ಅರುಣ್ ಜೇಟ್ಲಿ ಬಜೆಟ್ 2016: ತೆರಿಗೆದಾರರ ನಿರೀಕ್ಷೆಗಳೇನು?

Posted By:
Subscribe to Oneindia Kannada

ನವದೆಹಲಿ, ಫೆ. 28: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಫೆಬ್ರವರಿ 29ಕ್ಕೆ 2016-17ನೇ ಸಾಲಿನ ಬಜೆಟ್ ಮಂಡಿಸಲಿದೆ. ಇದಕ್ಕಾಗಿ ಜಯಂತ್ ಸಿನ್ಹಾ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಯನ್, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರನ್ನೊಳಗೊಂಡ ಜೇಟ್ಲಿ ನೇತೃತ್ವದ ತಂಡ 2016ನೇ ಸಾಲಿನ ಬಜೆಟ್ ಸಿದ್ಧಪಡಿಸುತ್ತಿದೆ.

ದೇಶ ಭಾರಿ ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ತೆರಿಗೆ ವ್ಯವಸ್ಥೆ ಬದಲಾವಣೆ, ಸರಳೀಕೃತ ಪಾವತಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿ ಹಾಗೂ ನೇರ ತೆರಿಗೆಯಲ್ಲಿ ಕಳೆದ ಬಾರಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. [ಬಜೆಟ್: ಆದಾಯ ತೆರಿಗೆ ವಿನಾಯಿತಿ, ಪಾವತಿ ಮಿತಿ]

ಸುಕನ್ಯಾ ಸಮೃದ್ಧಿ ಯೋಜನೆ, ಗಂಗಾ ಸ್ವಚ್ಛತಾ ಯೋಜನೆ, ಪಿಂಚಣಿ ಫಂಡ್ ಗೆ ನೀಡುವ ಮೊತ್ತ ಕೂಡಾ 80ಸಿ ಅಡಿಗೆ ಬರುವಂತೆ ಮಾಡಲಾಗಿತ್ತು. ಈ ಬಾರಿ ಈ ಪಟ್ಟಿಗೆ ಇನ್ನಷ್ಟು ಯೋಜನೆಗಳನ್ನು ಸೇರಿಸುವ ನಿರೀಕ್ಷೆಗಳಿವೆ. ಪ್ರಮುಖ ಬೇಡಿಕೆ, ನಿರೀಕ್ಷೆಗಳು ಹೀಗಿವೆ: [2015ರ ಕೇಂದ್ರ ಬಜೆಟ್ ಮುಖ್ಯಾಂಶಗಳು]

Arun Jaitley

* ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2,50,000 ರು ನಿಂದ 3,00,000 ರು ಏರಿಕೆ ಮಾಡಬೇಕು.
* 80ಸಿ ಅನ್ವಯ (ಆದಾಯ ತೆರಿಗೆ ಕಾಯ್ದೆ 1961) ಕಡಿತಗೊಳ್ಳುವ ತೆರಿಗೆ ಮಿತಿಯನ್ನು 1,50,000 ರು ದಿಂದ 2,00,000 ರು ಗೆ ಏರಿಸಬೇಕು.
* ಆರೋಗ್ಯ ವಿಮೆ, ಚೆಕ್ ಅಪ್..ಇತ್ಯಾದಿ ಸಂಬಂಧಿಸಿದ ತೆರಿಗೆ ಮಿತಿಯನ್ನು ಏರಿಕೆ ಮಾಡಬೇಕು.
* ಶೈಕ್ಷಣಿಕ, ಸಾರಿಗೆ, ಒತ್ಯಾದಿ ಭತ್ಯೆಗಳ ಮಿತಿಯಲ್ಲಿ ಹೆಚ್ಚಳಕ್ಕೆ ಬೇಡಿಕೆ.
* ಗೃಹಸಲಾದ ಬಡ್ಡಿ ಕಡಿತ (ನಿರ್ಮಾಣ ಹಂತ)ದ ಮಿತಿಯನ್ನು 3 ವರ್ಷಕ್ಕೆ ಏರಿಸುವಂತೆ ಬೇಡಿಕೆ.

* 80ಸಿ ಅಡಿಯಲ್ಲಿ ಕಡಿತಗೊಳ್ಳುವ ಮೊತ್ತವನ್ನು ಗೋಲ್ಡ್ ಮಾನಿಟೈಷನ್ ಯೋಜನೆಗೆ ಬಳಸಿಕೊಂಡು ಚಿನ್ನ ಆಮದಿಗೆ ಕಡಿವಾಣ ಹಾಕುವ ಸಾಧ್ಯತೆ.
* ಮೂಲ ಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಮೂಲ ಸೌಕರ್ಯ ಕ್ಷೇತ್ರದ ಬಾಂಡ್ ಗಳನು ಮತ್ತೊಮ್ಮೆ ಪರಿಚಯಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Individual taxpayers will be pinning hopes on Finance Minister Arun Jaitley to announce taxation measures in Budget 2016-17 that would leave a little more in their hands.
Please Wait while comments are loading...