ಭಾರತದ ಆರ್ಥಿಕತೆ ಮೂರು ಚಕ್ರ ಪಂಕ್ಚರ್ ಆದ ಕಾರು: ಚಿದಂಬರಂ

ಥಾಣೆ (ಮಹಾರಾಷ್ಟ್ರ), ಜೂನ್ 4: ತೈಲ ಬೆಲೆ ಏರಿಕೆ ಮತ್ತು ಇತರೆ ಆರ್ಥಿಕ ಸಮಸ್ಯೆಗಳ ಕುರಿತಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಪಿ. ಚಿದಂಬರಂ ಅವರು, ಭಾರತದ ಆರ್ಥಿಕತೆಯನ್ನು ಪಂಕ್ಚರ್ ಆದ ಕಾರಿಗೆ ಹೋಲಿಸಿದ್ದಾರೆ.

ಭಾರತದ ಆರ್ಥಿಕತೆಯು ಮೂರು ಚಕ್ರವು ಪಂಕ್ಚರ್ ಆಗಿರುವ ಕಾರ್ ಇದ್ದಂತಾಗಿದೆ ಎಂದು ಪಿ. ಚಿದಂಬರಂ ಅವರು ಲೇವಡಿ ಮಾಡಿದ್ದಾರೆ.

'ಖಾಸಗಿ ಬಂಡವಾಳ ಹೂಡಿಕೆ, ಖಾಸಗಿ ಅನುಭೋಗ, ರಫ್ತು ಮತ್ತು ಸರ್ಕಾರದ ವೆಚ್ಚಗಳು ಆರ್ಥಿಕತೆಯ ನಾಲ್ಕು ಪ್ರಮುಖ ಜೀವಾಳಗಳು. ಇವು ಕಾರಿನ ನಾಲ್ಕು ಚಕ್ರಗಳಿದ್ದಂತೆ. ಒಂದು ಅಥವಾ ಎರಡು ಚಕ್ರಗಳು ಪಂಕ್ಚರ್ ಆದರೆ ಕಾರಿನ ವೇಗ ನಿಧಾನಗೊಳ್ಳುತ್ತದೆ. ಆದರೆ, ನಮ್ಮ ವಿಚಾರದಲ್ಲಿ ಮೂರು ಚಕ್ರಗಳು ಪಂಕ್ಚರ್ ಆಗಿವೆ' ಎಂದು ಅವರು ವ್ಯಂಗ್ಯವಾಗಿ ಹೇಳಿದರು.

former union minister chidambaram slams nda government

'ಆರೋಗ್ಯ ಮತ್ತು ಇತರೆ ಕೆಲವು ಸೌಲಭ್ಯಗಳ ಸಲುವಾಗಿ ಸರ್ಕಾರದ ಖರ್ಚು ಮಾತ್ರ ಸಾಗುತ್ತಿದೆ. ಈ ವೆಚ್ಚವು ಮುಂದೆ ಸಾಗಲು ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಮೇಲೆಯೂ ತೆರಿಗೆ ಹಾಕುವುದನ್ನು ಮುಂದುವರಿಸುತ್ತಿದೆ. ಈ ರೀತಿ ತೆರಿಗೆಗಳ ಮೂಲಕ ಜನರಿಂದ ಹಣವನ್ನು ವಸೂಲಿ ಮಾಡಿ ಅದನ್ನು ಸಾರ್ವಜನಿಕ ಸೌಲಭ್ಯಗಳಿಗೆ ಬಳಕೆ ಮಾಡುತ್ತಿದೆ ಎಂದು ಟೀಕಿಸಿದರು.

ವಿದ್ಯುತ್ ವಲಯದ ಮೇಲೆ ಹೂಡಿಕೆ ಮಾಡಿದ್ದನ್ನು ಅಥವಾ ಉದ್ಯಮ ವಲಯದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿರುವುದನ್ನು ಎಲ್ಲಿಯಾದರೂ ಕಂಡಿದ್ದೀರಾ ಎಂದು ಪ್ರಶ್ನಿಸಿದರು.

ಈ ಸರ್ಕಾರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಅಸಮರ್ಥವಾಗಿದೆ. ಭಾರತದ ಆರ್ಥಿಕತೆಯನ್ನು ಇದು ಇನ್ನಷ್ಟು ಕೆಟ್ಟದಾಗಿಸಿದೆ. ಆದರೆ, ಎನ್‌ಡಿಎ ಸರ್ಕಾರ ಎಸಗಿರುವ ಸಾಮಾಜಿಕ ಅಪರಾಧಗಳಿಗಿಂತ ಅದರ ಆರ್ಥಿಕ ತಪ್ಪುಗಳನ್ನು ಗುಣಪಡಿಸಬಹುದು ಮತ್ತು ಸರಿಪಡಿಸಬಹುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+