ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಸೇನಾಧಿಕಾರಿ ಹಾಕಿದ್ದ ಮೊದಲ ರಜೆಯೇ ಕೊನೆ ರಜೆಯಾಯ್ತು !

|
Google Oneindia Kannada News

ಶ್ರೀನಗರ, ಮೇ 10: ಉಗ್ರರ ಗುಂಡೇಟಿಗೆ ಬಲಿಯಾದ ಲೆಫ್ಟನೆಂಟ್ ಉಮರ್ ಫಯಾಜ್ ಅವರು ಇತ್ತೀಚೆಗಷ್ಟೇ ತಮ್ಮ ಸಂಬಂಧಿಯೊಬ್ಬರ ಮದುವೆಗೆಂದು ರಜೆ ಹಾಕಿದ್ದರು.

ಇತ್ತೀಚೆಗಷ್ಟೇ ಸೇನೆಗೆ ಸೇರಿದ್ದ ಅವರ ಈ ರಜೆ ಅವರ ಪಾಲಿನ ಕೊನೆಯ ರಜೆಯಾಗಿದ್ದು ವಿಪರ್ಯಾಸ ಎಂದು ಸೇನಾ ಮೂಲಗಳು ತಿಳಿಸಿವೆ.[ಕಾಶ್ಮೀರದಲ್ಲಿ ಗುಂಡೇಟು ತಿಂದ ಸೇನಾಧಿಕಾರಿಯ ಶವ ಪತ್ತೆ]

For Army officer killed by militants, his first leave became his last

ಹಿರಿಯ ಸೇನಾಧಿಕಾರಿಯೊಬ್ಬರ ಪ್ರಕಾರ, 129ನೇ ಬ್ಯಾಚ್ ಕೆಡೆಟ್ ನ ಮೂಲಕ ಸೇನೆಗೆ ಭರ್ತಿಯಾದ ಉಮರ್ ಫಯಾಜ್ ಅವರು, ಸೇವೆಗೆ ಸೇರಿದಾಗಿನಿಂದ ರಜೆ ಹಾಕಿರಲಿಲ್ಲ. ಸಂಬಂಧಿಯೊಬ್ಬರ ಮದುವೆ ಸಮಾರಂಭಕ್ಕಾಗಿ ಇದೇ ಮೊದಲ ಬಾರಿಗೆ ಅವರು ರಜೆ ಹಾಕಿದ್ದರು. ಆದರೆ, ಅವರ ಈ ರಜೆ ಅವರ ಕೊನೆಯ ರಜೆಯೂ ಆಗಿದೆ. ಅಲ್ಲದೆ, ಸಂಬಂಧಿಕರ ಮದುವೆ ಮನೆ ಈಗ ಶೋಕದ ನಿವಾಸವಾಗಿದೆ ಎಂದು ಹಿರಿಯ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾತ್ರಿ ಉಮರ್ ಮನೆಯೊಳಗೆ ನುಗ್ಗಿದ್ದ ಅಜ್ಞಾತ ವ್ಯಕ್ತಿಗಳು, ಮನೆಯಿಂದ ತಮ್ಮ ಜತೆ ತೆರಳುವಂತೆ ಉಮರ್ ಅವರಿಗೆ ಸೂಚಿಸಿದ್ದರಲ್ಲದೆ, ಅವರ ಮನೆಯವರಿಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರು.

ಆ ಅಜ್ಞಾತ ವ್ಯಕ್ತಿಗಳ ಜತೆ ತೆರಳಿದ ಉಮರ್ ಅವರ ಮೃತದೇಹ ಅವರ ಮನೆಯಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಶೋಪಿಯಾನ್ ಜಿಲ್ಲೆಯ ಹೆರ್ಮನ್ ಚೌಕ್ ಪ್ರಾಂತ್ಯದಲ್ಲಿ ಬುಧವಾರ ಪತ್ತೆಯಾಗಿದ್ದು, ನಾಗರಿಕರ ಆಕ್ರೋಶವನ್ನು ಕೆರಳಿಸಿದೆ.

English summary
Lieutenant Ummer Fayaz, 23, from the troubled region of Kulgam district, was posted with 2 Rajputana Rifles and had applied for leave to attend a cousin's wedding. But, unfortunately his first leave become his last leave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X