ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿ ಪ್ರಕಟ: ಹಲವು ಅಚ್ಚರಿಯ ಹೆಸರುಗಳು
ನವದೆಹಲಿ, ಅಕ್ಟೋಬರ್ 12: ಭಾರತದ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು ಮುಖೇಶ್ ಅಂಬಾನಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಇದರ ಹೊರತಾಗಿಯೂ ಈ ಬಾರಿಯ ಪಟ್ಟಿಯಲ್ಲಿ ಸಾಕಷ್ಟು ಕುತೂಹಲದ ಅಂಶಗಳು ಇವೆ.
ರಿಲಯನ್ಸ್ ಸಮೂಹ ಮಾಲೀಕ ಮುಖೇಶ್ ಅಂಬಾನಿ ಅವರು 365 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಭಾರತದ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.
ಎರಡನೇ ಸ್ಥಾನವನ್ನು ಗೌತಮ್ ಅದಾನಿ ಪಡೆದುಕೊಂಡಿದ್ದು, ಒಂದೇ ವರ್ಷದಲ್ಲಿ ಎಂಟು ಸ್ಥಾನ ಮೇಲೇರಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಗೌತಮ್ ಅದಾನಿಯ ಒಟ್ಟು ಆಸ್ತಿ 1 ಲಕ್ಷ ಕೋಟಿಗೂ ಹೆಚ್ಚು.
ಮೂರನೇ ಸ್ಥಾನವನ್ನು ಅಶೋಕ್ ಲೈಲಾಂಡ್ ಸಂಸ್ಥೆಯ ಮಾಲೀಕರಾದ ಹಿಂದೂಜಾ ಸಹೋದರರು ಹೊಂದಿದ್ದಾರೆ. ಇವರ ಒಟ್ಟು ಆಸ್ತಿಯೂ ಸಹ 1 ಲಕ್ಷ ಕೋಟಿಗೂ ಹೆಚ್ಚು ಇದೆ, ಆದರೆ ಗೌತಮ್ ಅದಾನಿಗಿಂತಲೂ ಸ್ವಲ್ಪವೇ ಕಡಿಮೆ ಸಂಪತ್ತು ಹೊಂದಿದ್ದಾರೆ.

ಪಲ್ಲೋಂಜಿ ಮಿಸ್ತ್ರಿ ನಾಲ್ಕನೇ ಸ್ಥಾನದಲ್ಲಿ
ಶಪೂರ್ಜಿ ಪಲ್ಲೋಂಜಿ ಗ್ರೂಪ್‌ನ ಪಲ್ಲೋಂಜಿ ಮಿಸ್ತ್ರಿ ಅವರು ಸಹ ಒಂದು ಲಕ್ಷ ಕೋಟಿಗಿಂತಲೂ ಅಧಿಕ ಆಸ್ತಿಯನ್ನು ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಅವರು ಐದನೇ ಸ್ಥಾನದಲ್ಲಿದ್ದು ಅವರ ಒಟ್ಟು ಆಸ್ತಿ ಒಂದು ಲಕ್ಷ ಕೋಟಿಗೆ ಸ್ವಲ್ಪವೇ ಕಡಿಮೆ ಇದೆ.

ಸತತ 12ನೇ ವರ್ಷ ಮುಖೇಶ್ ಅಂಬಾನಿ ಟಾಪ್
ಮುಖೇಶ್ ಅಂಬಾನಿ ಅವರು ಸತತ 12 ನೇ ವರ್ಷ ಭಾರತದ ದೊಡ್ಡ ಶ್ರೀಮಂತ ಪಟ್ಟವನ್ನು ಕಾಯ್ದುಕೊಂಡಿದ್ದಾರೆ. ವಿಶೇಷವೆಂದರೆ ಭಾರತದ ಎರಡನೇ ಶ್ರೀಮಂತ ಪಟ್ಟಿಯಲ್ಲಿರುವವರಿಗೂ ಮುಖೇಶ್ ಅಂಬಾನಿಗೂ ಅಜಗಜಾಂತರ ಅಂತರವಿದ್ದು, ಅಂಬಾನಿಯನ್ನು ಹಿಂದಿಕ್ಕುವುದು ಸುಲಭದ ಮಾತಲ್ಲ.

ಭಾರಿ ಕುಸಿತ ಕಂಡಿರುವ ಅಜೀಮ್ ಪ್ರೇಮ್‌ಜಿ
ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಸಾಫ್ಟ್‌ವೇರ್ ದಿಗ್ಗಜ ಅಜೀಮ್ ಪ್ರೇಮ್‌ಜೀ ಭಾರಿ ಕುಸಿತ ಕಂಡಿದ್ದು 17 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ತಮ್ಮ ಪಾಲಿನ ಆಸ್ತಿಯನ್ನು ದಾನ ಮಾಡಿದ ಕಾರಣ ಹೀಗೆ ಹಠಾತ್ ಕುಸಿತ ಕಂಡಿದ್ದಾರೆ.

ಹೊಸ ಹೆಸರುಗಳು ಸಹ ಸೇರ್ಪಡೆಗೊಂಡಿವೆ
ನೂರು ಶ್ರೀಮಂತರ ಪಟ್ಟಿಯಲ್ಲಿ ಕೆಲವರು ಹೊಸಬರು ಸಹ ಸೇರಿಕೊಂಡಿದ್ದಾರೆ. ಬೈಜೂಸ್ ಆಪ್‌ನ ಮಾಲೀಕ ಮತ್ತು ಸಿಇಒ ಬೈಜೂ ರವಿಂದ್ರನ್ 72 ನೇ ಸ್ಥಾನದಲ್ಲಿದ್ದಾರೆ. ಹಲ್ದಿರಾಮ್ ಸ್ನ್ಯಾಕ್ಸ್‌ನ ಮನೋಹರ್ ಲಾಲ್ ಮತ್ತು ಮಧುಸೂದನ್ ಅಗರ್ವಾಲ್ 86 ನೇ ಸ್ಥಾನದಲ್ಲಿದ್ದಾರೆ.

ಶ್ರೀಮಂತಿಕೆಯಲ್ಲಿ ಇಳಿಕೆ
ಆದರೆ ಫೋರ್ಬ್ಸ್ ಹೇಳಿರುವ ಪ್ರಕಾರ ದೇಶದ ಶ್ರೀಮಂತರ ಶ್ರೀಮಂತಿಕೆಯಲ್ಲಿ ಸಹ ಇಳಿಕೆ ಆಗಿದೆ. ಶ್ರೀಮಂತರ ಆಸ್ತಿ, ಹಣದಲ್ಲಿ 8% ಇಳಿಕೆ ಆಗಿದೆಯೆಂದು ಫೋರ್ಬ್ಸ್ ಹೇಳಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್‌ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications