ಮತ್ತೊಮ್ಮೆ ಲಾಲೂ ಹಾಗೂ ಆಲೂ ಜೋಕ್ಸ್
ಬೆಂಗಳೂರು, ಸೆ.30: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸಂಚಲನ ಶುರುವಾಯಿತು.
ಲಾಲೂ ಸೇರಿದಂತೆ ಇತರೆ ದೋಷಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 3ರಂದು ನ್ಯಾಯಾಧೀಶರಾದ ಪಿಕೆ ಸಿಂಗ್ ಘೋಷಿಸಲಿದ್ದಾರೆ. ಆದರೆ, ದೇಶದ ಜನತೆ ಲಾಲೂ ಹಾಗೂ ಆಲೂ ಜೋಕ್ ಗಳನ್ನು ಮತ್ತೊಮ್ಮೆ ನೆನಸಿಕೊಳ್ಳುವ ಮೂಲಕ ಲಾಲೂ ಅಭಿಮಾನಿಗಳು ಬೆಚ್ಚುವಂತೆ ಮಾಡಿದ್ದಾರೆ.
ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿತ್ತು. ಈ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಲಾಲೂ ಪ್ರಸಾದ್ ಯಾದವ್ ಜೈಲಿಗೂ ಹೋಗಿಬಂದಿದ್ದರು. ಜಬ್ ತಕ್ ಸಮೋಸೆ ಮೇ ರಹೇಗಾ ಆಲೂ ತಬ್ ತಕ್ ಬಿಹಾರ್ ಮೇ ಲಾಲೂ ಎಂಬ ವಾಕ್ಯ ದೇಶವ್ಯಾಪ್ತಿ ಫೇಮಸ್ ಆಗಿತ್ತು. ಇದೇ ಮುಂತಾದ ಹಾಸ್ಯ ವಾಕ್ಯಗಳ ಮಹಾಪೂರ ಟ್ವೀಟರ್ ನಲ್ಲಿ ಹರಿದಿದೆ ನೋಡಿ...
|
ಡಿಗ್ಗಿಗೆ ನೋವಾಗಿದೆಯಂತೆ
ಲಾಲೂ ಪ್ರಸಾದ್ ಯಾದವ್ ಜೈಲು ಸೇರಿದ್ದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ನೋವಾಗಿದೆಯಂತೆ
|
ವರ್ಮಾ ಸಿನಿಮಾ ಮಾಡ್ಬೇಕು
ರಾಮ್ ಗೋಪಾಲ್ ಏನಾದರೂ ಲಾಲೂ ಬಗ್ಗೆ ಸಿನಿಮಾ ಮಾಡಿದರೆ ಅದರ ಹೆಸರು Godfodder
|
ಒಮರ್ ಅಬ್ದುಲ್ಲಾ ಟ್ವೀಟ್ ಬಗ್ಗೆ
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲಾ ಅನಧಿಕೃತ ಖಾತೆಯಿಂದ ಟ್ವೀಟ್ ಗೆ ಪ್ರತಿ ಟ್ವೀಟ್
|
ಗಂಡ ಜೈಲಿಗೆ ಹೋದರೆ
ಗಂಡ ಜೈಲಿಗೆ ಹೋದರೆ ರಾಬ್ಡಿ ದೇವಿ ಗತಿ
|
ಲಾಲೂ ಅಂದರ್ ಆಗಿದ್ದು
ಲಾಲೂ ಅಂದರ್ ಆಗಿದ್ದು ಸಿಬಿಐಗೆ ಬೈಯಬೇಕಾ
|
ಲಾಲೂ ಬೇಕಿಲ್ಲ
ನಿತೀಶ್ ಇರುವಾಗ ಬಿಹಾರದಲ್ಲಿ ಕಾಂಗ್ರೆಸ್ಸಿಗೆ ಲಾಲೂ ಏಕೆ
|
ಲಾಲೂ ಮೇವು
ರಾಸುಗಳಿಗೂ ಲಾಲೂಗೂ ಏನು ವ್ಯತ್ಯಾಸ
|
ಪ್ರಾಣಿಗಳು ಸ್ವಾಗತಿಸುತ್ತಿದ್ದವು
ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಾಣಿಗಳು ಸ್ವಾಗತಿಸುತ್ತಿದ್ದವು
|
ಲಾಲೂ ಸಿಬಲ್
ಲಾಲೂ ಸಿಬಲ್ ಹಾಗೂ ಕಾಂಗ್ರೆಸ್ ದೋಸ್ತಿ












Click it and Unblock the Notifications