ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ: ಸಮಜಾಯಿಷಿ ನೀಡಿದ ಫೋರ್ಟೀಸ್ ಆಸ್ಪತ್ರೆ

Posted By:
Subscribe to Oneindia Kannada

ಗುರ್ಗಾಂವ್, ನವೆಂಬರ್ 22: ಡೆಂಗ್ಯೂ ಪೀಡಿತ ಏಳು ವರ್ಷದ ಮಗುವಿನ ಸಾವು ಮತ್ತು ದುಬಾರಿ ಬಿಲ್ಲಿಗೆ ಸಂಬಂಧಿಸಿದಂತೆ ಫೋರ್ಟಿಸ್ ಆಸ್ಪತ್ರೆಯ ಮೇಲೆ ಬಂದಿರುವ ಆರೋಪವನ್ನು ಫೋರ್ಟೀಸ್ ಹೆಲ್ತ್ ಕೇರ್ ತಳ್ಳಿಹಾಕಿದೆ.

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್?!

ಲಿಖಿತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಫೋರ್ಟೀಸ್ ಆಸ್ಪತ್ರೆ, 'ನಮಗೆ ತಂದೆ-ತಾಯಿಗಳ ನೋವು ಅರ್ಥವಾಗುತ್ತದೆ. ಮಗುವಿನ ಸಾವಿನ ದುಃಖದಲ್ಲಿ ಅವರು ಈ ರೀತಿ ಆರೋಪ ಮಾಡುತ್ತಿರಬಹುದು. ಆದರೆ ನಮ್ಮಲ್ಲಿ ಯಾವುದೇ ರೀತಿಯ ಬೇಜವಾಬ್ದಾರಿ ವರ್ತನೆ ನಡೆದಿಲ್ಲ, ಜೊತೆಗೆ ದುಬಾರಿ ಬಿಲ್ಲು ಪಾವತಿಸುವಂತೆ ಹೇಳಿಲ್ಲ. ಮಾಧ್ಯಮಗಳಲ್ಲಿ ಅವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆಯಷ್ಟೆ. ನಾವು ಆಸ್ಪತ್ರೆಯ ನೀತಿ-ನಿಯಮಕ್ಕನುಗುಣವಾಗಿಯೇ ನಡೆದುಕೊಂಡಿದ್ದೇವೆ' ಎಂದಿದೆ.

Fortis issues clarification over reports of over-charging dengue patient

'ಮಗುವನ್ನು ಆಸ್ಪತ್ರೆಗೆ ಸೇರಿಸುವಾಗಲೇ ಅದು ಗಂಭೀರ ಸ್ಥಿತಿಯಲ್ಲಿತ್ತು. ಆದ್ದರಿಂದ ಚಿತಿತ್ಸೆ ಫಲಕಾರಿಯಾಗಿಲ್ಲ' ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮಂಡಳಿ ಸಮಜಾಯಿಷಿ ನೀಡಿದೆ.

ಐಎಂಎ ಸಮರ್ಥನೆ

18 ಲಕ್ಷ ರೂ. ಬಿಲ್ಲು ತೆಗೆದುಕೊಂಡ ಫೋರ್ಟೀಸ್ ಆಸ್ಪತ್ರೆ ಕ್ರಮವನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಸಮರ್ಥಿಸಿಕೊಂಡಿದೆ. ಮಗುವನ್ನು ಬದುಕಿಸಲು ನಾವು ಎಲ್ಲ ರೀತಿಯ ವೈದ್ಯಕೀಯ ಸಾಧ್ಯತೆಗಳನ್ನೂ ಪಾಲಿಸುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಹೆಚ್ಚು ವೆಚ್ಚವಾಗಿದ್ದರೆ ಅದನ್ನು ಆಸ್ಪತ್ರೆಯ ತಪ್ಪು ಎನ್ನುವುದಕ್ಕಾಗುವುದಿಲ್ಲ ಎಂದು ಐಎಂಎ ಯ ರಾಷ್ಟ್ರೀಯ ಅಧ್ಯಕ್ಷ ಕೆ.ಕೆ.ಅಗರ್ವಾಲ್ ಹೇಳಿದ್ದಾರೆ.

ಬೆಂಗಳೂರು ವೈದ್ಯರ ನಿರ್ಲಕ್ಷ್ಯ: ಮೂರು ತಿಂಗಳ ಮಗು ಸಾವು

ಆದ್ಯಾ ಸಿಂಗ್ ಎಂಬ 7 ವರ್ಷದ ಮಗುವನ್ನು ಡೆಂಗ್ಯೂ ಚಿಕಿತ್ಸೆಗಾಗಿ ಗುರ್ಗಾಂವ್ ನ ಫೋರ್ಟೀಸ್ ಮೆಮೋರಿಯಲ್ ಆಸ್ಪತ್ರೆಗೆ ಆಗಸ್ಟ್ 31 ರಂದು ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, 15 ದಿನಗಳ ನಂತರ ಮಗು ಅಸುನೀಗಿತ್ತು. ಮಗು ಮೊದಲೇ ಸತ್ತಿದ್ದರೂ ಹಣಕ್ಕಾಗಿ ವೈದ್ಯರು ಸುಳ್ಳು ಹೇಳುತ್ತಿದ್ದಾರೆಂಬ ಅನುಮಾನವನ್ನು ಮಗುವಿನ ಪಾಲಕರು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಕೇವಲ 15 ದಿನದ ಚಿಕಿತ್ಸೆಗೆ 18 ಲಕ್ಷ ರೂ. ಬಿಲ್ಲು ಮಾಡಿದ ಆರೋಪವೂ ಆಸ್ಪತ್ರೆಯ ಮೇಲಿತ್ತು. ಈ ಕುರಿತು ತನಿಖೆ ನಡೆಸುವ ಭರವಸೆಯನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Fortis Healthcare on Tuesday refuted reports circulating on the social media regarding medical negligence and over-charging the family of a seven-year-old dengue patient.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