ಗೂಗಲ್‌ನಲ್ಲಿ ಕೈತುಂಬಾ ಸಂಬಳ, ಸಕಲ ಸೌಲಭ್ಯವಿದ್ದರೂ ಕೆಲಸ ಬಿಟ್ಟ ಯುವತಿ: ಆಕೆಯ ಬದುಕನ್ನೇ ಬದಲಿಸಿದ ಥಾಯ್ಲೆಂಡ್ ಪ್ರವಾಸ

ಗೂಗಲ್ ಕಂಪನಿಯಲ್ಲಿ 8 ವರ್ಷಗಳ ಕಾಲ ಯಶಸ್ವಿಯಾಗಿ ಕೆಲಸ ಮಾಡಿದ್ದ ಸಾರಾ ವಿಲ್ಸಿನ್ಸ್ಕಾ ಅವರಿಗೆ ಕೈತುಂಬಾ ಸಂಬಳ, ಎರಡು ಬಾರಿ ಬಡ್ತಿ ಹಾಗೂ ಹಲವು ಸೌಲಭ್ಯಗಳಿದ್ದವು. ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಅವರಿಗೆ ತಮ್ಮ ವೃತ್ತಿಜೀವನದಲ್ಲಿ ಏನೋ ಒಂದು ರೀತಿಯ ಅಸಮಾಧಾನ ಕಾಡಲು ಆರಂಭಿಸಿತು.

ಇದರಿಂದಾಗಿ, ಬಹುತೇಕರ ಪಾಲಿಗೆ ಕನಸಿನ ಉದ್ಯೋಗವಾಗಿರುವ ಗೂಗಲ್ ಕೆಲಸಕ್ಕೆ ಅವರು ಏಕಾಏಕಿ ರಾಜೀನಾಮೆ ನೀಡಿದರು. ಸದ್ಯ ಅವರು ಅಮೆರಿಕದ ಸ್ಯಾನ್ ಡಿಯಾಗೋದಲ್ಲಿ 'ಸ್ವಿಲ್ ಆರ್ಟ್ಸ್' ಎಂಬ ತಮ್ಮದೇ ಆದ ಸ್ವಂತ ಕಲಾ ಸ್ಟುಡಿಯೋವನ್ನು ನಡೆಸುತ್ತಿದ್ದಾರೆ.

Google Engineer

ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆ ಮತ್ತು ಗೂಗಲ್ ಬದುಕು

ಸಾರಾ ಅವರು ಬಾಲ್ಯದಿಂದಲೂ ಪೋಲೆಂಡ್‌ನಲ್ಲಿ ಕಮ್ಯುನಿಸ್ಟ್ ಆಡಳಿತದ ಬದಲಾವಣೆಗಳನ್ನು ನೋಡುತ್ತಾ ಬೆಳೆದರು. ನಂತರ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಲಂಡನ್‌ನ ಹೂಡಿಕೆ ಬ್ಯಾಂಕೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಆರಂಭಿಸಿದರು.

2015ರಲ್ಲಿ ಜ್ಯೂರಿಕ್‌ನಲ್ಲಿ ಗೂಗಲ್ ಕಂಪನಿ ಸೇರಿದ ಅವರು, ಆಮೇಲೆ ನ್ಯೂಯಾರ್ಕ್‌ನಲ್ಲಿ ಗೂಗಲ್ ಸರ್ಚ್‌ನ ನ್ಯೂಸ್ ವಿಭಾಗದಲ್ಲಿ ಕೆಲಸ ಮಾಡಿದರು. ಗೂಗಲ್‌ನಲ್ಲಿ ಅವರಿಗೆ ಆಕರ್ಷಕ ಸಂಬಳ, ಷೇರುಗಳು ಹಾಗೂ ಜಿಮ್, ಯೋಗದಂತಹ ಹಲವು ಸೌಲಭ್ಯಗಳಿದ್ದವು. ಆರಂಭದಲ್ಲಿ ಅವರಿಗೆ ಕೋಡಿಂಗ್ ಕೆಲಸ ತುಂಬಾ ಇಷ್ಟವಾಗುತ್ತಿತ್ತು. ಆದರೆ ಎರಡು ಬಾರಿ ಬಡ್ತಿ ಪಡೆದ ನಂತರ ಜವಾಬ್ದಾರಿಗಳು ಹೆಚ್ಚಾದವು. ಇದರಿಂದಾಗಿ ಕೋಡಿಂಗ್ ಮಾಡುವುದಕ್ಕಿಂತ ಹೆಚ್ಚಾಗಿ, ದಿನವಿಡೀ ಮೀಟಿಂಗ್‌ಗಳಲ್ಲಿಯೇ ಸಮಯ ಕಳೆಯಬೇಕಾಗಿ ಬಂತು.

