ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

251ರೂಪಾಯಿಗೆ ಮೊಬೈಲ್ ಕೊಡುತ್ತೇನೆ ಎಂದವನಿಗೀಗ ಜೈಲೂಟ

‘ಫ್ರೀಡಂ 251’ ಹೆಸರಿನಲ್ಲಿ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಬುಕ್ಕಿಂಗ್ ತೆಗೆದುಕೊಂಡಿದ್ದ ರಿಂಗಿಂಗ್ ಬೆಲ್ ಕಂಪೆನಿ ನಿರ್ದೇಶಕ ಜೈಲು ಸೇರಿದ್ದಾನೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 25: 'ಫ್ರೀಡಂ 251' ಹೆಸರಿನಲ್ಲಿ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಬುಕ್ಕಿಂಗ್ ತೆಗೆದುಕೊಂಡಿದ್ದ ರಿಂಗಿಂಗ್ ಬೆಲ್ ಕಂಪೆನಿ ನಿರ್ದೇಶಕ ಜೈಲು ಸೇರಿದ್ದಾನೆ.

ಹಣ ನೀಡಿದರೂ ಮೊಬೈಲ್ ಫೋನ್ ನೀಡದ ಹಿನ್ನಲೆಯಲ್ಲಿ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿಯ ನಿರ್ದೇಶಕ ಮೋಹಿತ್ ಗೋಯಲ್ ನನ್ನು ಗಾಜಿಯಾಬಾದ್ ಪೊಲೀಸರು ಗುರುವಾರ ತಡ ರಾತ್ರಿ ಬಂಧಿಸಿದ್ದಾರೆ.[ಮೇಡ್ ಇನ್ ಇಂಡಿಯಾ ಫ್ರೀಡಂ 251ಗೆ ಕಾಪಿರೈಟ್ ಪ್ರಾಬ್ಲಂ!]

ಬೆಂಗಳೂರು, ಫೆಬ್ರವರಿ 25: ‘ಫ್ರೀಡಂ 251’ ಹೆಸರಿನಲ್ಲಿ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಬುಕ್ಕಿಂಗ್ ತೆಗೆದುಕೊಂಡಿದ್ದ ರಿಂಗಿಂಗ್ ಬೆಲ್ ಕಂಪೆನಿ ನಿರ್ದೇಶಕ ಜೈಲು ಸೇರಿದ್ದಾನೆ. ಹಣ ನೀಡಿದರೂ ಮೊಬೈಲ್ ಫೋನ್ ನೀಡದ ಹಿನ್ನಲೆಯಲ್ಲಿ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿಯ ನಿರ್ದೇಶಕ ಮೋಹಿತ್ ಗೋಯಲ್ ನನ್ನು ಗಾಜಿಯಾಬಾದ್ ಪೊಲೀಸರು ಗುರುವಾರ ತಡ ರಾತ್ರಿ ಬಂಧಿಸಿದ್ದಾರೆ. ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಫೆಬ್ರವರಿ 2016ರಲ್ಲಿ 251 ರೂಪಾಯಿಗೆ ಮೊಬೈಲ್ ನೀಡುವುದಾಗಿ ರಿಂಗಿಂಗ್ ಬೆಲ್ಸ್ ಕಂಪೆನಿ ಹೇಳಿತ್ತು. ಅಷ್ಟೆ ಅಲ್ಲದೆ ಮುಂಗಡ ಬುಕ್ಕಿಂಗ್ ಕೂಡಾ ಆರಂಭಿಸಿತ್ತು. ಜೂನಿನಲ್ಲಿ ಫೋನುಗಳನ್ನು ಡೆಲಿವರಿ ಮಾಡುವುದಾಗಿ ಕಂಪೆನಿ ಹೇಳಿಕೊಂಡಿತ್ತು. ಆದರೆ ಕೆಲವೇ ಗ್ರಾಹಕರಿಗಷ್ಟೆ ಕಂಪೆನಿ ಮೊಬೈಲ್ ಫೋನ್ ನೀಡಿತ್ತು. ಇನ್ನುಳಿದವರಿಗೆ ಫೋನ್ ನೀಡದ ಹಿನ್ನಲೆಯಲ್ಲಿ ವಂಚನೆ ಪ್ರಕರಣಗಳು ಕಂಪೆನಿ ವಿರುದ್ಧ ದಾಖಲಾಗಿದ್ದವು. ಈ ಕುರಿತು ಮೊಬೈಲ್ ವಿತರಣೆ ಕಂಪೆನಿ ಅಯಾಮ್ ಎಂಟರ್ ಪ್ರೈಸಸ್ ದೂರು ದಾಖಲಿಸಿತ್ತು. ನಾವು 30 ಲಕ್ಷ ರೂಪಾಯಿ ಹಣ ನೀಡಿದ್ದೇವೆ. ಇದರಲ್ಲಿ 14 ಲಕ್ಷ ರೂಪಾಯಿಯ ಮೊಬೈಲುಗಳನ್ನು ನೀಡಿ, ಉಳಿದಿದ್ದಕ್ಕೆ ಮೊಬೈಲ್ ನೀಡಿಲ್ಲ ನೀಡಿಲ್ಲ. ಹಣ ವಾಪಸ್ ನೀಡುವಂತೆ ಕೇಳಿದರೆ ನಮ್ಮ ಸಿಬ್ಬಂದಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಯಾಮ್ ದೂರಿನಲ್ಲಿ ತಿಳಿಸಿತ್ತು. ಅಯಾಮ್ ಎಂಟರ್ ಪ್ರೈಸಸ್ ನೀಡಿದ ದೂರಿನ ಆಧಾರದ ಮೇಲೆ ಮೋಹಿತ್ ಗೋಯಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಂಪೆನಿಯ ಇನ್ನೂ ನಾಲ್ವರು ನಿರ್ದೇಶಕರಾದ ಗೋಯಲ್ ಪತ್ನಿ ಅನ್ಮೋಲ್ ಗೋಯಲ್ ಹಾಗೂ ಧರ್ನಾ ಗರ್ಗ್, ಅಶೋಕ್ ಚಧಾ, ಸುಮಿತ್ ಕುಮಾರ್ ಗೆ ಬಲೆ ಬೀಸಿದ್ದಾರೆ. ಇದೇ ರೀತಿಯ ಹಲವು ಕಂಪ್ಲೆಂಟುಗಳು ಈತನ ವಿರುದ್ಧ ದಾಖಲಾಗಿವೆ ಎಂದು ಗಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ. ಕೋಟಿ ಕೋಟಿ ಹಣನುಂಗಿದ ಆಪಾದನೆ ರಿಂಗಿಂಗ್ ಬೆಲ್ ಕಂಪೆನಿಯ ಮೇಲಿದ್ದು ತನಿಖೆ ನಡೆಯುತ್ತಿದೆ.

ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ ಫೆಬ್ರವರಿ 2016ರಲ್ಲಿ 251 ರೂಪಾಯಿಗೆ ಮೊಬೈಲ್ ನೀಡುವುದಾಗಿ ರಿಂಗಿಂಗ್ ಬೆಲ್ಸ್ ಕಂಪೆನಿ ಹೇಳಿತ್ತು. ಅಷ್ಟೆ ಅಲ್ಲದೆ ಮುಂಗಡ ಬುಕ್ಕಿಂಗ್ ಕೂಡಾ ಆರಂಭಿಸಿತ್ತು. ಜೂನಿನಲ್ಲಿ ಫೋನುಗಳನ್ನು ಡೆಲಿವರಿ ಮಾಡುವುದಾಗಿ ಕಂಪೆನಿ ಹೇಳಿಕೊಂಡಿತ್ತು.

ಆದರೆ ಕೆಲವೇ ಗ್ರಾಹಕರಿಗಷ್ಟೆ ಕಂಪೆನಿ ಮೊಬೈಲ್ ಫೋನ್ ನೀಡಿತ್ತು. ಇನ್ನುಳಿದವರಿಗೆ ಫೋನ್ ನೀಡದ ಹಿನ್ನಲೆಯಲ್ಲಿ ವಂಚನೆ ಪ್ರಕರಣಗಳು ಕಂಪೆನಿ ವಿರುದ್ಧ ದಾಖಲಾಗಿದ್ದವು.[ಅಗ್ಗದ 'ಫ್ರೀಡಂ 251 ಮೊಬೈಲ್' ತಯಾರಕರಿಂದ ಹೊಸ ಪ್ರಕಟಣೆ]

Freedom 251 Fraud: Ringing Bells Director Mohit Goel arrested

ಈ ಕುರಿತು ಮೊಬೈಲ್ ವಿತರಣೆ ಕಂಪೆನಿ ಅಯಾಮ್ ಎಂಟರ್ ಪ್ರೈಸಸ್ ದೂರು ದಾಖಲಿಸಿತ್ತು. ನಾವು 30 ಲಕ್ಷ ರೂಪಾಯಿ ಹಣ ನೀಡಿದ್ದೇವೆ. ಇದರಲ್ಲಿ 14 ಲಕ್ಷ ರೂಪಾಯಿಯ ಮೊಬೈಲುಗಳನ್ನು ನೀಡಿ, ಉಳಿದಿದ್ದಕ್ಕೆ ಮೊಬೈಲ್ ನೀಡಿಲ್ಲ ನೀಡಿಲ್ಲ. ಹಣ ವಾಪಸ್ ನೀಡುವಂತೆ ಕೇಳಿದರೆ ನಮ್ಮ ಸಿಬ್ಬಂದಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಯಾಮ್ ದೂರಿನಲ್ಲಿ ತಿಳಿಸಿತ್ತು.

ಅಯಾಮ್ ಎಂಟರ್ ಪ್ರೈಸಸ್ ನೀಡಿದ ದೂರಿನ ಆಧಾರದ ಮೇಲೆ ಮೋಹಿತ್ ಗೋಯಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಂಪೆನಿಯ ಇನ್ನೂ ನಾಲ್ವರು ನಿರ್ದೇಶಕರಾದ ಗೋಯಲ್ ಪತ್ನಿ ಅನ್ಮೋಲ್ ಗೋಯಲ್ ಹಾಗೂ ಧರ್ನಾ ಗರ್ಗ್, ಅಶೋಕ್ ಚಧಾ, ಸುಮಿತ್ ಕುಮಾರ್ ಗೆ ಬಲೆ ಬೀಸಿದ್ದಾರೆ.

ಇದೇ ರೀತಿಯ ಹಲವು ಕಂಪ್ಲೆಂಟುಗಳು ಈತನ ವಿರುದ್ಧ ದಾಖಲಾಗಿವೆ ಎಂದು ಗಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ. ಕೋಟಿ ಕೋಟಿ ಹಣನುಂಗಿದ ಆಪಾದನೆ ರಿಂಗಿಂಗ್ ಬೆಲ್ ಕಂಪೆನಿಯ ಮೇಲಿದ್ದು ತನಿಖೆ ನಡೆಯುತ್ತಿದೆ.

English summary
Mohit Goel Director of Ringing Bells was arrested on charges of fraud in Ghaziabad on Thursday. Ringing Bells was the company that had promised to offer smartphones at a remarkably low price of Rs 251 in February 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X