ಎ.ಸಿ. ಕ್ಯಾಬಿನ್ ಗಳಿಂದ ಹೊರಬನ್ನಿ, ಕೆಲ್ಸ ಮಾಡಿ: ಕೇಜ್ರಿ ಗುಡುಗು
ತುಕ್ಕು ಹಿಡಿದಿರುವ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ಅರವಿಂದ್ ಕೇಜ್ರಿವಾಲ್ ಅವರು, ತಮ್ಮ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೋಮಾರಿತನ ತೊರೆದು ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ.
ನವದಹೆಲಿ, ಮೇ 31: ಕೆಲಸ ಮಾಡದೇ ಸೋಮಾರಿಗಳಾಗಿರುವ ತಮ್ಮ ಸರ್ಕಾರದ ಅಧಿಕಾರಿಗಳ ವಿರುದ್ಧ ದೆಹಲಿ ಮುಖ್ಯಮಂತ್ರಿ ಗುಟುರು ಹಾಕಿದ್ದಾರೆ. ಈ ಎಲ್ಲಾ ಅಪಮಾನಗಳನ್ನು ಮೀರಿ ಮುಂದಿನ ವಿಧಾನಸಭೆ ಚುನಾವಣೆಯೊಳಗೆ ಪಕ್ಷಕ್ಕೊಂದು ಇಮೇಜ್ ತಂದುಕೊಡುವ ನಿಟ್ಟಿನಲ್ಲಿ ಕೇಜ್ರಿವಾಲ್ ಎಂದಿನಂತೆ ಪ್ರಯತ್ನ ಮುಂದುವರಿಸಿದ್ದಾರೆಂಬುದು ಅವರ ಈ ಆಣತಿಯಿಂದ ಸಾಬೀತಾಗಿದೆ.
ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳು ತಮ್ಮ ಹವಾ ನಿಯಂತ್ರಿತ ಕ್ಯಾಬಿನ್ ಗಳಿಂದ ಹೊರಬಂದು ಕೆಳ ಮಟ್ಟದ ಅಧಿಕಾರಿಗಳ ಜತೆ ಸಂಪರ್ಕ ಬೆಳೆಸಬೇಕು. ಚುರುಕಾಗಿ, ಅಚ್ಚುಕಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ತಾಕೀತು ಮಾಡಿದ್ದಾರೆ.[ಕಪಿಲ್ ಮಿಶ್ರಾ ಉಚ್ಛಾಟನೆಗೇಕೆ ಕೇಜ್ರಿ ಮುಂದಾಗುತ್ತಿಲ್ಲ?]

ಯಾವುದೇ ಕಾನೂನು, ಶಾಸನಗಳು ಜಾರಿಯಾಗಬೇಕಿದ್ದರೆ ಅಧಿಕಾರಿ ವರ್ಗದ ಸಹಕಾರ, ನಿಷ್ಠೆ ಬೇಕೇ ಬೇಕು. ಹಾಗಾಗಿ, ಅಧಿಕಾರಿಗಳು ತಮ್ಮ ಆಲಸ್ಯವನ್ನು ಬದಿಗೊತ್ತಿ ಬಂದು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.[ಅರವಿಂದ್ ಕೇಜ್ರಿವಾಲ್ ಒಬ್ಬ 420 : ಸುಬ್ರಮಣಿಯನ್ ಸ್ವಾಮಿ]
ಇತ್ತೀಚೆಗೆ, ತಮ್ಮ ಪಕ್ಷದಲ್ಲಿನ ಒಡಕು, ಖುದ್ದು ಆಮ್ ಆದ್ಮಿ ಪಾರ್ಟಿ (ಆಪ್) ಸರ್ಕಾರದ ಸಚಿವರುಗಳೇ ಹಗರಣಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಲ್ಲದೆ, ಖುದ್ದು ಅರವಿಂದ್ ಕೇಜ್ರಿವಾಲ್ ಅವರೇ ಲಂಚ ಆರೋಪಕ್ಕೆ ಗುರಿಯಾಗಿದ್ದರು.












Click it and Unblock the Notifications