Adani: ಭಾರತದ ಕಥೆ ನಾವೇ ಹೇಳಬೇಕು, ಬೇರೆಯವರು ಬರೆಯುವುದಕ್ಕೆ ಬಿಡಬಾರದು: ಅದಾನಿ
"ನಾವು ಯಾರೆಂದು ಹೇಳದಿದ್ದರೆ, ಇತರರು ನಾವು ಯಾರೆಂದು ಪುನಃ ಬರೆಯುತ್ತಾರೆ' ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ದೇಶ ಮತ್ತು ಉದ್ಯಮ ಕುರಿತು ಹೇಳಿದರು. ಭಾರತವು ಸಿನಿಮಾ, ಕಥೆ ಹೇಳುವಿಕೆ ಮತ್ತು ಹೊಸ ತಂತ್ರಜ್ಞಾನಗಳ ಮೂಲಕ ತನ್ನ ಜಾಗತಿಕ ನಿರೂಪಣೆ ತಾನೇ ರೂಪಿಸಬೇಕು ಎಂದು ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ನಡೆದ ವಿಸ್ಲಿಂಗ್ ವುಡ್ಸ್ ಇಂಟರ್‌ನ್ಯಾಷನಲ್‌ನಲ್ಲಿ ಮಾತನಾಡಿದ ಗೌತಮ್ ಅದಾನಿ, ಭಾರತವು ತನ್ನನ್ನು ವ್ಯಾಖ್ಯಾನಿಸಲು ವಿದೇಶಿಗಳಿಗೆ ಅವಕಾಶ ನೀಡುವುದನ್ನು ಬಿಡಬೇಕು. ನಮ್ಮ ಮೌನವು ನಮ್ರತೆ ಅಲ್ಲ, ಅದು ಶರಣಾಗತಿ'. ಗಾಂಧಿ ಮತ್ತು ಸ್ಲಮ್‌ಡಾಗ್ ಮಿಲಿಯನೇರ್‌ನಂತಹ ಸಿನಿಮಾಗಳನ್ನು ಅವರು ಉದಾಹರಣೆಯಾಗಿ ಹೇಳಿದರು. ದೇಶ ತನ್ನ ಕಥೆಯನ್ನು ಹೊಂದಲು ವಿಫಲವಾದರೆ ಬೇರೆಯವರು ವಾಸ್ತವದ ವ್ಯಂಗ್ಯಚಿತ್ರಗಳಿಂದ ಲಾಭ ಪಡೆಯಲು ಮುಂದಾಗುತ್ತಾರೆ. ಇತರರು ಭಾರತದ ಗುರುತನ್ನು ವ್ಯಾಖ್ಯಾನಿಸುವಂತೆ ಮಾಡುವುದನ್ನು ಬಿಡಬೇಕು ಎಂದು ತಿಳಿಸಿದರು.

ಕಥೆ ಹೇಳುವಿಕೆಯ ದ್ವಿಮುಖ ಶಕ್ತಿಯ ಬಗ್ಗೆ ಅದಾನಿ ಎಚ್ಚರಿಸಿದ್ದಾರೆ. ಸದ್ಯ "ನಿರೂಪಣೆ ಸಂಖ್ಯೆಗಳಿಗಿಂತ ವೇಗವಾಗಿ ಮಾರುಕಟ್ಟೆಗಳನ್ನು ಚಲಿಸಬಲ್ಲದು'. 2023ರ ಹಿಂಡೆನ್‌ಬರ್ಗ್ ವರದಿ ಉಲ್ಲೇಖಿಸಿದ ಅವರು, ಆ ವರದಿ ಮಾರುಕಟ್ಟೆ ಮೌಲ್ಯದಿಂದ ತಾತ್ಕಾಲಿಕವಾಗಿ 100 ಬಿಲಿಯನ್ ಡಾಲರ್ ಅಳಿಸಿಹಾಕಿದ್ದನ್ನು ಸ್ಮರಿಸಿದರು. ನಮ್ಮ ಮೂಲಭೂತ ಅಂಶಗಳು ಬದಲಾದದ್ದರಿಂದ ಅಲ್ಲ, ಆದರೆ ಸುಳ್ಳು ಕಥೆಗಳನ್ನು ಶಸ್ತ್ರವಾಗಿ ಬಳಸಲಾಗುತ್ತದೆ ಎಂದು ವಿವರಿಸಿದರು.
ಸದ್ಯ ಅದಾನಿ ಗುಂಪು ನಿರೂಪಣೆಯನ್ನು ಹೊಂದಿದೆ. ವರದಿ, ದಾಳಿಯ ಬಳಿಕವು ಹೆಚ್ಚು ಪ್ರಬಲವಾಗಿ ನಿಂತುಕೊಂಡಿದೆ. ಕೆಲವು ಘಟನೆಗಳು ದಶಕಗಳ ನಮ್ಮ ಪರಿಶ್ರಮವನ್ನು ಹಾಳು ಮಾಡಬಹುದು. ಆದರೆ ಸತ್ಯದ ಕಥೆಗಳು ಗ್ರಹಿಕೆಯ ಕಥೆಗಳನ್ನು ಮೀರುವಂತಾಗಬೇಕು. ಇಂದಿನ ಜಗತ್ತಿನಲ್ಲಿ ಸತ್ಯವನ್ನು ಜೋರಾಗಿ ಹೇಳಬೇಕು. ನೀವು ಮೌನವಾಗಿದ್ದಲ್ಲಿ ಇತರರಿಗೆ ನಿಮ್ಮ ಕಥೆ ಬರೆಯಲು ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು.
"ನಾವು ನಮ್ಮ ಕಥೆಯನ್ನು ದುರಹಂಕಾರದಿಂದಲ್ಲ, ವಿಶ್ವಾಸಾರ್ಹತೆಯಿಂದ ಹೇಳಬೇಕು, ಅದು ಪ್ರಚಾರವಾಗಬಾರದು, ಉದ್ದೇಶವಾಗಬೇಕು. ಒಂದು ವೇಳೆ ನಾವು ಯಾರೆಂದು ನಾವು ಹೇಳದಿದ್ದರೆ, ಇತರರು ಅದನ್ನು ಪುನಃ ಬರೆಯುತ್ತಾರೆ' ಎಂದು ಅದಾನಿ ಪುನರುಚ್ಚರಿಸಿದರು. ಅಮೆರಿಕಾದ ಟಾಪ್ ಗನ್, ಇಂಡಿಪೆಂಡೆನ್ಸ್ ಡೇ, ರ್ಯಾಂಬೋ, ಅಮೆರಿಕನ್ ಸ್ನೈಪರ್ ಮುಂತಾದ ಸಿನಿಮಾಗಳನ್ನು ಅವರು ಈ ವೇಳೆ ಉಲ್ಲೇಖಿಸಿದರು. ಈ ಚಿತ್ರಗಳು ಕೇವಲ ಮನರಂಜನೆಗೆಲ್ಲ, ಅವು ರಾಷ್ಟ್ರದ ಹೆಮ್ಮೆ, ಸೇನೆಯ ಶಕ್ತಿ ಮತ್ತು ಅಮೆರಿಕನ್ ಗುರುತನ್ನು ತೋರಿಸಲು ರೂಪಿಸಲಾದ ಕಾರ್ಯತಂತ್ರದ ಸಾಧನಗಳು ಎಂದರು.
ಪ್ರತಿಯೊಂದು ಜಾಗತಿಕ ಸೂಪರ್‌ಹಿಟ್ ಅಮೆರಿಕದ ಶಕ್ತಿ ಮಾತ್ರವಲ್ಲ. ಅದರ ನೈತಿಕ ಅಧಿಕಾರವನ್ನು ಸಹ ಪ್ರತಿಬಿಂಬಿಸುತ್ತದೆ. ಸೈನಿಕರು ಭೂಮಿಯನ್ನು ವಶಪಡಿಸಬಹುದು, ಆದರೆ ಕಥೆಗಾರರು ಮನಸ್ಸನ್ನು ವಶಪಡಿಸುತ್ತಾರೆ. "ಬಹುಕಾಲದಿಂದ, ಭಾರತದ ಧ್ವನಿ ನಮ್ಮ ಗಡಿಗಳಲ್ಲಿಗೆ ಮಿತವಾಗಿದೆ. ಪರಿಣಾಮವಾಗಿ, ಇತರರು ಪಕ್ಷಪಾತದಿಂದ ರೂಪಿಸಿರುವ ದೃಶ್ಯಗಳನ್ನು ತೋರಿಸಲಾಗುತ್ತದೆ. ಅದಾನಿ ಅವರು ಸ್ಲಮ್‌ಡಾಗ್, ಮಿಲಿಯನೇರ್ ಮತ್ತು ಗಾಂಧಿ ಸಿನಿಮಾಗಳನ್ನು ಉದಾಹರಣೆ ಕೊಟ್ಟರು. ಇಂದಿನ ಜಗತ್ತಿನಲ್ಲಿ ಸತ್ಯವನ್ನು ಜೋರಾಗಿ ಹೇಳಬೇಕು. ನಮ್ಮ ದುರ್ಬಲತೆಯು ಕಲ್ಪನೆಯಲ್ಲ, ಅದು ಹಿಂಜರಿಕೆಯಾಗಿದೆ ಎಂದು ಎಚ್ಚರಿಸಿದರು.
ಇನ್ನೂ ಕಥೆ ಹೇಳುವ ಶಕ್ತಿ ಎರಡು ಮುಖ ಹೊಂದಿದೆ. ಬಲವಾದ ಕೈ ರಾಷ್ಟ್ರವನ್ನು ರೂಪಿಸುತ್ತದೆ. ತಪ್ಪು ಕೈಗಳು ಕೇವಲ ಮನಸ್ಸನ್ನು ನಿಯಂತ್ರಿಸುತ್ತದೆ. ರಾಜ್ ಕಪೂರ್ ಮತ್ತು ಗುರುದತ್‌ಗಳ ಚಲನಚಿತ್ರಗಳಿಗೆ ಗೌರವ ಸಲ್ಲಿಸಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಸಿನೆಮಾದ ಪಾತ್ರವನ್ನು ಹೊಗಳಿದರು. ಪ್ರತಿ ಯೋಜನೆಗಳು ಉಕ್ಕಿನಿಂದ ಅಲ್ಲ, ಕಥೆಯಿಂದ ಶುರುವಾಗುತ್ತದೆ ಎಂದು ಕೆಲವು ಸಿನಿಮಾಗಳನ್ನು ಶ್ಲಾಘಿಸಿದರು.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳು ಸಿನೆಮಾವನ್ನು ಹೇಗೆ ಮರುರೂಪಿಸುತ್ತದೆ ಎಂಬುದನ್ನು ವಿವರಿಸಿದರು. ತ್ವರಿತ ಜಾಗತಿಕ ಬಿಡುಗಡೆ, ನೈಜ-ಸಮಯದಲ್ಲಿ ಕಥೆ ಹೇಳುವುದು, ವೈಯಕ್ತೀಕರಿಸಿದ ವಿಷಯಗಳ ಸಕ್ರಿಯಗೊಳಿಸುವುದೆಲ್ಲವನ್ನು ತಂತ್ರಜ್ಞಾನ ಒಳಗೊಂಡಿದೆ. ಭಾರತದ ಕಥೆಗಳನ್ನು ದೃಢತೆ ಮತ್ತು ಉದ್ದೇಶದಿಂದ ಹೇಳಲು ಇಂತಹ ಮಹತ್ವ ಎಐ ಸಾಧನಗಳನ್ನು ಬಳಸಬೇಕು. ವಿದ್ಯಾರ್ಥಿಗಳು ಸೃಜಶೀಲವಾಗಿ ಹೆಜ್ಜೆ ಹಾಕಿದರೆ ಅದು ಜಗತ್ತಿಗೆ ಶಕ್ತಿ ತರುತ್ತದೆ. "ನಾವು ಯಾರೆಂದು ತಿಳಿಸದಿದ್ದರೆ ಇತರರು ನಮಗೊಂದು ಹೊಸ ವ್ಯಾಖ್ಯಾನ ನೀಡಿಬಿಡುತ್ತಾರೆ. ಯುವ ಪೀಳಿಗೆಯು ಭಾರತಕ್ಕೆ ಅದರದ್ದೇ ಆದ ಧ್ವನಿ, ಹಾಡು ಮತ್ತು ಕಥೆಗಳನ್ನು ಮರಳಿ ನೀಡುವಂತಾಗಲಿ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.












Click it and Unblock the Notifications