ಲೋಕಸಭೆ ಮಾಜಿ ಸ್ಪೀಕರ್ ಪಿಎ ಸಂಗ್ಮಾ ವಿಧಿವಶ

Subscribe to Oneindia Kannada

ನವದೆಹಲಿ, ಮಾರ್ಚ್, 04: ಲೋಕಸಭೆಯ ಮಾಜಿ ಸ್ಪೀಕರ್‌ ಪಿ.ಎ.ಸಂಗ್ಮಾ ದೆಹಲಿಯ ತಮ್ಮ ನಿವಾಸದಲ್ಲಿ ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸಂಗ್ಮಾ ನಿಧನದ ಹಿನ್ನೆಲೆಯಲ್ಲಿ ಸಂಸತ್ ನ ಉಭಯ ಸದನಗಳ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.

1996ರಿಂದ 1998ರ ಅವಧಿವರೆಗೆ ಸಂಗ್ಮಾ ಲೋಕಸಭೆಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಸಂಗ್ಮಾ ದೆಹಲಿಯ ನಿವಾಸದಲ್ಲಿ ನಿಧನ ಹೊಂದಿದ್ದಾರೆ.[ರಾಜೀವ್ ಹೇಳಿಕೆ ಮೂಲಕ ಕಾಂಗ್ರೆಸ್‌ಗೆ ಪಾಠ ಹೇಳಿದ ಮೋದಿ]

Former Lok Sabha Speaker PA Sangma passes away

ಪಿಎ ಸಂಗ್ಮಾ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸಹ ಸಂಸ್ಥಾಪಕ. ಸಂಗ್ಮಾ ಅವರು 1988ರಿಂದ 1990ರವರೆಗೆ ಮೇಘಾಲಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 8 ಬಾರಿ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರು.

2013 ರಲ್ಲಿ ಎನ್‌ಸಿಪಿಯಿಂದ ಹೊರಬಂದ ಸಂಗ್ಮಾ ಅವರು ನ್ಯಾಷನಲ್‌ ಪೀಪಲ್ಸ್ ಪಾರ್ಟಿ ಎಂಬ ಹೊಸ ಪಕ್ಷ ಕಟ್ಟಿದ್ದರು. 2012 ರ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಣಬ್ ಮುಖರ್ಜಿ ವಿರುದ್ಧ ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.[ಕೇಂದ್ರ ಬಜೆಟ್ ಯಾವುದು ಅಗ್ಗ? ಯಾವುದು ದುಬಾರಿ?]

ಪುರ್ನೋ ಅಗಿಟೊಕ್ ಸಂಗ್ಮಾ ಸೆಪ್ಟೆಂಬರ್ 1, 1947 ರಂದು ಮೇಘಾಲಯದ ವೇಸ್ಟ್ ಗಾರೋ ಜಿಲ್ಲೆಯಲ್ಲಿ ಜನಿಸಿದ್ದರು. ಬುಡಕಟ್ಟು ಜನರಿಗೆ ಸೇರಿದ್ದ ಹಳ್ಳಿಯಲ್ಲಿ ಬೆಳೆದ ಸಂಗ್ಮಾ ತಮ್ಮ ಹೋರಾಟದ ಮೂಲಕ ಮೇಲೆ ಬಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Lok Sabha Speaker PA Sangma passed away on Friday. Sangma died of a heart attack at his Delhi residence. who unsuccessfully contested the presidential election as an opposition candidate against Pranab Mukherjee.
Please Wait while comments are loading...