ಇನ್ಮೇಲೆ ದೇಶದಲ್ಲಿ ಇಂಗ್ಲಿಷ್ ಬಳಕೆ ಇರಲ್ಲ... ಇಂಗ್ಲಿಷ್ ಮಾತನಾಡಿದ್ರೆ ನಾಚಿಕೆಪಡಬೇಕು!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಇಂಗ್ಲಿಷ್ ಮಾತನಾಡುವವರು ನಾಚಿಕೆಪಡುವ ದಿನಗಳು ಬರಲಿದೆ ಅಂತ ಹೇಳಿದ್ದು ಜನ ಸಖತ್ ಆಗಿಯೇ ಪ್ರಶ್ನೆ ಮಾಡುತ್ತಿದ್ದಾರೆ. ಇದರೊಂದಿಗೆ ನಿಮಗೆ ಮತ್ತು ನಿಮ್ಮ ಮಗ ಜಯ್ ಶಾ ಅವರಿಗೆ ಇಂಗ್ಲಿಷ್ ಬರಲಿಲ್ಲ ಎಂದಾದರೆ ಇಡೀ ದೇಶದಲ್ಲೇ ಯಾರಿಗೂ ಇಂಗ್ಲಿಷ್ ಬರಬಾರದೇ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನೂ ಬಿಹಾರದ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಅಮಿತ್ ಶಾ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದೂ ಚರ್ಚೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಗುರುವಾರದಿಂದಲೂ ಈ ವಿಚಾರವಾಗಿ ಭಾರೀ ಟ್ರೋಲ್ ಶುರುವಾಗಿದೆ. ಬಿಹಾರ ವಿಧಾನಸಭೆ ಚುನಾವಣೆಯ ಲೋಗೋ ಸಹ ಬದಲಾಗಲಿದೆ ಅಂತ ಹೇಳಲಾಗುತ್ತಿದೆ. ಕೆಲವು ಆಯ್ದ ಸುದ್ದಿಗಳು ಟ್ರೋಲ್‌ಗಳು ಇಲ್ಲಿವೆ.
ಭಾರತದಲ್ಲಿ ಇಂಗ್ಲಿಷ್ ಮಾತನಾಡುವವರು ಶೀಘ್ರದಲ್ಲೇ ನಾಚಿಕೆಪಡುತ್ತಾರೆ ಎಂದು ಅಮಿತ್ ಶಾ ಹೇಳುತ್ತಾರೆ. ಆದರೆ, ಗೌರವಾನ್ವಿತ ಪ್ರಧಾನಿ ಬಿಹಾರದ ಚುನಾವಣೆ ಸಭೆಗಳಲ್ಲಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡುತ್ತಾರೆ ಮತ್ತು ಮಾಜಿ ಬಿಸಿಸಿಐ ಮತ್ತು ಪ್ರಸ್ತುತ ಐಸಿಸಿ ಅಧ್ಯಕ್ಷರು ಭಾರತ ಮತ್ತು ವಿದೇಶಗಳಲ್ಲಿನ ಮಾಧ್ಯಮ ವೇದಿಕೆಗಳಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಮೊದಲು ನಿಮ್ಮ ಸ್ವಂತ ಜನರನ್ನು ಹೆಸರಿಸಿ ಅವಮಾನಿಸಲು ಪ್ರಾರಂಭಿಸಿ ಮತ್ತು ನಂತರ ಉಳಿದವರ ಬಗ್ಗೆ ಮಾತನಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

ದೀಪಂಕರ್ ಕುಮಾರ್ ದಾಸ್ ಎನ್ನುವವರು, ಇನ್ಮುಂದೆ ಅಮಿತ್ ಶಾ ಅವರ ಹೇಳಿಕೆಯಿಂದಾಗಿ ರಾಜಕೀಯ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಘೋಷಣೆ ~ 'ನಾ ಇಂಗ್ಲಿಷ್ ಬೋಲ್ ಪಾಯೇಂಗೆ, ನಾ ಬೋಲ್ನೆ ದೇಂಗೆ' 😂 ಇರಲಿದೆ. ಇಂಗ್ಲಿಷ್‌ನಲ್ಲಿ ಮಾತನಾಡಲ್ಲ, ಮಾತನಾಡುವುದಕ್ಕೂ ಬಿಡಲ್ಲ ಅಂತ ಬದಲಾಗಲಿದೆ. ಶೈಕ್ಷಣಿಕವಾಗಿ ಅಮಿತ್ ಜಿ, ನಿಮಗೆ ಇಂಗ್ಲಿಷ್ ಇಷ್ಟವಿಲ್ಲ ಎಂಬುದು ಸ್ಪಷ್ಟವಾಗಿದೆ, ಆದರೆ ನಿಮಗೆ ಗಣಿತ ಇಷ್ಟವೇ? 😂 ಎಂದು ಪ್ರಶ್ನೆ ಮಾಡಿದ್ದಾರೆ.
