• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸೋಲಿಸಿ, ರಾಹುಲ್ ಗೆಲ್ಲಿಸಿ: ಪಾಕ್ ಮಾಜಿ ಸಚಿವನಿಗೆ ಇಲ್ಲೇನು ಕೆಲಸ?

|

ನಮ್ಮ ದೇಶದ ರಾಜಕೀಯ ನಾವು ನೋಡಿಕೊಳ್ಳುತ್ತೇವೆ, ಮೋದಿಯೋ, ರಾಹುಲೋ, ಮಾಯಾವತಿಯೋ, ಇನ್ನೊಬ್ಬರೋ.. ಭಾರತೀಯರು ಇಂತವರಿಗೇ ಮತಹಾಕಬೇಕು ಅನ್ನೋದಕ್ಕೆ ಶತ್ರು ರಾಷ್ಟ್ರದ ಮಾಜಿ ಸಚಿವನೊಬ್ಬನಿಗೆ ಇಲ್ಲೇನು ಕೆಲಸ ಅಂತೀನಿ?

ಹೌದು, ಕಾಂಗ್ರೆಸ್ ಪರ ಪಾಕಿಸ್ತಾನದ ಕೆಲವು ಸಚಿವರು ವಕಾಲತ್ತು ವಹಿಸಿಕೊಂಡ ಉದಾಹರಣೆಗಳಿವೆ, ಇದು ಸಾಲದು ಎನ್ನುವಂತೆ ಪಾಕಿಸ್ತಾನದ ಮಾಜಿ ಆಂತರಿಕ ಆಡಳಿತದ ಸಚಿವ ರೆಹಮಾನ್ ಮಲಿಕ್, ರಾಹುಲ್ ಗಾಂಧಿ ಮುಂದಿನ ಪ್ರಧಾನಿಯೆಂದೇ ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿ ಬಿಟ್ಟಿದ್ದಾರೆ.

ಒಂದು ಕಡೆಯಿಂದ ಗಡಿತಂಟೆಗೆ ಬಂದು, ಇನ್ನೊಂದೆಡೆ ಶಾಂತಿ, ಸೌಹಾರ್ದತೆಯ ಬಗ್ಗೆ ಮಾತನಾಡುವ ಪಾಕಿಸ್ತಾನದ ಜೊತೆಗೆ, ಯಾವುದೇ ಮಾತುಕತೆಗೆ ನಾವು ಸಿದ್ದವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದ ಎರಡು ದಿನಗಳ ನಂತರ, ಪಾಕಿ ಮಾಜಿ ಸಚಿವರೊಬ್ಬರು, ಎಐಸಿಸಿ ಅಧ್ಯಕ್ಷರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಕಾವಲುಗಾರನೇ ಕಳ್ಳತನ ಮಾಡಿದ್ದಾನೆ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಮಾತುಕತೆಗೆ ಒಲ್ಲೆ ಎಂದ ಭಾರತ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಪಾಕಿಸ್ತಾನದ ಹಾಲೀ ಮತ್ತು ಮಾಜಿ ಸಚಿವರಲ್ಲಿ ಕೆಲವರು, ಕಾಂಗ್ರೆಸ್ ಮುಂದೆ ಸರಕಾರ ರಚಿಸಲಿದೆ ಎನ್ನುವ ಭವಿಷ್ಯವನ್ನು ನುಡಿಯುತ್ತಿದ್ದಾರೆ.

ಗುಜರಾತ್ ಚುನಾವಣೆಯ ವೇಳೆ, ಪ್ರಧಾನಿ ಮೋದಿಯನ್ನು 'ನೀಚ' ಎಂದು ಕರೆದು, ಆಮೇಲೆ ಕಾಂಗ್ರೆಸ್ಸಿನಿಂದ ಅಮಾನತುಗೊಂಡಿದ್ದ ಮಣಿಶಂಕರ್ ಐಯ್ಯರ್ ಅವರಿಗೆ, ಪಾಕಿಸ್ತಾನದ ಮೇಲೆ ಹಿಂದಿನಿಂದಲೂ ಬಹಳ ಪ್ರೀತಿ. ಹಾಗೆಯೇ, ಪಾಕಿಸ್ತಾನದ ಕೆಲವು ಸಚಿವರಿಗಳಿಗೂ, ಕಾಂಗ್ರೆಸ್ ಮೇಲೆ ಪ್ರೀತಿ.

