ಗಿಗ್ ವರ್ಕರ್ಸ್ ಮಗುವಿನ ಸ್ಕೂಲ್ ಫೀಸ್ 1.5 ಲಕ್ಷ : ಇಡೀ ಫ್ಯಾಮಿಲಿ ಇನ್‌ಕಂ ಬದಲಾಯಿಸಿದ್ದು ಪತ್ನಿಯ ನಿರ್ಧಾರ
Gig Workers' Life: ಈಗೀಗ ಲಕ್ಷ ಲಕ್ಷ ಸಂಬಳ ಬಂದ್ರೂ ಬದುಕಲು ಕಷ್ಟ. ಕೈಯ್ಯಲ್ಲಿ ಏನೂ ದುಡ್ಡು ಉಳಿಯೋಲ್ಲ ಎನ್ನುವಂಥ ಹಲವು ಸುದ್ದಿಗಳು ಸೋಷಿಯಲ್ ಮಾಡಿಯಾದಲ್ಲಿ ಟ್ರೆಂಡ್ ಆಗುತ್ತಿರುತ್ತೆ. ಲಕ್ಷ ಸಂಪಾದಿಸಿದರೂ ನಯಾ ಪೈಸಾ ಎಮರ್ಜೆನ್ಸ್ ಫಂಡ್ ಅಂತ ಇಟ್ಟುಕೊಳ್ಳದ ಹಲವು ಮಂದಿಯನ್ನು ನೋಡಿರುತ್ತೇವೆ. ಆದರೆ, ಕೆಲವೊಂದು ಫ್ಯಾಮಿಲಿ ಹೆಣ್ಣು ಮಕ್ಕಳೇ ಇಡೀ ಸಂಸಾರವನ್ನು ತಮಗೆ ಬರೋ ಅಲ್ಪ ಪ್ರಮಾಣದ ಸಂಬಳದಲ್ಲಿಯೇ ಅಚ್ಚುಕಟ್ಟಾಗಿ ನಿಭಾಯಿಸುವುದು ಮಾತ್ರವಲ್ಲ, ಇಡೀ ಕುಟುಂಬ ವ್ಯವಸ್ಥೆಯನ್ನೇ ಬದಲಾಯಿಸುತ್ತಾರೆ. ಕಷ್ಟ ಅಂತ ಬಂದಾಗ ಬಳಸಲು ಇವರ ಕೈಯ್ಯಲ್ಲಿ ಹಣವೂ ಇರುತ್ತೆ. ಅಂಥ ಗಿಗ್ ವರ್ಕರ್ಸ್ ಆಗಿ ದುಡಿಯೋ ದಂಪತಿ ಕಥೆ ಇದು. ಇವರು ಪ್ರತಿಯೊಬ್ಬ ಲಕ್ಷ ಲಕ್ಷ ದುಡಿಯೋ ಕಾರ್ಪೋರೇಟ್ ಉದ್ಯೋಗಿಗಳಿಗೆ ಮಾದರಿ.

ಗೃಹಿಣಿ ಮನೆಯ ಎಲ್ಲ ಕೆಲಸ ಮಾಡುತ್ತಾರೆ, ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸ್ತಾರೆ ಅನ್ನೋದು ಗೊತ್ತಿರುವ ವಿಚಾರ. ಆದರೂ ಗಂಡ ಒಬ್ಬನೇ ದುಡಿಯುವುದರಿಂದ ನಮಗೆ ಬೇಕಾದ ರೀತಿಯಲ್ಲಿ ಹಣ ಖರ್ಚು ಮಾಡುವುದು, ಬೇಕಾದ ರೀತಿಯಲ್ಲಿ ಜೀವನ ನಡೆಸುವುದು ಸಾಧ್ಯವಾಗದೇ ಹೋಗಬಹುದು. ಈ ಸಂದರ್ಭದಲ್ಲಿ ಮನೆಯ ಮಹಿಳೆ ತೆಗೆದುಕೊಳ್ಳುವ ಒಂದು ನಿರ್ಧಾರ ಎಲ್ಲವನ್ನೂ ಬದಲಾಯಿಸಿಬಿಡಬಹುದು ಎಂಬುದಕ್ಕೆ ಇಲ್ಲಿದೆ ಬೆಸ್ಟ್ ಎಕ್ಸಾಂಪಲ್.
