ಡಾಲರ್ ಮೌಲ್ಯ ಏರಿಕೆ, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ
Recommended Video

ನವದೆಹಲಿ, ಸೆಪ್ಟೆಂಬರ್ 28: ಒಂದೆಡೆ ಡಾಲರ್ ಎದುರು ರೂಪಾಯಿ ಬೀಳುತ್ತಿದ್ದರೆ ಮತ್ತೊಂದೆಡೆ ಚಿನ್ನದ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಆಗುತ್ತಲೇ ಇದೆ. ಕಳೆದ ಆರು ವಾರಗಳಲ್ಲೇ ಅತಿ ಕಡಿಮೆ ಮೊತ್ತಕ್ಕೆ ಚಿನ್ನದ ಬೆಲೆಯು ಇಂದು ಕುಸಿದಿದೆ.
ತಿಂಗಳ ಅವಧಿಯಲ್ಲಿ ಚಿನ್ನದ ಮೊತ್ತವು ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಆಗಿದ್ದು 20 ವರ್ಷಗಳಲ್ಲಿ ಇದೇ ಮೊದಲು. ಕಳೆದ ಒಂದು ತಿಂಗಳಿನಿಂದಲೂ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 1.6% ಇಳಿಕೆಯಾಗಿದೆ.
ಗುರುವಾರದ ಅಂತ್ಯಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1,182 ಡಾಲರ್ ಇತ್ತು. ಇದು ಆರು ವಾರದಲ್ಲಿ ಅತಿ ಕಡಿಮೆ ಬೆಲೆ ಆಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಕಳೆದ ಒಂದು ವಾರದಿಂದ 250 ರೂಪಾಯಿ ಇಳಿದಿದೆ.

ದೆಹಲಿಯಲ್ಲಿ ಶುದ್ಧ ಚಿನ್ನದ ಬೆಲೆ 10 ಗ್ರಾಂ ಗೆ 31,300 ರೂ ಇದ್ದರೆ. 99.5% ಶುದ್ಧ ಚಿನ್ನದ ಬೆಲೆ 31,150 ರೂಪಾಯಿ ಇದೆ. ಕಳೆದ ಎರಡು ದಿನದಲ್ಲಿ 175 ರೂಪಾಯಿ ಬೆಲೆ ಇಳಿದಿರುವುದು ಗಮನಾರ್ಹ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಸಹ ಜಾಗತಿಕ ಮಾರುಕಟ್ಟೆಯಲ್ಲಿ ಇಳಿದಿದೆ. ಕೆ.ಜಿಗೆ 450 ರೂಪಾಯಿ ಬೆಳ್ಳಿ ಬೆಲೆ ಕಡಿಮೆ ಆಗಿದೆ. ದೆಹಲಿಯಲ್ಲಿ ಬೆಳ್ಳಿ ಬೆಲೆ ಈಗ ಕೆ.ಜಿಗೆ 37,640 ಇದೆ.












Click it and Unblock the Notifications