ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಮೇಘಾಲಯ ಗಡಿಯಲ್ಲಿ ಗುಂಡಿನ ಚಕಮಕಿ: ನಾಲ್ವರ ಸಾವು, ಇಂಟರ್ನೆಟ್ ಸ್ಥಗಿತ

|
Google Oneindia Kannada News

ನವದೆಹಲಿ, ನವೆಂಬರ್‌ 22: ಅಸ್ಸಾಂ ಹಾಗೂ ಮೇಘಾಲಯ ಗಡಿ ಪ್ರದೇಶದಲ್ಲಿ ಅಪರಿಚತರು ಹಾಗೂ ಪೊಲೀಸರು ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಅರಣ್ಯ ಸಿಬ್ಬಂದಿಯೂ ಸೇರಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೇಘಾಲಯ ಗಡಿಗೆ ಸಮೀಪವಿರುವ ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಹಲವಾರು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಸ್ಥಳೀಯವಾಗಿ ಅಡಚಣೆಯಿಂದಾಗಿ ಮೇಘಾಲಯ ಸರ್ಕಾರವು 48 ಗಂಟೆಗಳ ಕಾಲ ಇಂಟರ್‌ನೆಟ್‌ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಮೃತ ಗೆಳತಿಯನ್ನು ಮದುವೆಯಾದ ವ್ಯಕ್ತಿ: ತನ್ನ ಜೀವನದುದ್ದಕ್ಕೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆಮೃತ ಗೆಳತಿಯನ್ನು ಮದುವೆಯಾದ ವ್ಯಕ್ತಿ: ತನ್ನ ಜೀವನದುದ್ದಕ್ಕೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ

ಮೇಘಾಲಯ ಸರ್ಕಾರವು ರಾಜ್ಯದ ಪಶ್ಚಿಮ ಜೈನ್ತಿಯಾ ಹಿಲ್ಸ್‌ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಕುಸಿತಕ್ಕೆ ಕಾರಣವಾಗುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಟರ್ನೆಂಟ್‌ ಅನ್ನು ನಿರ್ಬಂಧಿಸಲಾಗಿದೆ. ಸುಳ್ಳು ಮಾಹಿತಿಯನ್ನು ಹರಡಲು ವಾಟ್ಸಾಪ್‌, ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಬಹುದಾದ ಸಂಭವವಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

Four killed shootout on Assam- Meghalaya border, Internet Suspended

ಸರ್ಕಾರದ ಅಧಿಕೃತ ಪ್ರಕಟಣೆ ಪ್ರಕಾರ, ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್‌, ಪಶ್ಚಿಮ ಜೈನ್ತಿಯಾ ಹಿಲ್ಸ್‌, ಈಸ್ಟ್‌ ಖಾಸಿ ಹಿಲ್ಸ್‌, ವೆಸ್ಟ್‌ ಖಾಸಿ ಹಿಲ್ಸ್‌ ಹಾಗೂ ವೆಸ್ಟ್ ಖಾಸಿ ಹಿಲ್ಸ್‌ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

ಭಾರತದಲ್ಲಿ 4,189 ಕಿ.ಮೀ ಕ್ರಮಿಸುವ ಅತಿ ಉದ್ದದ ರೈಲು ಇದು..ಭಾರತದಲ್ಲಿ 4,189 ಕಿ.ಮೀ ಕ್ರಮಿಸುವ ಅತಿ ಉದ್ದದ ರೈಲು ಇದು..

ನವೆಂಬರ್‌ 22ರ ಮಂಗಳವಾರ ಮುಂಜಾನೆ ಪೊಲೀಸರು ಅಕ್ರಮವಾಗಿ ಮರವನ್ನು ಸಾಗಿಸುತ್ತಿದ್ದ ಟ್ರಕ್‌ ಅನ್ನು ತಡೆದಾಗ ಅಸ್ಸಾಂ ಮೇಘಾಲಯ ಗಡಿಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಟ್ರಕ್‌ನಲ್ಲಿದ್ದವರು ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಸಿತು. ಆದರೆ ಪೊಲೀಸರು ವಾಹನದ ಟೈರ್‌ಗಳಿಗೆ ಹಾನಿ ಮಾಡಿ ತಡೆದರು.

ಮುಂಜಾನೆ 3 ಗಂಟೆ ಸುಮಾರಿಗೆ ಅಸ್ಸಾಂ ಅರಣ್ಯ ಇಲಾಖೆ ತಂಡವು ಮೇಘಾಲಯ ಗಡಿಯಲ್ಲಿ ಟ್ರಕ್ ಅನ್ನು ತಡೆಯಿತು. ಸ್ಥಳದಲ್ಲಿ ಟ್ರಕ್‌ನ ಚಾಲಕ, ಕೈಯಾಳು ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇತರರು ತಪ್ಪಿಸಿಕೊಂಡಿದ್ದಾರೆ ಎಂದು ಪಶ್ಚಿಮ ಕರ್ಬಿ ಆಂಗ್ಲಾಂಗ್‌ನ ಪೊಲೀಸ್ ವರಿಷ್ಠಾಧಿಕಾರಿ ಇಮ್ದಾದ್ ಅಲಿ ಪಿಟಿಐಗೆ ತಿಳಿಸಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ತಲುಪುತ್ತಿದ್ದಂತೆ ಮೇಘಾಲಯದಿಂದ 'ಡಾವೋ' (ಕಠಾರಿ) ಮತ್ತು ಇತರ ಆಯುಧಗಳೊಂದಿಗೆ ಶಸ್ತ್ರಸಜ್ಜಿತವಾದ ಅಪಾರ ಸಂಖ್ಯೆಯ ಜನರು ಬೆಳಗ್ಗೆ 5 ಗಂಟೆಯ ಸುಮಾರಿಗೆ ಸ್ಥಳದಲ್ಲಿ ಜಮಾಯಿಸಿದರು. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಗುಂಪು ಅರಣ್ಯ ಸಿಬ್ಬಂದಿ ಮತ್ತು ಪೊಲೀಸರನ್ನು ಘೇರಾವ್ ಮಾಡುತ್ತಿದ್ದಂತೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಅಧಿಕಾರಿಗಳು ಅವರ ಮೇಲೆ ಗುಂಡು ಹಾರಿಸಿದರು ಎಂದು ಅವರು ಹೇಳಿದರು.

English summary
Four people were killed in a shootout between strangers and the police in the border area of ​​Assam and Meghalaya. It is learned that forest personnel are among the dead and many are injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X