ಮುಂಬೈ,: ತೆಂಗಿನ ಮರ ಬಿದ್ದು ಮಾಜಿ ವಾರ್ತಾ ನಿರೂಪಕಿ ಸಾವು!
ಮುಂಬೈ, ಜುಲೈ 23 : ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ವೇಳೆ ತಲೆ ಮೇಲೆ ತೆಂಗಿನ ಮರ ಬಿದ್ದು ತೀವ್ರ ಗಾಯಗೊಂಡಿದ್ದ ದೂರದರ್ಶನದ ಮಾಜಿ ವಾರ್ತಾ ನಿರೂಪಕಿ ಶನಿವಾರ ಸಾವನ್ನಪ್ಪಿದ್ದಾರೆ.
ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ದೂರದರ್ಶನದ ಮಾಜಿ ವಾರ್ತಾ ನಿರೂಪಕಿ ಹಾಗೂ ಯೋಗ ಶಿಕ್ಷಕಿ ಕಾಂಚನ್ ನಾಥ್ (58) ಅವರ ಮೇಲೆ ತೆಂಗಿನ ಮರವೊಂದು ಬಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಆದರೆ, ಚಿಕಿತ್ಸೆ ಫಲಿಸಿದೆ ಶನಿವಾರ ಕೊನೆಯುಸಿರೆಳೆದರು.

ಶುಕ್ರವಾರ ಮುಂಬೈನ ಚೆಂಬೂರ್‌ನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಸಂಭವಿಸಿದ ದುರ್ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ ಘಟನೆಗೆ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಕಾಂಚನ್ ಅವರ ಪತಿ ರಜತ್ ನಾಥ್ ಅವರು ಆರೋಪಿಸಿದ್ದಾರೆ. ತೆಂಗಿನ ಮರ ಯಾವುದೇ ಕ್ಷಣ ಬೀಳಬಹುದು ಎಂದು ದೂರು ನೀಡಿದ್ದರು. ಮರವನ್ನು ಕಡಿಯಲು ಪಾಲಿಕೆ ನಿರಾಕರಿಸಿತ್ತು ಎಂದು ದೂರಿದ್ದಾರೆ.












Click it and Unblock the Notifications