ಭಾರತದಲ್ಲಿ ಶೀತಜ್ವರ, ಅನಾರೋಗ್ಯ ಪ್ರಕರಣ ಏರಿಕೆ!: ರೋಗ ಲಕ್ಷಣ, ವೈದ್ಯರ ಸಲಹೆಯ 10 ಅಂಶ ತಿಳಿಯಿರಿ
ಎರಡು ತಿಂಗಳಿಂದ ದೇಶದಲ್ಲಿ ಕೆಮ್ಮು, ಶೀತಜ್ವರದ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ರೋಗದ ಲಕ್ಷಣ, ವ್ಯಾಪಕತೆಗೆ ಕಾರಣ ಹಾಗೂ ಔಷಧಿ ಬಳಕೆ ಕುರಿತು ಭಾರತೀಯ ವೈದ್ಯಕೀಯ ಸಂಘ, ವೈದ್ಯರು ನೀಡಿರುವ ಸಲಹೆ, ಮಹಿತಿ ಇಲ್ಲಿದೆ.
ನವದೆಹಲಿ, ಮಾರ್ಚ್ 05: ಭಾರತ ದೇಶದ ಹಲವು ಪ್ರದೇಶಗಳಲ್ಲಿ ಹಿಂದಿನ ಎರಡು ತಿಂಗಳಿಂದ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದರಲ್ಲಿ ಬಹುತೇಕ ಮಂದಿ ಕೆಮ್ಮು, ಶೀತಜ್ವರ (ಇನ್‌ಫ್ಲುಯೆಂಜಾ) ಪ್ರಕರಣ ಕಂಡು ಬಂದಿವೆ. 2 ವರ್ಷಗಳ ಕೋವಿಡ್ ಕಾಲದ ಬಳಿಕ ಜ್ವರ, ಕೆಮ್ಮಿನಂತಹ ಅನಾರೋಗ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಈ ಅನಾರೋಗ್ಯ ಸಮಸ್ಯೆ ಎಷ್ಟು ಹಾನಿಕಾರಕ, ಅದರ ವ್ಯಾಪಕತೆಗೆ ಕಾರಣ ಹಾಗೂ ಔಷಧಿ ಬಳಕೆ ಕುರಿತು ಭಾರತೀಯ ವೈದ್ಯಕೀಯ ಸಂಘ, ವೈದ್ಯರು ನೀಡಿರುವ ಸಲಹೆ, ಮಹಿತಿ ಇಲ್ಲಿದೆ.

ಜ್ವರ, ಕೆಮ್ಮು ಹೆಚ್ಚಾಗಲು ಕಾರಣ/ಮಾಹಿತಿ ಇಲ್ಲಿದೆ
* ಭಾರತ ದೇಶಾದ್ಯಂತ ಜ್ವರದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದು ಇನ್‌ಫ್ಲುಯೆಂಜಾ ದ ಉಪತಳಿ ವೈರಸ್ ಆಗಿರುವ H3, N2 ವೈರಸ್‌ನಿಂದ ಉಂಟಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
* ಬೇರೆ ವೈಸ್ ಉಪತಳಿಗಿಂತ ಈ H3, N2 ವೈರಸ್ ನಿಂದಾಗಿ ಅನಾರೋಗ್ಯ ಹೆಚ್ಚಾಗಿ, ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಈ ವೈರಸ್ ದೇಶದಲ್ಲಿ 2-3 ತಿಂಗಳಿನಿಂದ ಸಕ್ರಿಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.
* ಈ ಸಾಮಾನ್ಯ ವೈರಸ್ ತಲುಗಿದ ಬಳಿಕ ನಿರಂತರ ಕೆಮ್ಮು, ಶೀತ ಜ್ವರ ಬಳಲಿಕೆ ಕಂಡು ಬರುತ್ತದೆ. ರೋಗಿಗಳ ಪೈಕಿ ಅನೇಕರು ದೀರ್ಘಕಾಲದ ರೋಗಲಕ್ಷಣ ಹೊಂದಿದವರಾಗಿದ್ದಾರೆ.