ಮನೆಯ ಚಿತ್ರಣ ಬದಲಾಯಿಸಿದ Gig worker ಒಂದು ನಿರ್ಧಾರ :
ಸ್ನ್ಯಾಬಿಟ್‌ನ ಹಿರಿಯ ನಿರ್ದೇಶಕ ಸಾಯಿ ಕಿರಣ್ ಸಿಂಗನಮಲ ಈ ಕಥೆಯನ್ನು ಲಿಂಕ್ಡ್‌ಇನ್‌ನಲ್ಲಿ ಶೇರ್ ಮಾಡಿದ್ದಾರೆ. ಅವರ ಪೋಸ್ಟ್ ಪ್ರಕಾರ, ನಾಲ್ಕು ತಿಂಗಳ ಹಿಂದೆ ಕಂಪನಿಗೆ ಸೇರಿದ್ದ ಮಹಿಳಾ ಉದ್ಯೋಗಿಯೊಬ್ಬರನ್ನು ಅವರು ಮಾತನಾಡಿಸಿದ್ದಾರೆ. ಮಹಿಳೆ ತಾನು ಕೆಲಸಕ್ಕೆ ಸೇರಿದ ಬಳಿಕ ತನ್ನ ಜೀವನದಲ್ಲಾದ ಬದಲಾವಣೆ ಬಗ್ಗೆ ಮುಕ್ತವಾಗಿ ಅನ್ನ ಕೊಡೋ ದಣಿ ಜೊತೆ ಹಂಚಿ ಕೊಂಡಿದ್ದಾರೆ. ಇವರ ಪತಿ ಆಟೋ ಡ್ರೈವರ್. ಹಾಗಾಗಿ ಅವರ ಗಂಡನ ದುಡಿಮೆಗೆ ತಕ್ಕಂತೆ ಎಲ್ಲವನ್ನೂ ಅಡ್ಜೆಸ್ಟ್ ಮಾಡಿಕೊಳ್ಳಬೇಕಾಗಿತ್ತು. ಬೇಕು ಎಂದಿದ್ದು ಯಾವುದೂ ಸಿಗುತ್ತಿರಲಿಲ್ಲ. ಹಾಗೇನಾದರೂ ಬೇಕಾ ಬಿಟ್ಟಿ ಖರ್ಚು ಮಾಡಿದರೆ ಮತ್ತೆ ಸಾಲದ ತಾಪತ್ರಯ. ಒಂದೊಂದು ಪೈಸೆಯನ್ನು ಯೋಚಿಸಿ ಖರ್ಚು ಮಾಡಬೇಕಾಗಿತ್ತು. ಆದರೆ ಈಗ ಹಾಗಲ್ಲ, ಈ ಮಹಿಳೆ ಕೆಲಸಕ್ಕೆ ಸೇರಿದ ಬಳಿಕ ಅವರ ಕುಟುಂಬದ ಚಿತ್ರಣವೇ ಬದಲಾಗಿದೆ. ಕುಟುಂಬದ ಆದಾಯ ಹೆಚ್ಚಾಗಿದೆ. ಇವರಿಬ್ಬರ ಸಂಬಳವನ್ನು ಸೇರಿಸಿದರೆ ತಿಂಗಳಿಗೆ 80,000 ರಿಂದ 1 ಲಕ್ಷ ರೂಪಾಯಿವರಗೆ ಆಗುತ್ತದೆ. ಹಾಗಾಗಿ ಯಾವ ಚಿಂತೆ, ಅಡ್ಜೆಸ್ಟ್‌ಮೆಂಟ್ ಇಲ್ಲದೆ ಮನೆ ನಡೆಸಿಕೊಂಡು ಹೋಗುವುದು ಸುಲಭವಾಗಿದೆ. ಇಷ್ಟು ಮಾತ್ರ ಅಲ್ಲ ಮಕ್ಕಳಿಗೆ ಒಳ್ಳೆಯ ಶಾಲೆಗೆ ಕಳುಹಿಸುವ ಶಕ್ತಿಯೂ ಈಗ ಇವರಿಗಿದೆ. ಹಾಗಾಗಿ ಮಕ್ಕಳು 1.5 ಲಕ್ಷ ರೂಪಾಯಿ ಫೀಸ್ ಇರುವ ಶಾಲೆಗೆ ಹೋಗುತ್ತಿದ್ದಾರೆ.
ಮಹಿಳೆಯರ ಗಳಿಕೆಯೇ ಕುಟುಂಬದ ಶಕ್ತಿ :
ನೀನು ದುಡಿದರೆ ಎಷ್ಟು ದುಡಿಯಬಹುದು. ಸುಮ್ಮನೆ ಮನೆ ನೋಡಿಕೊಂಡರೆ ಸಾಕು ಎನ್ನುವ ಮಾತನ್ನು ಬಹಳಷ್ಟು ಹೆಂಗಸರು ಕೇಳಿರುತ್ತಾರೆ. ಆದರೆ ಇದು ಎಲ್ಲ ಕಾಲದಲ್ಲೂ ಸರಿ ಅಲ್ಲವೇ ಅಲ್ಲ. ಮಹಿಳೆ ತಿಂಗಳಿಗೆ 30,000-40,000 ರೂಪಾಯಿ ಗಳಿಸಿದರೂ ಇಡೀ ಕುಟುಂಬದ ಜೀವನ ಶೈಲಿಯೇ (lifestyle) ಬದಲಾಗುವುದು ಎನ್ನುವುದನ್ನು ಸಾಯಿ ಕಿರಣ್ ಅವರು ಶೇರ್ ಮಾಡಿರುವ ಕತೆ ಹೇಳುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಮನೆಗೆ ಆರ್ಥಿಕ ಭದ್ರತೆ ಆ ಹಣವೇ ನೀಡುತ್ತದೆ. ಜೊತೆಗೆ ಮಹಿಳೆಯ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ಇಲ್ಲಿ ಕೆಲಸ ಅನ್ನುವುದು ಹಣದ ಪ್ರಯೋಜನ ಮಾತ್ರವಲ್ಲ ಅದನ್ನು ಮೀರಿಸುವಂಥದ್ದು. ದುಡಿಯುವ ಮಹಿಳೆಗೆ ಸಿಗುವ ಗೌರವವನ್ನು ಹಣದಿಂದ ಅಳೆಯಲು ಸಾಧ್ಯವೇ ಇಲ್ಲ. ಜೊತೆಗೆ ಕುಟುಂಬದ ಅನೇಕ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಆಕೆಯನ್ನು ಕೂಡಾ ಗಣನೆಗೆ ತೆಗೆದುಕೊಂಡೇ ತಗೋತಾರೆ.
ಸಿಕ್ಕಿದೆ ಪಾಸಿಟಿವ್ ರಿಯಾಕ್ಷನ್ :
ಈ ಸುದ್ದಿಗೆ ಸೋಶಿಯಲ್ ಮಿಡಿಯಾದಲ್ಲಿ (social media) ಪಾಸಿಟಿವ್ ರಿಯಾಕ್ಷನ್ ಸಿಕ್ಕಿದೆ. ಮಹಿಳೆಯರ ಉದ್ಯೋಗ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತುಂಬಾ ಜನ ಒಪ್ಪಿದ್ದಾರೆ. ಮಹಿಳೆ ದುಡಿದರೆ ಅದರ ಪರಿಣಾಮ ಕುಟುಂಬದ ಮುಂದಿನ ಪೀಳಿಗೆಯ ಮೇಲೆ ಆಗುತ್ತದೆ ಎಂದು ಕೆಲವರು ಹೇಳಿದ್ಧಾರೆ. ಉದ್ಯೋಗ ಬರೀ ಹಣ ಮಾತ್ರವಲ್ಲ, ಬದಲಿಗೆ ಆತ್ಮ ಗೌರವ, ಆತ್ಮವಿಶ್ವಾಸ ಮತ್ತು ಉತ್ತಮ ಭವಿಷ್ಯದ ಭರವಸೆಯನ್ನು ಕೂಡಾ ಕೊಡುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ.


Click it and Unblock the Notifications