ಅರುಂಧತಿ ಎನ್ನುವವರು ಹೌದು ಜಯ್ ಅವರ ರೀತಿ ಇಂಗ್ಲಿಷ್ ಮಾತನಾಡಿದರೆ ಜನ ನಿಜಕ್ಕೂ ನಗಲಿದ್ದಾರೆ ಅಂತ ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರು ನಾವು ನಿಜವಾಗಿಯೂ ಭಾರತದಲ್ಲಿ ವಾಸಿಸುತ್ತಿದ್ದೇವೆಯೇ ಎಂದು ನನಗೆ ಆಶ್ಚರ್ಯವಾಗುತ್ತದೆ. 😬 ನಾವು ಇಂಗ್ಲಿಷ್‌ನಲ್ಲಿ ಮಾತನಾಡುವುದಿಲ್ಲವೇ? ಪ್ರಪಂಚದೊಂದಿಗೆ ಸಂವಹನ ನಡೆಸಲು ಬಳಸುವ ಜಾಗತಿಕ ಭಾಷೆ ಇಂಗ್ಲಿಷ್. ಭಾರತದ ಗೃಹ ಸಚಿವರಾಗಿ ಅಮಿತ್ ಶಾ ಅವರಿಗೆ ನಾಚಿಕೆಗೇಡು. ನಾವು ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದೇವೆಯೇ ಅಥವಾ ಏಕಸ್ವಾಮ್ಯ ಸರ್ಕಾರದ ಅಡಿಯಲ್ಲಿ ವಾಸಿಸುತ್ತಿದ್ದೇವೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
“Those who speak English in India will soon feel ashamed” – says Amit Shah.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 19, 2025
Manyavar @AmitShah, the Hon’ble PM delivers speeches in English at Bihar rallies and the ex-BCCI and current ICC President also speaks in English on media platforms in India and abroad.
Start naming… pic.twitter.com/o0yla1tqOw
ಹಿಂದಿ ಹೇರಿಕೆ ವಿಧಾನವೇ: ಈ ಹಿಂದೆ ಅಮಿತ್ ಶಾ ಅವರು ದೇಶಕ್ಕೆ ಒಂದು ಭಾಷೆ ಬೇಕು ಅಥವಾ ಹಿಂದಿ ಭಾಷೆ ಸಂಪರ್ಕ ಭಾಷೆಯಾಗಬೇಕು ಎಂಬರ್ಥದಲ್ಲಿ ಮಾತನಾಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ದಕ್ಷಿಣ ಭಾರತದಲ್ಲಿ ಅಮಿತ್ ಶಾ ಅವರ ಹೇಳಿಕೆ ವಿರೋಧಕ್ಕೆ ಕಾರಣವಾಗಿತ್ತು. ಇನ್ನು ಇದೀಗ ಅಮಿತ್ ಶಾ ಅವರು ಹೇಳಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ. ಇದು ಹಿಂದಿ ಹೇರಿಕೆಯ ಮತ್ತೊಂದು ವಿಧಾನವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications