ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವಡಿ ಯಾತ್ರಿಗಳಿಗೆ ಹೂವು, ನಮಗಾದರೆ ಬುಲ್ಡೋಜರಾ...! ಯೋಗಿಗೆ ಓವೈಸಿ ತರಾಟೆ

|
Google Oneindia Kannada News

ಲಕ್ನೋ, ಜುಲೈ. 27: ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ತಾರತಮ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿದ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಕಾವಡಿ ಯಾತ್ರಿಗಳಿಗೆ (Kanwar Piligrims) ವೈಮಾನಿಕ ಹೂವಿನ ಮಳೆಯಿಂದ ಸ್ವಾಗತಿಸಿದರೆ, ಮುಸ್ಲಿಮರಿಗಾದರೆ ಬೊಲ್ಡೋಜರ್‌ನಿಂದ ಮನೆಗಳನ್ನು ಕೆಡವುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗಿ ಅವರೇ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲು ತೆರಿಗೆದಾರರ ಹಣವನ್ನು ಬಳಸುತ್ತಿದ್ದೀರಿ, ತುಂಬಾ ಚೆನ್ನಾಗಿದೆ, ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ, ನಮ್ಮನ್ನೂ ಸಮಾನವಾಗಿ ಪರಿಗಣಿಸಿ ಎಂದು ನಾವು ಹೇಳುತ್ತಿದ್ದೇವೆ. ಅವರ ಮೇಲೆ ಹೂವಿನ ಮಳೆ ಸುರಿಸುತ್ತಿದ್ದೀರಿ, ಕನಿಷ್ಠ ನಮ್ಮ ಮನೆಗಳನ್ನಾದರೂ ಉಳಿಸಿ ಎಂದರು.

ಮಂಡ್ಯಕ್ಕೆ ಬಿಜೆಪಿ ಲಗ್ಗೆ... ಸುಮಲತಾರ ತೀರ್ಮಾನ ಏನಿರಬಹುದು? ಮಂಡ್ಯಕ್ಕೆ ಬಿಜೆಪಿ ಲಗ್ಗೆ... ಸುಮಲತಾರ ತೀರ್ಮಾನ ಏನಿರಬಹುದು?

ಮೀರತ್‌ನ ಪೊಲೀಸ್ ಮುಖ್ಯಸ್ಥರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಕಾವಡಿ ಯಾತ್ರಿಗಳ ಮೇಲೆ ಹೂವಿನ ಮಳೆ ಸುರಿಸುತ್ತಿರುವ ಹಾಗೂ ಹಾಪುರ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕಾವಡಿ ಯಾತ್ರಿಯೊಬ್ಬರ ಕಾಲುಗಳ ಮೇಲೆ ನೋವು ನಿವಾರಕ ಸ್ಪ್ರೇ ಅನ್ನು ಹಾಕುತ್ತಿರುವ ದೃಶ್ಯಗಳು ವೈರಲ್ ಆದ ನಂತರ ಓವೈಸಿ ಈ ಹೇಳಿಕೆ ನೀಡಿದ್ದಾರೆ.

ನೀವು ಅವರ ಕಾಲಿಗೆ ಮಸಾಜ್ ಮಾಡುತ್ತಿರುವುದು ಒಳ್ಳೆಯದು, ಆದರೆ ನೀವು ಸಹರಾನ್‌ಪುರದಲ್ಲಿ ಮುಸ್ಲಿಂ ಯುವಕನನ್ನು ಕರೆದೊಯ್ದು ಹೊಡೆದಿದ್ದೀರಿ. ಹೀಗೆ ತಾರತಮ್ಯ ಮಾಡಬೇಡಿ. ಅದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ. ಲಕ್ನೋದ ಲುಲು ಮಾಲ್ ಬಳಿ ನಮಾಜ್‌ ಗಲಾಟೆಯನ್ನು ಉಲ್ಲೇಖಿಸಿದ ಓವೈಸಿ ಅಲ್ಲಿ ನಮಾಜ್ ಮಾಡುತ್ತಿದ್ದವರು ಆ ದಿಕ್ಕಿಗೆ ಮುಖಮಾಡಿ ಯಾವ ದೇವರನ್ನು ಪ್ರಾರ್ಥಿಸುತ್ತಿದ್ದರು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಏಕೆಂದರೆ ಅವರು 18 ಸೆಕೆಂಡುಗಳಲ್ಲಿ ನಮಾಜ್ ಮುಗಿಸಿದರು ಎಂಬುದೇ ಆಶ್ಚರ್ಯ ಎಂದರು.

ಇದಕ್ಕೂ ಮೊದಲು ಅಸಾದುದ್ದೀನ್ ಓವೈಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಕಾವಡಿ ಯಾತ್ರೆ ಕುರಿತು ಸುದ್ದಿ ವರದಿಗಳನ್ನು ಹಂಚಿಕೊಂಡು ಒಂದು ಧರ್ಮಕ್ಕೆ ಸಂಚಾರ ವ್ಯತ್ಯಯ ಮತ್ತು ಇನ್ನೊಂದು ಧರ್ಮಕ್ಕೆ ಬುಲ್ಡೋಜರ್ ಕ್ರಮ. ಏಕೆ?" ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ರೆವಿಡಿ ಸಂಸ್ಕೃತಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿದೆ ಎಂದು ಅವರು ಹೇಳಿದರು.

ಧರ್ಮಕ್ಕಾಗಿ ಗುಂಡಿನ ದಾಳಿ, ಕಸ್ಟಡಿಯಲ್ ಟಾರ್ಚರ್

ಧರ್ಮಕ್ಕಾಗಿ ಗುಂಡಿನ ದಾಳಿ, ಕಸ್ಟಡಿಯಲ್ ಟಾರ್ಚರ್

ಮುಸಲ್ಮಾನರು ಕೆಲವು ನಿಮಿಷಗಳ ಕಾಲ ನಮಾಜ್ ಮಾಡಿದರೆ ಅವ್ಯವಸ್ಥೆ ಎನ್ನಲಾಗುತ್ತದೆ. ಮುಸ್ಲಿಮರು ಕೇವಲ ಅವರ ಧರ್ಮಕ್ಕಾಗಿ ಗುಂಡಿನ ದಾಳಿ, ಕಸ್ಟಡಿಯಲ್ ಟಾರ್ಚರ್, ಎನ್ಎಸ್ಎ, ಯುಎಪಿಎ, ಮತ್ತು ಬುಲ್ಡೋಜರ್‌ ದಾಳಿಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

2013ರಲ್ಲಿ 62 ಸಾವುಗಳು

2013ರಲ್ಲಿ 62 ಸಾವುಗಳು

ಮತ್ತೊಂದು ಇತ್ತೀಚಿನ ಘಟನೆಯಲ್ಲಿ, ಮೀರತ್‌ನ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ನಮಾಜ್ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬಂದಿದೆ. 2013ರಲ್ಲಿ ಆಗಸ್ಟ್‌ನಿಂದ ಸೆಪ್ಟೆಂಬರ್ ನಡುವೆ ಉತ್ತರ ಪ್ರದೇಶ ರಾಜ್ಯದ ಮುಜಾಫರ್‌ನಗರ ಜಿಲ್ಲೆಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಗಳಿಂದ 42 ಮುಸ್ಲಿಮರು ಮತ್ತು 20 ಹಿಂದೂಗಳು ಸೇರಿದಂತೆ 62 ಸಾವುಗಳು ಸಂಭವಿದಿವೆ. ಅಲ್ಲದೆ ಈ ವೇಳೆ 200 ಮಂದಿ ಗಾಯಗೊಂಡು 50,000ಕ್ಕೂ ಹೆಚ್ಚು ಸ್ಥಳಾಂತರಗೊಂಡಿದ್ದಾರೆ.

100 ಮುಸ್ಲಿಂ ಹುಡುಗಿಯರನ್ನು ಗುರಿ ಮಾಡುತ್ತೇವೆ

100 ಮುಸ್ಲಿಂ ಹುಡುಗಿಯರನ್ನು ಗುರಿ ಮಾಡುತ್ತೇವೆ

ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಪಾಲಿನ ವಿವಾದಕ್ಕಿಂತ ಹೆಚ್ಚಿನದನ್ನು ಮಾಡಿದ್ದಾರೆ. ಆಗಸ್ಟ್ 2014 ರಲ್ಲಿ ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ ಆದಿತ್ಯನಾಥ್ ಅವರು ಅಜಂಗಢದಲ್ಲಿ ಸಾರ್ವಜನಿಕ ಭಾಷಣದಲ್ಲಿ ಅಂತರ್-ಧರ್ಮೀಯ ವಿವಾಹಗಳಿಂದಾಗಿ ಧಾರ್ಮಿಕ ಮತಾಂತರವಾಗುತ್ತಿವೆ. ಅವರು ಒಬ್ಬ ಹಿಂದೂ ಹುಡುಗಿಯನ್ನು ಮದುವೆಯಾದರೆ ನಾವು 100 ಮುಸ್ಲಿಂ ಹುಡುಗಿಯರನ್ನು ಗುರಿ ಮಾಡುತ್ತೇವೆ. ಅವರು ಒಬ್ಬ ಹಿಂದೂವನ್ನು ಕೊಂದರೆ, ನಾವು 100 ಮಂದಿಗೆ ಗುರಿ ಮಾಡುತ್ತೇವೆ ಎಂದು ಹೇಳುವ ವಿಡೀಯೋ ಹರಿದಾಡಿತ್ತು.

ಹಿಂದೂಸ್ತಾನವನ್ನು ತೊರೆಯಬಹುದು

ಹಿಂದೂಸ್ತಾನವನ್ನು ತೊರೆಯಬಹುದು

ಫೆಬ್ರವರಿ 2015 ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಮಾತನಾಡುವಾಗ ಯೋಗಿ ಆದಿತ್ಯನಾಥ್, ಅವಕಾಶ ಸಿಕ್ಕರೆ, ನಾವು ಗೌರಿ, ಗಣೇಶ ಮತ್ತು ನಂದಿ ದೇವಿಯ ಪ್ರತಿಮೆಗಳನ್ನು ಪ್ರತಿ ಮಸೀದಿಯಲ್ಲಿ ಸ್ಥಾಪಿಸುತ್ತೇವೆ ಎಂದು ಹೇಳಿದ್ದರು. ಜೂನ್ 2015 ರಲ್ಲಿ ಆದಿತ್ಯನಾಥ್ ಅವರು ಸೂರ್ಯ ನಮಸ್ಕಾರದ ಬಗ್ಗೆ ಮಾತನಾಡುತ್ತಾ, ಯೋಗವನ್ನು ತಪ್ಪಿಸಲು ಬಯಸುವವರು ಹಿಂದೂಸ್ತಾನವನ್ನು ತೊರೆಯಬಹುದು. ಸೂರ್ಯದೇವನಲ್ಲಿ ಕೋಮುವಾದವನ್ನು ಕಾಣುವವರು ಸಮುದ್ರದಲ್ಲಿ ಮುಳುಗಬಹುದು ಅಥವಾ ತಮ್ಮ ಜೀವನದುದ್ದಕ್ಕೂ ಕತ್ತಲೆಯ ಕೋಣೆಯಲ್ಲಿ ವಾಸಿಸಬಹುದು ಎಂದು ವಿನಂತಿ ಮಾಡಿದ್ದರು.

Recommended Video

ನ್ಯಾಯ ಸಿಗುತ್ತಾ?ಪ್ರವೀಣ್ ಹತ್ಯೆ ಬಗ್ಗೆ ರಾಜಕೀಯ ನಾಯಕರ ಮಾತುಗಳು ಮಾತಲ್ಲಷ್ಟೇ ಸೀಮಿತ | OneIndia Kannada

English summary
Hyderabad MP Asaduddin Owaisi has accused the BJP-led government of Uttar Pradesh of religious discrimination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X