ಗಣೇಶ ಚತುರ್ಥಿ 2022: ಶುಭ ಹಾರೈಸಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ
ನವದೆಹಲಿ ಆಗಸ್ಟ್ 31: ಇಂದು ದೇಶಾದ್ಯಂತ ಗಣೇಶ ಚತುರ್ಥಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಚತುರ್ಥಿಗೆ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಇಬ್ಬರೂ ನಾಯಕರು ದೇಶದ ನಾಗರಿಕರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಕೂಡಿರಲಿ ಎಂದು ಹಾರೈಸಿದ್ದಾರೆ.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ. 'ದೇಶದ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು. ಮಂಗಳಮೂರ್ತಿ ಗಣೇಶನು ಜ್ಞಾನ, ಸಾಧನೆ ಮತ್ತು ಅದೃಷ್ಟದ ಸಂಕೇತವಾಗಿದೆ. ಶ್ರೀ ಗಣೇಶನ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಸಂವಹನ ನಡೆಯಲಿ ಎಂದು ನಾನು ಬಯಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗಣೇಶ ಚತುರ್ಥಿಯ ಶುಭಾಶಯ ಕೋರಿದರು. ಅವರನ್ನು ಅಭಿನಂದಿಸಿ ಮೋದಿ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ದೇಶವಾಸಿಗಳಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಗಣೇಶ ಚತುರ್ಥಿಯ ಶುಭಾಶಯಗಳು. ಶ್ರೀ ಗಣೇಶನ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಬರೆದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎಲ್ಲಾ ದೇಶವಾಸಿಗಳಿಗೆ ಗಣೇಶ ಚತುರ್ಥಿಯ ಶುಭಾಶಯಗಳು. ಗಣಪತಿ ಬಪ್ಪಾ ಮೋರ್ಯಾ!' ಎಂದು ಬರೆದಿದ್ದಾರೆ.
यतो बुद्धिरज्ञाननाशो मुमुक्षोः, यतः सम्पदो भक्तसन्तोषिकाः स्युः।
— Narendra Modi (@narendramodi) August 31, 2022
यतो विघ्ननाशो यतः कार्यसिद्धिः, सदा तं गणेशं नमामो भजामः।।
गणेश चतुर्थी की ढेरों शुभकामनाएं। गणपति बाप्पा मोरया!
Best wishes on Ganesh Chaturthi. May the blessings of Bhagwan Shri Ganesh always remain upon us. pic.twitter.com/crUwqL6VdH
ಗಣೇಶ ಚತುರ್ಥಿಯ ಹಬ್ಬವನ್ನು ಪ್ರತಿ ವರ್ಷ ಭಾರತದಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಸಾವಿರಾರು ಭಕ್ತರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ದೇವಾಲಯಗಳು ಮತ್ತು ಗಣೇಶೋತ್ಸವಗಳಲ್ಲಿ ಸೇರು ಭಾಗಿಯಾಗುತ್ತಾರೆ. ಗಣೇಶ ಚತುರ್ಥಿಯನ್ನು ಗಣೇಶೋತ್ಸವ ಎಂದೂ ಕರೆಯುತ್ತಾರೆ. ಇದು ಒಂದು ದಿನದಿಂದ ಒಂದು ತಿಂಗಳವರೆಗೂ ನಡೆಯುತ್ತದೆ. ಚತುರ್ಥಿ ತಿಥಿಯಂದು ಗಣೇಶ ಹಬ್ಬ ಪ್ರಾರಂಭವಾಗುತ್ತದೆ. ಅನಂತ ಚತುರ್ದಶಿಯಂದು ಗಣೇಶೋತ್ಸವ ಮುಗಿಯುತ್ತದೆ. ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರು ಗಣೇಶನ ಭಕ್ತರು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಗಣೇಶನ ಜನ್ಮ ದಿನವನ್ನು ಆಚರಿಸುತ್ತಾರೆ.

ಜನರು ತಮ್ಮ ಮನೆಗಳಿಗೆ ಗಣೇಶನ ಮೂರ್ತಿಗಳನ್ನು ಇಡುತ್ತಾರೆ. ಉಪವಾಸ ಮಾಡಿ ಪೂಜೆ ಸಲ್ಲಿಸುತ್ತಾರೆ. ವಿವಿಧ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಈ ಹಬ್ಬದ ಸಮಯದಲ್ಲಿ ದೇವರನ್ನು ಪ್ರಾರ್ಥಿಸಿ ಮತ್ತು ಆಚರಣೆಗಳನ್ನು ಮಾಡುತ್ತಾರೆ.












Click it and Unblock the Notifications