ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಚಿಕಿತ್ಸೆ: ಜೀವರಕ್ಷಕ ಮಾತ್ರೆಯೊಂದಕ್ಕೆ 103 ರು ಮಾತ್ರ

|
Google Oneindia Kannada News

ಮುಂಬೈ, ಜೂನ್ 21: ಭಾರತದಲ್ಲಿ ಹೈಡ್ರೋಕ್ಸಿಕ್ಲೋರಿಕ್ವಿನ್ ನಂತರ ಹೆಚ್ಚು ಕೇಳಿ ಬಂದಿರುವ ಲಸಿಕೆ ಫಾವಿವಿರವಿರ್ (favipiravir). ಲಸಿಕೆ ಉತ್ಪಾದನೆ, ಮಾರಾಟ ಲೈಸನ್ಸ್ ಪಡೆದಿರುವ ಗ್ಲೆನ್ ಮಾರ್ಕ್ ಕಂಪನಿಯು ಮಾತ್ರೆಯ ದರ ನಿಗದಿ ಮಾಡಿದೆ.

Recommended Video

ಭಾರತೀಯ ಸೇನೆ ಸೇರಿಕೊಳ್ಳಲು ಮುಂದಾದ ನಾಗಸಾಧುಗಳು | NagaSadhus | Oneindia Kannada

ಭಾರತೀಯ ಡ್ರಗ್ ನಿಯಂತ್ರಕ(ಡಿಜಿಸಿಐ) ಅನುಮತಿ ಪಡೆದಿರುವ ಗ್ಲೆನ್ ಮಾರ್ಕ್, ಭಾರತದಲ್ಲೇ ಮಾತ್ರೆ ತಯಾರಿ, ಬಳಕೆ ಎಲ್ಲವೂ ತ್ವರಿತವಾಗಿ ಮಾಡಲಿದೆ. favipiravir 200 mg ಮಾತ್ರೆ ಯೊಂದಕ್ಕೆ 103 ರು ನಿಗದಿ ಪಡಿಸಲಾಗಿದೆ. ಗರಿಷ್ಠ ಮಾರಾಟ ಬೆಲೆ (MRP) 34 ಮಾತ್ರೆಗಳುಳ್ಳದ್ದಕ್ಕೆ 3500 ರುಪಾಯಿ ಬೆಲೆ ನಿಗದಿ ಮಾಡಲಾಗಿದೆ ಎಂದು ಗ್ಲೆನ್ ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಹೇಳಿದೆ

ಭಾರತದಲ್ಲಿ ಕೊವಿಡ್19 ಕೊಲ್ಲಲು ಈ ಲಸಿಕೆಯೇ ರಾಮಬಾಣ?ಭಾರತದಲ್ಲಿ ಕೊವಿಡ್19 ಕೊಲ್ಲಲು ಈ ಲಸಿಕೆಯೇ ರಾಮಬಾಣ?

ಹಿಮಾಚಲಪ್ರದೇಶದ ಬದ್ದಿ ಎಂಬಲ್ಲಿ ಇರುವ ಘಟಕದಲ್ಲಿ favipiravir ಉತ್ಪಾದನೆಯನ್ನು ಗ್ಲೆನ್ ಮಾರ್ಕ್ ಆರಂಭಿಸಿದೆ. ಭಾರತದಲ್ಲಿ 3,95,048 ಕೊರೊನಾ ಪ್ರಕರಣಗಳಿದ್ದು, 12,948 ಮಂದಿ ಸಾವನ್ನಪ್ಪಿದ್ದಾರೆ.

ಲಘು ಹಾಗೂ ಮಧ್ಯಮ ಪ್ರಮಾಣದ ಕೊವಿಡ್ 19 ಸೋಂಕಿತರಿಗೂ ಇದನ್ನು ಬಳಸಬಹುದಾಗಿದೆ. ಬಾಯಿ ಮೂಲಕ ಸೇವಿಸಬಹುದಾದ ಈ antiviral ಡ್ರಗ್ ವಿಶೇಷತೆಯಂದರೆ ಇಲ್ಲಿ ತನಕ ಈ ಡ್ರಗ್ ಬಳಸಿದವರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಪ್ರತಿ ರೋಗಿಗೆ 2 ಸ್ಟ್ರಿಪ್ ನಂತೆ ಮೊದಲ ತಿಂಗಳಿನಲ್ಲಿ 82,500 ರೋಗಿಗಳಿಗೆ ಈ ಔಷಧ ಒದಗಿಸಲು ಗ್ಲೆನ್ ಮಾರ್ಕ್ ಮುಂದಾಗಿದೆ.

ಕೊವಿಡ್ 19 ತೊಲಗಿಸುವ ಡ್ರಗ್

ಕೊವಿಡ್ 19 ತೊಲಗಿಸುವ ಡ್ರಗ್

ಜಪಾನ್ ಮೂಲದ ಈ ಮಾತ್ರೆಯನ್ನು ಕೋವಿಡ್ 19 ರೋಗಿಗಳಿಗೆ ನೀಡಿ ಕ್ಲಿನಕಲ್ ಟ್ರಯಲ್ ನಡೆಸಿ ಕಾರ್ಯ ಕ್ಷಮತೆ ಪರೀಕ್ಷಿಸಲಾಗುತ್ತಿದೆ. ಜಪಾನ್ ನ ಫ್ಯೂಜಿಫಿಲಂ ಹೋಲ್ಡಿಂಗ್ಸ್ ಕಾರ್ಪ್ ಸಂಸ್ಥೆ ಅವಿಗಾನ್(avigan) ಹೆಸರಿನಲ್ಲಿ favipiravir ಹೊರ ತಂದಿದ್ದು, ಜುಲೈ ವೇಳೆಗೆ ಸಂಪೂರ್ಣವಾಗಿ ಕೊವಿಡ್ 19 ತೊಲಗಿಸುವ ಡ್ರಗ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ರಷ್ಯಾದಲ್ಲಿ ಕೊವಿಡ್ 19 ಚಿಕಿತ್ಸೆಗೆ ಈ ಡ್ರಗ್

ರಷ್ಯಾದಲ್ಲಿ ಕೊವಿಡ್ 19 ಚಿಕಿತ್ಸೆಗೆ ಈ ಡ್ರಗ್

ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ ಪ್ರಮುಖವಾಗಿ ಕಾಣಿಸಿಕೊಂಡಿವೆ. 8.5 ಮಿಲಿಯನ್ ಜಾಗತಿಕವಾಗಿ ಸೋಂಕಿತರಿದ್ದು, 453,000 ಮಂದಿ ಮೃತರಾಗಿದ್ದಾರೆ. ಭಾರತದಲ್ಲಿ 12,948 ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟುತ್ತಿದ್ದಂತೆ ದೇಶದೆಲ್ಲೆಡೆ ಕೊವಿಡ್ 19 ಸೋಂಕಿತರ ಚಿಕಿತ್ಸೆಗೆ favipiravir ಡ್ರಗ್ ಬಳಸಲು ಅನುಮತಿ ನೀಡಲಾಯಿತು. ಭಾರತದಲ್ಲಿ favipiravir ಡ್ರಗ್ ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu ಹೆಸರಿನಲ್ಲಿ ದೊರೆಯಲಿದೆ. favipiravir ಹಾಗೂ umifenovir ಸಂಯೋಜಿಸಿ ಹೊಸ ಡ್ರಗ್ ತಯಾರಿಸಿ ಕೂಡಾ ಮಾರುಕಟ್ಟೆಗೆ ತರುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

2014ರಲ್ಲಿ ಜಪಾನಿಯರು ಬಂದ ಮಾತ್ರೆ

2014ರಲ್ಲಿ ಜಪಾನಿಯರು ಬಂದ ಮಾತ್ರೆ

2014ರಲ್ಲಿ ಜಪಾನಿಯರು ಮೊದಲಿಗೆ ಅವಿಫಾವಿರ್ ಮಾತ್ರೆಯನ್ನು ಕಂಡು ಹಿಡಿದು ಜ್ವರ ನಿವಾರಣೆಗಾಗಿ ಬಳಸತೊಡಗಿದರು. ಅಂದಿನಿಂದ ಇಲ್ಲಿ ತನಕ ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಹೀಗಾಗಿ, ಕೊವಿಡ್ 19 ರೋಗಿಗಳ ಕ್ಲಿನಿಕಲ್ ಟ್ರಯಲ್ ಬಳಕೆಗೂ ಸುರಕ್ಷಿತ ಹಾಗೂ ತ್ವರಿತಗತಿಯಲ್ಲಿ ಟ್ರಯಲ್ ಮುಗಿಸಬಹುದು ಎಂದು ಜಪಾನಿ ತಜ್ಞರು ಸೂಚನೆ ನೀಡಿದ ಬಳಿಕ ರಷ್ಯನ್ನರು ಟ್ರಯಲ್ ಆರಂಭಿಸಿದರು. ರಷ್ಯಾ ಹಾಗೂ ಜಪಾನ್ ಜಂಟಿ ಸಹಯೋಗದಲ್ಲಿ ಕೊವಿಡ್ 19ಗೆ ಈ ಡ್ರಗ್ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಸಂಶೋಧನೆ, ಟ್ರಯಲ್ ನಡೆಸಲಾಗಿದೆ.

ಮಾತ್ರೆ ಬಳಕೆ ಮಾಡಲು ನಿಬಂಧನೆ

ಮಾತ್ರೆ ಬಳಕೆ ಮಾಡಲು ನಿಬಂಧನೆ

ಗ್ಲೆನ್ ಮಾರ್ಕ್ ಸಂಸ್ಥೆ ಲಸಿಕೆ/ಮಾತ್ರೆ ಬಳಕೆ ಮಾಡುವ ಮೊದಲು ಸೋಂಕಿತ ವ್ಯಕ್ತಿಯಿಂದ ಲಿಖಿತ ಒಪ್ಪಿಗೆ ಪಡೆದುಕೊಂಡಿರಬೇಕು. ಸೋಂಕಿತ ವ್ಯಕ್ತಿಗೆ 14ದಿನಗಳವರೆಗೆ ಮಾತ್ರ ಡ್ರಗ್ ನೀಡಬಹುದು. ಮೊದಲ ದಿನ 3600 mg, ಎರಡನೇ ದಿನ 1600 mg ಈ ರೀತಿ ಇಳಿಕೆ ಕ್ರಮದಲ್ಲೇ ನೀಡಬೇಕು. ಗರ್ಭಿಣಿ, ಬಾಣಂತಿ, ಕರುಳುಬೇನೆಯುಳ್ಳವರು, ಯೂರಿಕ್ ಆಮ್ಲ ಅಸಮತೋಲನವುಳ್ಳವರು.. ಹೀಗೆ ಮುಂತಾದ ದೇಹ ಪರಿಸ್ಥಿತಿಯುಳ್ಳವರಿಗೆ ನೀಡುವಂತಿಲ್ಲ.

ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ

ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ

favipiravir ಮೂಲ Anti viral ಡ್ರಗ್ ಆಧಾರ ಮೇಲೆ ಅವಿಫಾವಿರ್ ತಯಾರಾಗುತ್ತಿದ್ದು, 2014ರಿಂದ ಮುಖ್ಯವಾಗಿ ವಿಷಯ ಶೀತ ಜ್ವರಕ್ಕೆ ಬಳಸಲಾಗುತ್ತಿದೆ. ಸದ್ಯ ರಷ್ಯಾದಲ್ಲಿ ಕೊವಿಡ್ 19ಗೆ ಬಳಸಲು ಆರಂಭಿಸಿ ತಿಂಗಳು ಕೂಡಾ ಕಳೆದಿಲ್ಲ. ಸೈಡ್ ಎಫೆಕ್ಟ್ ಇಲ್ಲದಿರುವುದರಿಂದ 10 ದಿನಗಳ ಕ್ಲಿನಿಕಲ್ ಟ್ರಯಲ್ ಮಾತ್ರ ಮಾಡಲಾಗಿದೆ. ಈ ಡ್ರಗ್ ಪಡೆದ ರೋಗಿಗೆ 4 ದಿನಗಳಲ್ಲೇ ಸೋಂಕು ತೊಲಗಿದೆ. ಶೇ 80ರಷ್ಟು ಕಾರ್ಯಕ್ಷಮತೆಯನ್ನು ಇದು ಹೊಂದಿದೆ ಎಂದು ಮಾಸ್ಕೋ ವಿವಿಯಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿದ ಐಎಂ ಶೆಕೆನೊವ್ ಮೆಡಿಕಲ್ ವಿವಿ, ಲೊಮೊನೊಸೊವ್ ಮಾಸ್ಕೋ ವಿವಿ ವಿಜ್ಞಾನಿಗಳ ತಂಡ ಹೇಳಿದೆ. 10 ದಿನಗಳ ತನಕದ ಡೋಸೆಜ್ ಪೂರ್ಣಗೊಳಿಸಿದ ರೋಗಿಗಳಿಗೆ ಯಾವುದೇ ಸೋಂಕು, ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ.

English summary
Drug firm Glenmark Pharmaceuticals on Saturday said it has launched antiviral drug Favipiravir, under the brand name FabiFlu, for the treatment of patients with mild to moderate COVID-19 at a price of about Rs 103 per tablet. ಫಾವಿವಿರವಿರ್ (favipiravir).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X