ಕೊಲೆ ಆಗಿದ್ದು 'ಬಲವಂತ'ದ ಸಂಭೋಗದಿಂದ ಅಲ್ಲ!

ನವದೆಹಲಿ, ನ. 5: ಬಲವಂತದ ಲೈಂಗಿಕ ಕ್ರಿಯೆ ರೇಪ್ ಅಲ್ಲ! ಹೀಗೆಂದು ದೆಹಲಿಯ ಹೈ ಕೋರ್ಟ್ ಅಕ್ಟೋಬರ್ 31 ರಂದು ಗೊಂದಲಕಾರಿ ತೀರ್ಪು ನೀಡಿದೆ.

60 ವರ್ಷ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ವೊಂದಕ್ಕೆ ಸಂಬಂಧಿಸಿ ದೆಹಲಿಯ ವಿಚಾರಣಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಮೇಲ್ಮನವಿ ಸಲ್ಲಿಸಿದ್ದ. ಈ ಮನವಿಯನ್ನು ಆಲಿಸಿದ ನ್ಯಾಯಾಲಯ ವೈದ್ಯಕೀಯ ವರದಿ ಆಧರಿಸಿ ತೀರ್ಮಾನ ನೀಡಿದೆ.[ಅತ್ಯಾಚಾರ ಆರೋಪ, ಸಿಎಂ ಆಪ್ತ ಪಕ್ಷದಿಂದ ಅಮಾನತು]

rape

ಮಹಿಳೆಯ ದೇಹದ ಬೇರೆ ಯಾವುದೇ ಭಾಗದಲ್ಲಿ ಗಾಯಗಳಾಗಿಲ್ಲ. ಇದರಿಂದ ಆಕೆ ಲೈಂಗಿಕ ಕ್ರಿಯೆಯನ್ನು ವಿರೋಧಿಸಿದ್ದಳು ಎಂಬ ಅಂಶವೂ ಮನದಟ್ಟಾಗುವುದಿಲ್ಲ. ಅಲ್ಲದೇ ವರದಿ ಹೇಳುವಂತೆ ಇಬ್ಬರು ಘಟನೆ ನಡೆಯುವ ವೇಳೆ ಮದ್ಯ ಸೇವಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಗುಪ್ತಾಂಗಗಳಲ್ಲಷ್ಟೇ ಗಾಯಗಳಾಗಿದ್ದು ದೇಹದ ಉಳಿದ ಭಾಗದಲ್ಲಿ ಗಾಯಗಳಾಗಿಲ್ಲ. ಹೀಗಾಗಿ ಬಲವಂತದ ಲೈಂಗಿಕ ಕ್ರಿಯೆಯಿಂದ ಆಕೆ ಸಾವಿಗೀಡಾಗಿರಬಹುದೇ ವಿನಃ ಆಕೆಯನ್ನು ಕೊಲೆ ಮಾಡುವ ಉದ್ದೇಶ ಆರೋಪಿಗೆ ಇಲ್ಲವಾಗಿರಬಹುದು ಎಂದು ಹೇಳಿದೆ.

ಮನೆಗೆಲಸ ಮಾಡಿಕೊಂಡಿದ್ದ ಮಂಜು ಕಾ ಟಿಲ್ಲಾ ಎಂಬ 60 ವರ್ಷದ ಮಹಿಳೆಯ ಮೇಲೆ ಅಚ್ಛೆ ಲಾಲ್ ಎಂಬಾತ ಅತ್ಯಾಚಾರ ಎಸಗಿದ್ದ. ಈತ ಆಕೆಯನ್ನು ಅಮ್ಮಾ ಎಂದೇ ಸಂಬೋಧಿಸುತ್ತಿದ್ದ.

ಬಲವಂತದ ಲೈಂಕಿಕ ಕ್ರಿಯೆ ವೇಳೆ ಉಂಟಾದ ಅವಘಡದಿಂದ ಆಕೆ ಸಾವನ್ನಪ್ಪಿರಬಹುದು. ಹಾಗಾಗಿ ಇದನ್ನು ಉದ್ದೇಶಿತ ಕೊಲೆ ಎಂದು ಕರೆಯಲಾಗುವುದಿಲ್ಲ ಎಂದು ತೀರ್ಪು ನೀಡಿದ್ದು ಆರೋಪಿಯ ಜೀವಾವಧಿ ಶಿಕ್ಷೆಗೆ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಪ್ರದೀಪ್ ನದ್ರಾಜೋಗ್ ಮತ್ತು ಮುಕ್ತಾ ಗುಪ್ತಾ ಅವರಿದ್ದ ಪೀಠ ಇಂಥದ್ದೊಂದು ಗೊಂದಲಕಾರಿ ತೀರ್ಮಾನ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+