ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಫೋಟೋ ನೋಡಪ್ಪಾ ಮಗು, ಇವರು ನಿನ್ನ ತಂದೆಯಾ?

|
Google Oneindia Kannada News

ಕಾನ್ಪುರ, ನವೆಂಬರ್ 21: ಆ ರೈಲು ದುರಂತ ಎಷ್ಟೋ ಮಂದಿ ಬದುಕನ್ನು ಕಸಿದುಕೊಂಡಿದೆ. ಅದರಲ್ಲಿ ಈ ನಾಲ್ಕು ವರ್ಷದ ಬಾಲಕನ ಕಥೆ ಮತ್ತೂ ಚಿಂತಾಜನಕ. ಈಗ ಹೇಳಹೊರಟಿರುವುದು ಅದೇ ಇಂದೋರ್-ಪಾಟ್ನಾ ರೈಲು ದುರಂತದ ಕಥೆಯನ್ನೇ. ಅದರಲ್ಲಿ ಬದುಕುಳಿದ ಬಾಲಕ ಎದುರಿಸಿದ ಸ್ಥಿತಿಯ ಬಗ್ಗೆಯೇ.

ಆದರ್ಶ್ ಪಾಂಡೆ ಆ ಬಾಲಕನ ಹೆಸರು. ತನ್ನ ತಂದೆ-ತಾಯಿ ಹಾಗೂ ಅಣ್ಣನ ಜತೆಗೆ ಮದುವೆಗೆ ಹೊರಟಿದ್ದ. ಅಪಘಾತವಾಯಿತು, ಆ ಹುಡುಗನ ಬಲಗಾಲು ಮುರಿಯಿತು, ಬಲಗೈಗೆ ಗಾಯವಾಯಿತು. ಚಿಕಿತ್ಸೆಗೆ ಪುಕ್ರಾಯನ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಾಂಡೆಗೆ ಚಿಕಿತ್ಸೆ ಕೂಡ ನೀಡಲಾಗುತ್ತಿದೆ.[IN PICS: ಕಾನ್ಪುರ ರೈಲು ದುರಂತದ ಮನಸ್ಸು ಕಲಕುವ ಚಿತ್ರ..]

Four Year Old Was Asked To Identify Father From Photos

ಅತನ ತಂದೆ-ತಾಯಿ ಹಾಗೂ ಅಣ್ಣ ಏನಾದರು ಅಂತ ಗೊತ್ತಾಗಬೇಕಲ್ಲ, ಸ್ಥಳೀಯ ಪೊಲೀಸರು ಯಾವುದೇ ಪುರುಷರ ಶವ ಪತ್ತೆ ಹಚ್ಚಲಿ, ಅದರ ಫೋಟೋ ತೆಗೆದು ತಂದು ಈ ಬಾಲಕನ ಮುಂದೆ ಹಿಡೀತಾರೆ. ಇವರಾ ನಿನ್ನ ತಂದೆ ಅಂತ ಪ್ರಶ್ನೆ ಮಾಡ್ತಾರೆ. ಆದರೆ ದುರಂತದಿಂದ ಆ ಹುಡುಗ ಆಘಾತಕ್ಕೆ ಒಳಗಾಗಿದ್ದಾನೆ.[ಕ್ಯಾನ್ಸರ್ ನಿಂದ ಸತ್ತ 14ರ ಬಾಲಕಿಯ ದೇಹ ಇನ್ನೂ 'ಜೀವಂತ'!]

ನಾವು ಕಾನ್ಪುರಕ್ಕೆ ಹೋಗ್ತಿದ್ದಿವಿ. ಅಮ್ಮನ ಸಂಬಂಧಿ ಮನೆಗೆ ಹೋಗ್ತಿದ್ದಿವಿ ಎಂಬುದನ್ನೇ ಪದೇ ಪದೇ ಹೇಳ್ತಿದ್ದಾನೆ ಆದರ್ಶ್ ಪಾಂಡೆ. ಟಿವಿಯಲ್ಲಿ ಆದರ್ಶ್ ನನ್ನು ನೋಡಿದ ಸಂಬಂಧಿ ಮನೋಜ್ ಕುಮಾರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಧಾವಿಸಿದ್ದಾರೆ. ಅವರನ್ನು ಈ ಬಾಲಕ ಗುರುತು ಹಿಡಿದಿದ್ದಾನೆ. ಆದರೆ ಅತನ ತಂದೆ, ಅಣ್ಣ, ಅಮ್ಮ ಇನ್ನೂ ಯಾರೂ ಪತ್ತೆಯಾಗಿಲ್ಲ. ಈ ಕುಟುಂಬ ಭೋಪಾಲ್ ನಿಂದ ವಾರಣಾಸಿಗೆ ಮದುವೆಯೊಂದಕ್ಕೆ ಹೊರಟಿತ್ತು.

English summary
He was on his way to Kanpur with his parents and elder brother when the Indore-Patna Express train derailed, 4 year old Adarsh Pandey was rushed to Health Centre by rescue workers. Local police showed him photos of those who have died to see if he could identify his father from the photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X