ಸ್ಕ್ರೀನ್ ನೋಡುತ್ತಾ, ಡೆಡ್‌ಲೈನ್ ಮುಗಿಸುವ ಧಾವಂತ, ನಿರಂತರವಾಗಿ ಬರುವ ನೋಟಿಫಿಕೇಶನ್‌ಗಳ ಒತ್ತಡದಿಂದಾಗಿ ತನ್ನ ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆ ತನ್ನನ್ನು ಮಾನಸಿಕವಾಗಿ ಹೈರಾಣಾಗಿಸುತ್ತಿದೆ ಎಂಬ ಸತ್ಯ ಸಾರಾಗೆ ಅರಿವಾಯಿತು. ಈ ಒತ್ತಡದಿಂದ ಹೊರಬರಲು ಅವರು ಕೆಲಸದ ಸಮಯ ಕಡಿತಗೊಳಿಸಿ ನೋಡಿದರು, ಸೌಂಡ್ ಹೀಲಿಂಗ್ ತರಬೇತಿಯನ್ನೂ ಪಡೆದರು, ಆದರೆ ಅವರಿಗೆ ನೆಮ್ಮದಿ ಮಾತ್ರ ಸಿಗಲಿಲ್ಲ. ಕೇವಲ ಕಾಗದದ ಮೇಲೆ ಪರ್ಫೆಕ್ಟ್ ಆಗಿ ಕಾಣುವ ಈ ಕೆಲಸ ತನ್ನ ಜೀವನಕ್ಕೆ ತೃಪ್ತಿ ನೀಡುತ್ತಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಂಡರು.

ಬದುಕು ಬದಲಿಸಿದ ಥಾಯ್ಲೆಂಡ್ ಪ್ರವಾಸ

2022ರ ಕೊನೆಯಲ್ಲಿ, ಕೈಯಲ್ಲಿ ಯಾವುದೇ ಹೊಸ ಕೆಲಸ ಇಲ್ಲದಿದ್ದರೂ ಸಾರಾ ಗೂಗಲ್ ಹುದ್ದೆಗೆ ರಾಜೀನಾಮೆ ನೀಡಿದರು. ಅದೇ ಸಮಯದಲ್ಲಿ ಅವರ ಸಂಗಾತಿಗೂ ಕೆಲಸ ಹೋಗಿತ್ತು. ಆದರೂ ಧೃತಿಗೆಡದ ಅವರು, ಸ್ಯಾನ್ ಡಿಯಾಗೋದಲ್ಲಿನ ತಮ್ಮ ಅಪಾರ್ಟ್‌ಮೆಂಟ್ ಅನ್ನು ಬಾಡಿಗೆಗೆ ಕೊಟ್ಟು ಜಗತ್ತಿನ ಪ್ರವಾಸಕ್ಕೆ ಹೊರಟರು.

ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳನ್ನು ಸುತ್ತಿ, ಕೊನೆಗೆ ಥೈಲ್ಯಾಂಡ್‌ನ 'ಕೊಹ್ ಟಾವೊ' ಎಂಬ ಪುಟ್ಟ ದ್ವೀಪದಲ್ಲಿ ಆರು ತಿಂಗಳು ತಂಗಿದರು. ಅಲ್ಲಿ ಯಾವುದೇ ಒತ್ತಡವಿಲ್ಲದ ಮುಕ್ತ ಜೀವನವನ್ನು ಅನುಭವಿಸಿದ ಸಾರಾ, ಬಿಡುವಿನ ವೇಳೆಯಲ್ಲಿ ಮೊದಲ ಬಾರಿಗೆ ವಾಟರ್ ಕಲರ್ ಪೇಂಟಿಂಗ್ ಮಾಡಲು ಆರಂಭಿಸಿದರು.

