ಸನ್ನಿ ಲಿಯೋನ್ ಸ್ವಾಗತ, ಕೇರಳ ವಿದ್ಯಾರ್ಥಿಗಳಲ್ಲಿ ಪುಳಕ

Posted By:
Subscribe to Oneindia Kannada

ಕೊಲ್ಲಂ, ಸೆಪ್ಟೆಂಬರ್ 15: ಕೇರಳ ಅಂದರೆ ಥಟ್ಟನೆ ನೆನಪಾಗೋದು ಅದ್ಭುತ ದೇವಾಲಯಗಳು, ಹಿನ್ನೀರು, ಕಥಕ್ಕಳಿ, ಶೇ ನೂರರಷ್ಟು ಸಾಕ್ಷರತೆ ಅದೂ ಇದು ಎಲ್ಲ ಸೇರಿಸಬಹುದು. ಈಗ ಹೊಸ ಸೇರ್ಪಡೆಯೊಂದು ಆಗಿದೆ. ಅದು ಕಾಲೇಜಿಗೆ ಬರುತ್ತಿರುವ ಹೊಸಬರನ್ನು ಸ್ವಾಗತಿಸುವ ಬ್ಯಾನರ್ ಡಿಸೈನ್ ನಲ್ಲಿ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಶ್ರೀ ನಾರಾಯಣ ಪಾಲಿಟೆಕ್ನಿಕ್ ನಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವುದಕ್ಕೆ ಬ್ಯಾನರ್ ವೊಂದನ್ನು ಹಾಕಿದ್ದು ಸದ್ಯಕ್ಕೆ ಸಕತ್ ಮಜಾ ಕೊಡುತ್ತಿದೆ. ಕೇರಳದ ಸಾಂಪ್ರದಾಯಿಕ ಸೀರೆಯುಟ್ಟು, ತಲೆಗೆ ಹೂವು ಮುಡಿದ ಪೋರ್ನ್ ಸ್ಟಾರ್ ಗಳಾದ (ಪೋಲಿ ಚಿತ್ರದ ಹೀರೋಯಿನ್ ಗಳು) ಮಿಯಾ ಖಲೀಫಾ ಹಾಗೂ ಸನ್ನಿ ಲಿಯೋನ್ ಕೈ ಮುಗಿಯುತ್ತಾ ಸ್ವಾಗತ ಕೋರುತ್ತಿರುವ ಬ್ಯಾನರ್ ಹಾಕಲಾಗಿದೆ. ಅದರ ಜತೆಗೆ ಬಿಳಿ ಬಣ್ಣದ ವ್ಯಕ್ತಿಯೊಬ್ಬ ಬೇರೆ ಕೈ ಮುಗಿಯುತ್ತಿರುವ ಚಿತ್ರವಿದೆ.[ರಾಷ್ಟ್ರಗೀತೆ ಹಾಡಿ ವಿವಾದಕ್ಕೆ ಸಿಲುಕಿದ ಸನ್ನಿ ಲಿಯೋನ್]

Freshers welcomed in Kerala by Sunny Leone

ಅಂದಹಾಗೆ ಈ ರೀತಿ ಆಲೋಚನೆಗೆ ನಕ್ಕವರೆಷ್ಟು ಮಂದಿಯೋ? ಸದ್ಯಕ್ಕೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸನ್ನಿಲಿಯೋನ್, ಪೋರ್ನ್ ಸ್ಟಾರ್ ಮಿಯಾ ಖಲೀಫಾ ಜತೆಗೆ ಇಂಥದೇ ಪೋಲಿ ಚಿತ್ರಗಳ ನಟ ಜಾನಿ ಸಿನ್ಸ್ ದೂ ಚಿತ್ರವಿದೆ. ಬ್ಯಾನರ್ ನಲ್ಲಿ "ವೆಲ್ ಕಂ ಫ್ರೆಶರ್ಸ್" ಎಂದು ಮಲಯಾಳಂನಲ್ಲಿ ಬರೆಯಲಾಗಿದೆ.[ಸನ್ನಿ ಲಿಯೋನ್ ಕಾಂಡೋಮ್ 'ಆಡ್' ವಿರುದ್ಧ ಸಮನ್ಸ್]

Sunny leone

ಈ ಬ್ಯಾನರ್ ನ ಫೋಟೋ ಮೊದಲು ಕಾಣಿಸಿಕೊಂಡಿದ್ದು ಫೇಸ್ ಬುಕ್ ನಲ್ಲಿ. ಇದನ್ನು ಕಂಡು ಎಷ್ಟೋ ಮಂದಿ, ನಮಗಿಂತ ವೆಲ್ ಕಂ ಸಿಗಲಿಲ್ಲವಲ್ಲ ಎಂದು ಹೊಟ್ಟೆ ಉರಿದುಕೊಂಡಿದ್ದಾರಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sree Narayana Polytechnic College in Kerala's Kollam district put up a banner to greet new batch of students that featured photos of Sunny Leone And Mia Khalifa, dressed in traditional saree and offering namaskaras with folded hand.
Please Wait while comments are loading...