ವೀರಪ್ಪನ್ ಹತ್ಯೆ ರೂವಾರಿಗೆ ಮತ್ತೊಂದು ದೊಡ್ಡ ಜವಾಬ್ದಾರಿ!

ನವದೆಹಲಿ, ಡಿಸೆಂಬರ್ 6; ಕರ್ನಾಟಕ ಹಾಗೂ ತಮಿಳುನಾಡಿಗೆ ಕಂಟಕವಾಗಿದ್ದ ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ಪೂರ್ಣ ವಿರಾಮ ಹಾಕುವಲ್ಲಿ ಪ್ರಮುಖ ಕಾರಣವಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ.ವಿಜಯಕುಮಾರ ಅವರನ್ನು ಕೇಂದ್ರ ಸರ್ಕಾರ ತನ್ನ ಗೃಹ ಸಚಿವಾಲಯಕ್ಕೆ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಿಸೆಂಬರ್ 3 ರಂದು ಈ ನೇಮಕಾತಿ ಮಾಡಿದ್ದು, ಕೆ.ವಿಜಯಕುಮಾರ ಅವರು, ಒಂದು ವರ್ಷದ ಅವಧಿ ವರೆಗೆ ಕೇಂದ್ರ ಸರ್ಕಾರಕ್ಕೆ ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ವೀರಪ್ಪನ್ ಹತ್ಯೆ ರೂವಾರಿಗೆ ಮತ್ತೊಂದು ದೊಡ್ಡ ಜವಾಬ್ದಾರಿ!

1975 ರ ಬ್ಯಾಚ್ ನ ತಮಿಳುನಾಡು ಕೇಡರ್ ನ ಐಪಿಎಸ್ ಅಧಿಕಾರಿಯಾಗಿರುವ ಕೆ ವಿಜಯ ಕುಮಾರ್ ಅವರು, ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಮಹಾ ನಿರ್ದೇಶಕರಾಗಿ ಹಾಗೂ ಹೈದ್ರಾಬಾದ್ ನ ರಾಷ್ಟೀಯ ಪೊಲೀಸ್ ಅಕಾಡೆಮಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಕೇಂದ್ರ ಸರ್ಕಾರ ಅವರನ್ನು ಜಮ್ಮು ಮತ್ತು ಕಾಶ್ಮೀರದ ಲೆಪ್ಟಿನಂಟ್ ಗವರ್ನರ್ ಗೆ ವಿಶೇಷ ಸಲಹೆಗಾರರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+