ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ: ತಾಯಿ ಶವ ಮನೆಯಲ್ಲಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಹುಡುಗಿ

By Vanitha
|
Google Oneindia Kannada News

ತಿರುಪತಿ,ಮಾರ್ಚ್,23: ಹೆತ್ತ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ತಾಯಿಯ ಮಾತನ್ನಾದರೂ ಉಳಿಸಿಕೊಳ್ಳೋಣ ಎಂದು ಮನದಲ್ಲಿರುವ ತಾಯಿಯನ್ನು ಕಳೆದುಕೊಂಡ ಅಗಾಧ ನೋವನ್ನು ಬದಿಯಲ್ಲಿರಿಸಿ ಪರೀಕ್ಷೆ ಬರೆದು ಆಕೆಯ ಆತ್ಮಕ್ಕೆ ಶಾಂತಿ ತಂದಿದ್ದಾಳೆ ಎಸ್ಎಸ್ಎಲ್ ಸಿ ಹುಡುಗಿ.

ಆಂಧ್ರಪ್ರದೇಶದ ತಿರುಪತಿಯವಳಾದ ಜಯಶ್ರೀ ಎಂಬ ಬಾಲಕಿ ಮನೆಯಲ್ಲಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ತಾಯಿಯ ಆಸೆಯನ್ನು ಈಡೇರಿಸುವುದೇ ನನ್ನ ಮುಂದಿರುವ ಸವಾಲು ಎಂದು ಯೋಚಿಸುತ್ತಾ ಕಂಬನಿ ಗರೆಯುತ್ತಲೇ ಪರೀಕ್ಷೆ ಬರೆದು ಮುಗಿಸಿದ್ದಾಳೆ.['ಸಾಯೋದ್ರೊಳಗೆ ಒಂದು ಮಗುವಾದ್ರೂ ಎಸ್ಸೆಸ್ಸೆಲ್ಸಿ ಮಾಡಲಿ'!]

Girl loss mother hours before sslc exam, she faced exam in Tirupati

ಘಟನೆಯ ವಿವರ?

ಜಯಶ್ರೀ ಸೋಮವಾರ ಇರುವ ತನ್ನ ಜೀವನದ ತಿರುವು ಬದಲಾಯಿಸುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ತೆರಳಲು ತಯಾರಾಗುತ್ತಿದ್ದಳು. ಆಗ ತಾಯಿ ನಿರ್ಮಲಾ ಅಡುಗೆ ಮನೆಯಲ್ಲಿ ತಿಂಡಿ ತಯಾರಿಸುತ್ತಿದ್ದಾಗ ಎಕಾಏಕಿ ಪಾರ್ಶ್ವವಾಯು ಬಂದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.[ಸಿಂಗಪುರದಲ್ಲಿ ಕನ್ನಡ ಹುಡುಗಿಯ ಅಪರೂಪದ ಸಾಧನೆ]

ಪರೀಕ್ಷೆ ಬರೆಯಲು ಸಜ್ಜಾಗಿದ್ದ ಜಯಶ್ರೀಗೆ ಸಿಡಿಲು ಬಡಿದಂತಾಯಿತು. ಆದರೂ ಧೃತಿಗೆಡಲಿಲ್ಲ. ಶಿಕ್ಷಣದ ಮಹತ್ದದ ಬಗ್ಗೆ ತಾಯಿ ಆಡುತ್ತಿದ್ದ ಮಾತುಗಳನ್ನು ಆಲಿಸುತ್ತಿದ್ದ ಜಯಶ್ರೀ ತಾಯಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನಾನು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಬೇಕು ಎಂದು ಮನದಲ್ಲಿ ಗಟ್ಟಿ ನಿರ್ಧಾರ ಮಾಡಿ ಕಣ್ಣೀರುಗರೆಯುತ್ತಲೇ ಪರೀಕ್ಷೆ ಬರೆದು ಬಳಿಕ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಳೆ.

ತಾಯಿ ಸತ್ತ ದಿನ ಪರೀಕ್ಷೆ ಬರೆಯಲು ಹೋಗುವುದಾಗಿ ತಿಳಿಸಿದ ಜಯಶ್ರೀಗೆ ಸಂಬಂಧಿಕರು ತೀವ್ರ ವಿರೋಧ ಒಡ್ಡಿದರು. ಆದರೂ ಪರೀಕ್ಷೆಗೆ ತೆರಳಿದ ಆಕೆ ಮುಂದಿನ ಎಲ್ಲಾ ಪರೀಕ್ಷೆಗಳನ್ನು ಎದುರಿಸುವೆ. ನನ್ನ ತಾಯಿಯ ಕಡೆಯ ಆಸೆ ಈಡೇರಿಸುವೆ ಎಂದು ಹೇಳಿದ್ದಾಳೆ.

English summary
A Girl Jayashree loss mother Nirmala hours before sslc exam, she faced exam in Tirupathi, Andra pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X