ಯಾವುದೇ ತರಬೇತಿ ಇಲ್ಲದಿದ್ದರೂ ಅಲ್ಲಿನ ಪ್ರಕೃತಿ, ಬೀದಿಗಳು ಮತ್ತು ಅಂಗಡಿಗಳ ದೃಶ್ಯಗಳನ್ನು ಅದ್ಭುತವಾಗಿ ಚಿತ್ರಿಸಿದರು. ಇವುಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಾಗ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು ಹಾಗೂ ಹಲವರು ಆ ಪೇಂಟಿಂಗ್‌ಗಳನ್ನು ಖರೀದಿಸಿದರು. ಇದು ಅವರ ಬದುಕಿಗೆ ದೊಡ್ಡ ತಿರುವು ನೀಡಿತು.

ಸ್ವಿಲ್ ಆರ್ಟ್ಸ್ ಮೂಲಕ ಯಶಸ್ಸಿನ ಹೊಸ ದಾರಿ

ಪ್ರವಾಸ ಮುಗಿಸಿ ಸ್ಯಾನ್ ಡಿಯಾಗೋಗೆ ಮರಳಿದ ಸಾರಾ, ತಮ್ಮ ಪೇಂಟಿಂಗ್ ಆಸಕ್ತಿಯನ್ನೇ ಪೂರ್ಣಾವಧಿ ವೃತ್ತಿಯಾಗಿಸಲು ನಿರ್ಧರಿಸಿದರು. ಅವರು 'ಸ್ವಿಲ್ ಆರ್ಟ್ಸ್' ಎಂಬ ಸ್ವಂತ ಆರ್ಟ್ ಸ್ಟುಡಿಯೋ ಆರಂಭಿಸಿ, ತಮ್ಮ ಚಿತ್ರಗಳು ಮತ್ತು ಗೃಹಾಲಂಕಾರದ ವಸ್ತುಗಳನ್ನು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಮಾರಾಟ ಮಾಡಲು ಆರಂಭಿಸಿದರು. ಗೂಗಲ್ ಸಂಬಳಕ್ಕೆ ಹೋಲಿಸಿದರೆ ಈಗ ಅವರ ಸಂಪಾದನೆ ಕಡಿಮೆ ಇರಬಹುದು, ಆದರೆ ಅವರಿಗೆ ನೆಮ್ಮದಿ ಸಿಕ್ಕಿದೆ.

ಅವರ ಪ್ರಕಾರ, "ಯಶಸ್ಸು ಎಂದರೆ ಕೇವಲ ಹಣ ಅಥವಾ ಉತ್ಪಾದಕತೆಯಲ್ಲ; ನಮ್ಮ ಕಲೆಯ ಮೂಲಕ ಜನರಲ್ಲಿ ಒಂದು ಒಳ್ಳೆಯ ಭಾವನೆ ಅಥವಾ ಹಳೆಯ ನೆನಪು ಮೂಡಿದರೆ ಅದೇ ನಿಜವಾದ ಯಶಸ್ಸು." ಕಾರ್ಪೊರೇಟ್ ಜೀವನವನ್ನು ಬಿಟ್ಟು ಕಲೆಯ ಮೂಲಕ ನೆಮ್ಮದಿ ಕಂಡುಕೊಂಡ ಸಾರಾ ಅವರ ಕಥೆ, ಜೀವನದಲ್ಲಿ ಸುಖ-ಶಾಂತಿ ಹುಡುಕುವ ಎಲ್ಲರಿಗೂ ದೊಡ್ಡ ಸ್ಫೂರ್ತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+