ಆಯುಷ್ಮಾನ್ ಭಾರತ-ಬಡ ರೋಗಿಗಳ ಆಶಾಕಿರಣ: ಉಪಯೋಗಗಳೇನು?

ರಾಹುಲ್ ಮುಂದಿನ ಪ್ರಧಾನಿಯೆಂದು ಬಹಿರಂಗವಾಗಿಯೇ ಬೆಂಬಲಿಸುತ್ತಿರುವ, ಪಾಕ್ ಮಾಜಿ ಸಚಿವನ ಸಾಲುಸಾಲು ಟ್ವೀಟ್ ಮತ್ತು ಅದಕ್ಕೆ ಬಂದಿರುವ ಖಡಕ್, ಹಾಸ್ಯಾಸ್ಪದ ಟ್ವೀಟ್ ಹೀಗಿದೆ..

ಮಾಜಿ ಸಚಿವ ರೆಹಮಾನ್ ಮಲಿಕ್ ಅವರ ಟ್ವೀಟ್

ಮಾಜಿ ಸಚಿವ ರೆಹಮಾನ್ ಮಲಿಕ್ ಅವರ ಟ್ವೀಟ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿಮ್ಮ ಮುಂದಿನ ಪ್ರಧಾನಿಯಾಗಲಿದ್ದಾರೆ. ಅವರ ಒಂದು ಅದ್ಭುತವಾದಂತಹ ವಿಡಿಯೋ ಒಂದನ್ನು ಈಗ ನೋಡಿದೆ. ಅದನ್ನು ಇಲ್ಲಿ ಶೇರ್ ಮಾಡುತ್ತಿದ್ದೇನೆ ಎನ್ನುವ ಮಾಜಿ ಸಚಿವ ರೆಹಮಾನ್ ಮಲಿಕ್ ಅವರ ಟ್ವೀಟ್. ಅದಕ್ಕೆ ಬಂದಿರುವ ಒಂದು ರಿಪ್ಲೈ, ನಮ್ಮ ಲೀಡರ್ ಅನ್ನು ಪ್ರೀತಿಯ ನೆರೆರಾಷ್ಟ್ರಕ್ಕಾಗಿ ತ್ಯಾಗ ಮಾಡಲು ಸಿದ್ದ ಎನ್ನುವ ಉತ್ತರ.

ರಫೆಲ್ ಡೀಲ್ ರದ್ದಾಗಲ್ಲ, ರಾಹುಲ್- ಹೊಲ್ಲಾಂಡೆ ಕೂಗಿಗೆ ಜೇಟ್ಲಿ ಬ್ರೇಕ್!

ಅತ್ಯಂತ ಒತ್ತಡದಲ್ಲೂ ತುಂಬಾ ತೂಕವಾಗಿ ಅವರು ಮಾತನಾಡುತ್ತಾರೆ

ರಾಹುಲ್ ಗಾಂಧಿ ನಿಮ್ಮ ಮುಂದಿನ ಪ್ರಧಾನಿ, ಅತ್ಯಂತ ಒತ್ತಡದಲ್ಲೂ ತುಂಬಾ ತೂಕವಾಗಿ ಅವರು ಮಾತನಾಡುತ್ತಾರೆ. ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯ ಮೇಲೆ ಭಯವಿದೆ ಎನ್ನುವ ಮತ್ತೊಂದು ಮಾಜಿ ಸಚಿವರ ಟ್ವೀಟ್. ಇದಕ್ಕೆ 1.100ಕ್ಕೂ ಅಧಿಕ ರಿಪ್ಲೈ ಬಂದಿದೆ. ಅದರಲ್ಲೊಂದು, ಸರ್ ನಿಮಗೆ ರಾಹುಲ್ ಒಬ್ಬ ನಾಯಕರಾಗಿರಬಹುದು,ಆದರೆ ಭಾರತದಲ್ಲಿ ಅವರಿಗೆ ಯಾವ ರೀತಿಯ ಇಮೇಜ್ ಇದೆ ಎನ್ನುವುದು ಇಲ್ಲಿ ಗೊತ್ತಿರುವ ವಿಚಾರ.

