ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಕಲ್ಲು ತೂರುವ ದುಷ್ಕರ್ಮಿಗಳಲ್ಲಿ ಅಸಮಾಧಾನ: ವೈರಲ್ ವಿಡಿಯೋ

|
Google Oneindia Kannada News

ಶ್ರೀನಗರ, ಜೂನ್ 4: ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಪ್ರತ್ಯೇಕತಾವಾದಿ ಉಗ್ರ ಸಂಘಟನೆ ಹುರಿಯತ್ ಕಾನ್ಫರೆನ್ಸ್ ವಿರುದ್ಧ ಅಲ್ಲಿನ ಕೆಲವು ಪ್ರತಿಭಟನಾಕಾರರಲ್ಲಿ ಅಸಮಾಧಾನ ಮೂಡಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆಯ ವಾಹನ ಹರಿದು ಮೃತಪಟ್ಟ ಯುವಕನ ಸಂಬಂಧಿಕರು ಹುರಿಯತ್ ಮುಖಂಡರು ಹಾಗೂ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಶಾ ಗೀಲಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

ಪ್ರತಿಭಟನಾಕಾರರ ಮೇಲೆ ಹರಿದ ಸಿಆರ್‌ಪಿಎಫ್ ವಾಹನಪ್ರತಿಭಟನಾಕಾರರ ಮೇಲೆ ಹರಿದ ಸಿಆರ್‌ಪಿಎಫ್ ವಾಹನ

ಶ್ರೀನಗರದಲ್ಲಿ ಶುಕ್ರವಾರ ಪ್ರತಿಭಟನಾನಿರತರು ಸಿಆರ್‌ಪಿಎಫ್ ವಾಹನದ ಮೇಲೆ ದಾಳಿ ನಡೆಸಿದ್ದರು. ಅವರಿಂದ ತಪ್ಪಿಸಿಕೊಳ್ಳಲು ವಾಹನ ಚಾಲಕ ಗುಂಪಿನ ನಡುವೆಯೇ ವಾಹನ ಚಾಲನೆ ಮಾಡಿದಾಗ ಅದಕ್ಕೆ ಮೂವರು ಸಿಲುಕಿ ಗಾಯಗೊಂಡಿದ್ದರು. ಅದರಲ್ಲಿ ಕೈಸರ್ ಅಹ್ಮದ್ ಎಂಬಾತ ಮೃತಪಟ್ಟಿದ್ದ.

followers of separatists unhappy on their leaders video viral

ಈ ಘಟನೆ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳಲು ಕಾರಣವಾಗಿದೆ. ಸಿಆರ್‌ಪಿಎಫ್ ಅನ್ನು ಗುರಿಯಾಗಿರಿಸಿಕೊಂಡು ದಾಳಿಗಳು ನಡೆಯುತ್ತಿವೆ.

ಆದರೆ ಕೈಸರ್‌ನ ಸಾವಿನ ಬಳಿಕ ಸಭೆ ಸೇರಿದ್ದ ಆತನ ಸಂಬಂಧಿಕರು ಮತ್ತು ಸ್ನೇಹಿತರು ಪ್ರತ್ಯೇಕತಾವಾದಿಗಳ ವಿರುದ್ಧ ಹರಿಹಾಯ್ದಿರುವ ವಿಡಿಯೋ ಈಗ ವೈರಲ್ ಆಗಿದೆ.

ಗೀಲಾನಿ ಒಬ್ಬ ಕಪಟ, ಬೂಟಾಟಿಕೆಯ ವ್ಯಕ್ತಿ ಎಂದು ಆರೋಪಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪೊಲೀಸ್ ಪಾರ್ಟಿ ಮೇಲೆ ಗ್ರೆನೇಡ್ ದಾಳಿ: ಹತ್ತು ಮಂದಿಗೆ ಗಾಯಪೊಲೀಸ್ ಪಾರ್ಟಿ ಮೇಲೆ ಗ್ರೆನೇಡ್ ದಾಳಿ: ಹತ್ತು ಮಂದಿಗೆ ಗಾಯ

ತಿಹಾರ್ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಹೋರಾಟಗಾರ ಶಬೀರ್ ಶಾ ಮಗಳು ದೆಹಲಿ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ಶೇ 97.8 ಅಂಕಗಳನ್ನು ಪಡೆದಿದ್ದಳು. ಅದನ್ನು ಉದಾಹರಣೆಯಾಗಿ ನೀಡಿದ್ದ ಗೀಲಾನಿ, ಆಕೆಯನ್ನು ರೋಲ್ ಮಾಡೆಲ್ ಆಗಿಸಿಕೊಳ್ಳಬೇಕು ಎಂದು ಹೇಳಿದ್ದರು.

ಆದರೆ, ಅದೇ ಗೀಲಾನಿ ಕ್ರಿಶ್ಚಿಯನ್ ಶಾಲೆಗಳಿಗೆ ಮಕ್ಕಳನ್ನು ಕಳುಹಿಸದಂತೆಯೂ ಕರೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಗೀಲಾನಿಯ ದ್ವಿಮುಖ ನೀತಿ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ.

English summary
A video of relatives of stone pelter who died after being run over by CRPF vehicle, slams Hurriyat leaders goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X