Get Updates
Get notified of breaking news, exclusive insights, and must-see stories!

Manohar Singh Gill: ಕಾಂಗ್ರೆಸ್ ಕೇಂದ್ರ ಮಾಜಿ ಸಚಿವ ನಿಧನ

ಬೆಂಗಳೂರು, ಅಕ್ಟೋಬರ್ 15: ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ, ಕೇಂದ್ರದ ಮಾಜಿ ಸಚಿವ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಕಾಂಗ್ರೆಸ್ ನಾಯಕ 'ಮನೋಹರ್ ಸಿಂಗ್ ಗಿಲ್' ದಕ್ಷಿಣ ದೆಹಲಿಯ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಅವರ ನಿಧನಕ್ಕೆ ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಭಾರತದ ಮುಖ್ಯ ಚುನಾವಣೆ ಆಯುಕ್ತರಾಗಿ ಅವರು 1996 ರಿಂದ 2001 ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಅದಕ್ಕು ಮೊದಲು ಅವರು ಕಾಂಗ್ರೆಸ್ ಸರ್ಕಾರದದಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮತ್ತು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೇಂದ್ರದ ವಿವಿಧ ಕಾತೆ ನಿರ್ವಹಿಸಿದ ಅವನುಭವ ಹೊಂದಿದ್ದರು.

Former Chief Election Commissioner of India Manohar Singh Gill Passes Away

ಪಂಜಾಬ್ ಕೇಡರ್‌ನಿಂದ ಮಾಜಿ ಭಾರತೀಯ ಆಡಳಿತ ಸೇವೆಗಳ (IAS) ಅಧಿಕಾರಿಯಾದ 'ಮನೋಹರ್ ಸಿಂಗ್ ಗಿಲ್' ಅವರು 2004 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ರಾಜ್ಯಸಭೆಗೆ ಆಯ್ಕೆ ಆದರು. 1980 ರ ದಶಕದಲ್ಲಿ ಪಂಜಾಬ್‌ನ ಕೃಷಿ ಕಾರ್ಯದರ್ಶಿಯಾಗಿ ಸೇವೆ ನೀಡಿದರು. ಅವರು 'ಆನ್ ಇಂಡಿಯನ್ ಸಕ್ಸಸ್ ಸ್ಟೋರಿ: ಅಗ್ರಿಕಲ್ಚರ್ ಅಂಡ್ ಕೋಆಪರೇಟಿವ್ಸ್' ಎಂಬ ಕೃತಿಯನ್ನು ಸಹ ಬರೆದಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ಸಂತಾಪ
ಮಾಜಿ ಕೇಂದ್ರ ಸಚಿವ ಪದ್ಮವಿಭೂಷಣ ಶ್ರೀ ಮನೋಹರ್ ಸಿಂಗ್ ಗಿಲ್ ಜಿ ಅವರ ನಿಧನಕ್ಕೆ ಅತೀವ ದುಃಖವಾಗಿದೆ. ಯುಪಿಎ ಸರ್ಕಾರದಲ್ಲಿ ಮೌಲ್ಯಯುತ ಸಹೋದ್ಯೋಗಿಯಾಗಿ ಮತ್ತು ಮೊದಲು ನಾಗರಿಕ ಸೇವಕರಾಗಿ, ಕ್ರೀಡೆ, ಚುನಾವಣಾ ಪ್ರಕ್ರಿಯೆಗಳು ಮತ್ತು ಕೃಷಿಯಂತಹ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು ಸ್ಮರಣೀಯ.

ಮೃತರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ಹಾಗೂ ಅಗಲಿದ ಜೀವಕ್ಕೆ ಚಿರಶಾಂತಿ ಸಿಲು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಅವರು ಸಂತಾಪ ಸೂಚಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+