ಸಚಿತ್ರ ವರದಿ : 10 ಕೋಟಿ ಬಡವರಿಗೆ ಆಶಾಕಿರಣವಾದ 'ಮೋದಿ ಕೇರ್'

ಮೋದಿಯ ಆಡಳಿತವನ್ನು ವಿಶ್ವಮಟ್ಟದಲ್ಲಿ ಜಗಜ್ಜಾಹೀರು ಮಾಡಿದ್ದೇನೆ

ಮೋದಿಯ ಆಡಳಿತವನ್ನು ವಿಶ್ವಮಟ್ಟದಲ್ಲಿ ಜಗಜ್ಜಾಹೀರು ಮಾಡಿದ್ದೇನೆ

ರಾಹುಲ್ ಮುಂದಿನ ಪ್ರಧಾನಿ ಆಗುತ್ತಾರೆ, ಹಾಗಾಗಿ ಅವರನ್ನು ಗೌರವಿಸಿ. ನಿಮ್ಮ ಪ್ರಧಾನಿ ಮೋದಿಯ ಆಡಳಿತವನ್ನು ವಿಶ್ವಮಟ್ಟದಲ್ಲಿ ನಾನು ಜಗಜ್ಜಾಹೀರು ಮಾಡಿದ್ದೇನೆ. ರಾಹುಲ್ ಗಾಂಧಿಯನ್ನು ಟೀಕಿಸುವ ಬದಲು, ಇನ್ನೂ ಪ್ರೌಢರಾಗಿ ಭಾರತೀಯರೇ ಎನ್ನುವ ರೆಹಮಾನ್ ಮಲಿಕ್ ಅವರ ಟ್ವೀಟಿಗೆ ಬಂದಿರುವ ರಿಪ್ಲೈ ಹೀಗಿದೆ, ಒಬ್ಬ ಹಾಸ್ಯಗಾರನನ್ನು ಇನ್ನೊಬ್ಬ ಕಾಮಿಡಿಯನ್ ತಾನೇ ಗುರುತಿಸಬಲ್ಲ..

ಸಮೀಕ್ಷೆ: ಸ್ವಾತಂತ್ರ್ಯಾನಂತರ ಭಾರತ ಕಂಡ ಅತ್ಯುತ್ತಮ ಪ್ರಧಾನಮಂತ್ರಿಗಳ ಪಟ್ಟಿ

ಮೋದಿಯವರನ್ನು ಸಮರ್ಥಿಸಿಕೊಳ್ಳುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಮೋದಿಯವರನ್ನು ಸಮರ್ಥಿಸಿಕೊಳ್ಳುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಮೋದಿಯವರನ್ನು ಸಮರ್ಥಿಸಿಕೊಳ್ಳುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಅವರಿಗೆ ಸ್ವಂತ ಗೌರವ ಅನ್ನೋದು ಇಲ್ಲಾ.. ತಮ್ಮದೇ ದೇಶದ ರಾಷ್ಟ್ರೀಯ ನಾಯಕರ ಬಗ್ಗೆ ಅವರಿಗೆ ಗೌರವ ಇಲ್ಲವೇ...ಪ್ರಧಾನಿ ಮೋದಿಯವರ ವಿರುದ್ದ ಜೆಟ್ ಗೇಟ್ ಅನ್ನು ಬಹಿರಂಗಗೊಳಿಸಿದ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ.

ಇಡೀ ಭಾರತೀಯರು ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಾ?

ಇಡೀ ಭಾರತೀಯರು ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಾ?

ನೀವೆಲ್ಲಾ ಯಾಕೆ ವ್ಯಾಕುಲಗೊಂಡಿದ್ದೀರಾ? ಇಡೀ ಭಾರತೀಯರು ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಾ? ಈ ಭಾಗದಲ್ಲಿ ಶಾಂತಿಗಾಗಿ ನಾನು ಮೋದಿಯವರ ಹಗರಣವನ್ನು ಬಹಿರಂಗಗೊಳಿಸಿದೆ. ನೀವು ಭಾರತೀಯರು ಇದಕ್ಕಾಗಿ ಸಂತೋಷ ಪಡುವುದನ್ನು ಬಿಟ್ಟು, ನನ್ನನ್ನು ಯಾಕೆ ದೂರುತ್ತಿದ್ದೀರಾ? ಬರೆದಿಟ್ಟುಕೊಳ್ಳಿ, ನಿಮಗಿಂತಲೂ ಟೀಕೆಯನ್ನು ನಾನು ಮಾಡಬಲ್ಲೆ ಎನ್ನುವ ಪಾಕಿಸ್ತಾನದ ಮಾಜಿ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲಿಕ್ ಅವರ ಟ್ವೀಟ್.

ಇನ್ನಷ್ಟು narendra modi ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Pakistan Interior Minister Rehman Malil openly campaigns for Rahul Gandhi as Prime Minsiter while calling for the ouster of PM Narendra Modi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more