* ವೈರಸ್ ಸೋಂಕು ನಮ್ಮಿಂದ ದೂರವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಇದರ ಲಕ್ಷಣಗಳು ಬಲವಾಗಿದ್ದು, ರೋಗಿ ಚೇತರಿಸಿಕೊಂಡ ನಂತರವೂ ರೋಗಲಕ್ಷಣಗಳು ದೀರ್ಘಕಾಲದವರೆಗೆ ಇರುತ್ತವೆ, ಎಂದು ಸಿದ್ಧ ಆಸ್ಪತ್ರೆಯ ಡಾ ಅನುರಾಗ್ ಮೆಹ್ರೋತ್ರಾ ಅಭಿಪ್ರಾಯಪಟ್ಟಿದ್ದಾರೆ.
* ಇತರ ಇನ್ಫ್ಲುಯೆನ್ಸ ಉಪ ತಳಿಗಳಿಗಿಂತ H3, N2 ವೈರಸ್ ಹೆಚ್ಚು ಆಸ್ಪತ್ರೆಗೆ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
* ಹೊಸ ಇನ್‌ಫ್ಲುಯೆಂಜಾ ರೋಗವು ಜೀವಕ್ಕೆ ಅಪಾಯಕಾರಿ ಅಲ್ಲ. ಇದು ಮಾರಣಾಂತಿಕವಲ್ಲ. ಆದರೆ ನನ್ನ ಕೆಲವು ರೋಗಿಗಳು ಉಸಿರಾಟದ ತೊಂದರೆ ಆಗಬಹುದು. ಕೆಲವು ರೋಗಲಕ್ಷಣಗಳು ಕೋವಿಡ್ ಅನ್ನು ಹೋಲುತ್ತವೆ, ಆದರೆ ಬಹುತೇಕ ಎಲ್ಲಿರಗೂ ಕೋವಿಡ್ ತಪಾಸಣೆ ವೇಳೆ ನೆಗಟಿವ್ ಬಂದಿದೆ ಎಂದು ಕ್ಲಿನಿಕಲ್ ಟ್ರಯಲ್ ಸ್ಪೆಷಲಿಸ್ಟ್ ಡಾ.ಅನಿತಾ ರಮೇಶ್ ಹೇಳಿದರು.
* ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಅನುಸರಿಸಬೇಕಾದ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ICMR ಸೂಚಿಸಿದೆ.
* ದೇಶದಲ್ಲಿ ನಾಗರಿಕರಿಗೆ ಹೆಚ್ಚುತ್ತಿರುವ ಕೆಮ್ಮು, ಶೀತ, ವಾಕರಿಕೆಯ ಅನಾರೋಗ್ಯ ಸಮಸ್ಯೆ ಕಂಡು ಬಂದಾಗ ಭಾರತೀಯ ವೈದ್ಯಕೀಯ ಸಂಘ (IMA), ಆಂಟಿಬಯೋಟಿಕ್ ಳನ್ನು ಎಥೆಚ್ಚ ಬಳಕೆ ವಿರುದ್ಧ ಸಲಹೆ ನೀಡಿದೆ. ಅನಾರೋಗ್ಯ ವೇಳೆ ಚಿಕಿತ್ಸೆ ಪಡೆಯುವಂತೆ ತಿಳಿಸಿದೆ.
* ಕೋವಿಡ್ ಸಮಯದಲ್ಲಿ ಅಜಿಥ್ರೊಮೈಸಿನ್ ಮತ್ತು ಐವರ್ಮೆಕ್ಟಿನ್ ಔಷಧಿಯ ಅಪಾರ ಬಳಕೆ ವ್ಯಾಪಕವಾಗಿ ಬಳಸುವುದನ್ನು ನೋಡಿದ್ದೇವೆ ಮತ್ತು ಇದು ಪ್ರತಿರೋಧಕ್ಕೆ ಕಾರಣವಾಗಿದೆ. ಪ್ರತಿಜೀವಕಗಳನ್ನು ಶಿಫಾರಸು ಮಾಡುವ ಮೊದಲು ಸೋಂಕು ಬ್ಯಾಕ್ಟೀರಿಯಾ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ಅವಶ್ಯಕ" ಎಂದು ವೈದ್ಯಕೀಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications