಷಗಳ ಹಿಂದೆ ಭಾರತದ ಆರ್ಥಿಕತೆ ಹೇಗಿತ್ತು, ಈಗ ಹೇಗಿದೆ ಎಂಬುದೇ ಇದಕ್ಕೆ ಸಾಕ್ಷಿ'' ಎಂದು ಅವರು ತಿಳಿಸಿದರು.

ಜಾಗತೀಕರಣದ ಹಿನ್ನೆಲೆಯಲ್ಲಿ ನಾವು ಹೊಸ ಹೊಸ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿದಾಗ ಅನೇಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, 25 ವರ್ಷಗಳ ನಂತರ, ಅಂದು ನಾವು ಕೈಗೊಂಡಿದ್ದ ನಿರ್ಧಾರ ಫಲ ಕೊಟ್ಟಿದೆ. ಅಂದು ಟೀಕಿಸಿದ್ದವರೂ ಇಂದು ಆ ನಿರ್ಧಾರವನ್ನು ಶ್ಲಾಘಿಸುತ್ತಿದ್ದಾರೆ'' ಎಂದು ಅವರು ತಿಳಿಸಿದರು.












Click it and Unblock the Notifications