ಕಪ್ಪು ಹಣದ ಬಗ್ಗೆ ತಿಳಿಸಿ, 5 ಕೋಟಿ ರುಪಾಯಿ ಜೇಬಿಗೆ ಇಳಿಸಿ!

ನವ ದೆಹಲಿ, ಜೂನ್ 01: ಬೇನಾಮಿ ಆಸ್ತಿ, ಕಪ್ಪು ಹಣದ ಬಗ್ಗೆ ಕರಾರುವಾಕ್ಕಾಗಿ ಮಾಹಿತಿ ನೀಡಿದರೆ ನೀವು ಕೋಟ್ಯಾಧಿಪತಿಯಾಗುವ ಅವಕಾಶವಿದೆ. ಒಂದು ಕೈ ನೋಡೇಬಿಡಿ.

ಹೌದು, ಬೇನಾಮಿ ಆಸ್ತಿ, ಬೇನಾಮಿ ವ್ಯವಹಾರಗಳ ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿ ನೀಡಿದರೆ ಮಾಹಿತಿ ಒದಗಿಸುವವರಿಗೆ ಸರ್ಕಾರ ಒಂದು ಕೋಟಿ ಇನಾಮು ನೀಡುತ್ತದೆ. ಅಷ್ಟೆ ಅಲ್ಲ, ಕಪ್ಪು ಹಣದ ಮಾಹಿತಿಯನ್ನು ಕರಾರುವಾಕ್ಕಾಗಿ ನೀಡಿದಲ್ಲಿ ಬರೋಬ್ಬರಿ 5 ಕೋಟಿ ರುಪಾಯಿ ನೀಡುತ್ತದೆ ಕೇಂದ್ರ ಸರ್ಕಾರ.

Give information about black money win 5 crore

ಕೇಂದ್ರ ನೇರ ತೆರಿಗೆ ಮಂಡಳಿಯು ಇಂದು ಈ ಪ್ರಕಟಣೆ ಹೊರಡಿಸಿದ್ದು, ವಿದೇಶಿಗರೂ ಒಳಗೊಂಡಂತೆ ಯಾವುದೇ ವ್ಯಕ್ತಿ ಬೇನಾಮಿ ಆಸ್ತಿ, ಕಪ್ಪು ಹಣದ ಬಗ್ಗೆ ಮಾಹಿತಿಯನ್ನು ಕಂದಾಯ ಇಲಾಖೆಯ ಜಂಟಿ ಆಯುಕ್ತ ಅಥವಾ ಹೆಚ್ಚುವರಿ ಆಯುಕ್ತರಿಗೆ ನೀಡಿದಲ್ಲಿ ಆ ವ್ಯಕ್ತಿಗೆ ಇನಾಮು ನೀಡುತ್ತದೆ ಇಲಾಖೆ.

ಈ ಹೊಸ ಯೋಜನೆಯು ಜನರಿಗೆ ಬೇನಾಮಿ ಆಸ್ತಿ, ಕಪ್ಪು ಹಣದ ವಿರುದ್ಧ ಹೋರಾಡಲು ಶಕ್ತಿ ನೀಡಲಿದ್ದು, ಭ್ರಷ್ಟಾಚಾರ ತಡೆಯುವಲ್ಲಿ ಸಾರ್ವಜನಿಕರ ಸಹಾಯ ಇಲಾಖೆಗೆ ಲಭ್ಯವಾಗಲಿ ಎಂಬ ಉದ್ದೇಶ ಹೊಂದಿದೆ.

ಈ ಮುಂಚೆಯೂ ಈ ರೀತಿ ಮಾಹಿತಿ ನೀಡಿದವರಿಗೆ ಇನಾಮು ಕೊಡುವ ನಿಯಮ ಇತ್ತಾದರೂ ಅದಕ್ಕೆ ತಿದ್ದುಪಡಿ ತಂದು ಹೆಚ್ಚಿನ ಮೊತ್ತ ನೀಡುವಂತೆ ಮಾಡಲಾಗಿದೆ. ಮಾಹಿತಿದಾರನ ಸುಳಿವು ಮತ್ತು ಆತನ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಕಂದಾಯ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+