ಅರವಿಂದ್ ಕೇಜ್ರಿವಾಲ್ ಒಬ್ಬ 420 : ಸುಬ್ರಮಣಿಯನ್ ಸ್ವಾಮಿ

ಎಎಪಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. 'ಕೇಜ್ರಿವಾಲ್ ಒಬ್ಬ ನಯವಂಚಕ, 420 ಬಹುಕಾಲ ಜೈಲಿನಲ್ಲಿ ಕಳೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ನವದೆಹಲಿ, ಮೇ 09: ಎಎಪಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. 'ಕೇಜ್ರಿವಾಲ್ ಬಹುಕಾಲ ಜೈಲಿನಲ್ಲಿ ಕಳೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಕೇಜ್ರಿವಾಲ್ ವಿರುದ್ಧ ತ್ರೀವವಾಗಿ ಟೀಕಿಸಿದ್ದು, 'ಕೇಜ್ರಿವಾಲ್ ಒಬ್ಬ ವಂಚಕ, ಒಬ್ಬ 420' ಎಂದಿದ್ದಾರೆ.

ಕೇಜ್ರಿವಾಲ್‌ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ಅಷ್ಟೇ ಅಲ್ಲ, ಮಾನನಷ್ಟ ನಷ್ಟ ಮೊಕದ್ದಮೆ ಸೇರಿದಂತೆ ಅನೇಕ ಕೇಸ್‌ಗಳನ್ನು ಕೇಜ್ರಿವಾಲ್ ಎದುರಿಸುತ್ತಿದ್ದಾರೆ.

Arvind Kejriwal will spend a long time in jail: Subramanian Swamy

ಕೇಜ್ರಿವಾಲ್ ಅವರು ಶೀಘ್ರದಲ್ಲೇ ಜೈಲು ಪಾಲಾಗಲಿದ್ದು, ಬಹುಕಾಲ ಜೈಲಿನಲ್ಲೇ ಕಾಲದೂಡಲಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಕೇಜ್ರಿವಾಲ್‌ ಅವರು ತಮ್ಮ ಸಂಪುಟದ ಸಚಿವ ಕಪಿಲ್ ಮಿಶ್ರಾರನ್ನು ಇತ್ತೀಚೆಗೆ ಸಂಪುಟದಿಂದ ವಜಾಗೊಳಿಸಿದ್ದರು. ಕೇಜ್ರಿವಾಲ್ ಅವರು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ರಿಂದ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಮಿಶ್ರಾ ಗಂಭೀರ ಆರೋಪ ಮಾಡಿದ್ದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಒದಗಿಸಿ, ಸಿಬಿಐಗೆ ಮಿಶ್ರಾ ಅವರು ದೂರು ನೀಡಿದ್ದಾರೆ.(ಎಎನ್ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+