ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಆರ್ಥಿಕತೆ ಕುಸಿತಕ್ಕೆ ಮೋದಿ ಕಾರಣ: ಮನಮೋಹನ್ ಸಿಂಗ್ ಟೀಕೆ

By Nayana
|
Google Oneindia Kannada News

ಬೆಂಗಳೂರು, ಮೇ 07: ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯ ತಪ್ಪು ಅನುಷ್ಠಾನದಿಂದಾಗಿ ದೇಶದ ಗ್ರಾಮೀಣ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದೆ. ಬಡವರು ಹಾಗೂ ಮಧ್ಯಮ ವರ್ಗದವರು ಮತ್ತೆಂದೂ ಚೇತರಿಸಿಕೊಳ್ಳದಂತಹ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.

ರೈತರ ಆದಾಯವು ದ್ವಿಗುಣವಾಗುವುದು ಹೇಗೆ? ಮನಮೋಹನ್ ಸಿಂಗ್ ಪ್ರಶ್ನೆ ರೈತರ ಆದಾಯವು ದ್ವಿಗುಣವಾಗುವುದು ಹೇಗೆ? ಮನಮೋಹನ್ ಸಿಂಗ್ ಪ್ರಶ್ನೆ

ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಾರ್ಥ ಬೆಂಗಳೂರಿನಲ್ಲಿ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸಂರ್ಕಾರ ಅಂತಾರಾಷ್ಟ್ರೀಯ ಆರ್ಥಿಕತೆ ಕುಸಿತದ ಸಂದರ್ಭದಲ್ಲಿ 7.1 ರಷ್ಟು ಅಭಿವೃದ್ಧಿಯನ್ನು ಸಾಧಿಸಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಕುಸಿತ ಸಂದರ್ಭದಲ್ಲಿ ಭಾರತದಲ್ಲಿ ಎನ್‌ಡಿಎ ಸರ್ಕಾರ ಬಂದ ಬಳಿಕ ಆರ್ಥಿಕತೆ ಸಾಧ್ಯವಾಗಿಲ್ಲೆ ಎಂದು ವಿಶ್ಲೇಷಿಸಿದರು.

Former PM Singh slams Modi fails to maintain rural economy stable

ದೇಶದ ಬ್ಯಾಂಕುಗಳಲ್ಲಿ ಜನಸಾಮಾನ್ಯರಿಗೆ ಹಣವೇ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲೂ ಸಹ ಮೋದಿ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರವನ್ನು ಸರಿಪಡಿಸುವ ಬದಲು,ಸಮರ್ಥನೆಗಿಳಿಸಿರುವುದು ದುರಂತ ಎಂದು ಮನಮೋಹನ್ ಸಿಂಗ್ ಟೀಕಿಸಿದರು. ಕೆಲವು ಆರ್ಥಿಕ ಪಾಲಿಸಿಗಳು ಜನರಿಗೆ ತೊಂದರೆಯಾಗುತ್ತಿದೆ. ಕಚ್ಛಾ ತೈಲ ಬೆಲೆ ಶೇ.67ಕ್ಕೆ ಇಳಿಕೆಯಾದ ನಂತರ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಶೇ.110ರಷ್ಟು ಏರಿಕೆ ಕಂಡಿದೆ.

English summary
Former Prime Minister Manmohan Singh slammed prime minister Narendra Modi failed to maintain rural economy stable despite international economy was in growth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X