ಲೋಕಸಭಾ ಚುನಾವಣೆಯ ಜೊತೆಗೆ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ?

Recommended Video

      Lok Sabha Elections 2019 : ಲೋಕಸಭಾ ಚುನಾವಣೆ 2019ರ ಜೊತೆಗೆ 5 ರಾಜ್ಯಗಳ ಅಸೆಂಬ್ಲಿಯ ಚುನಾವಣೆ |Oneindia Kannada

      ನವದೆಹಲಿ, ಡಿ 3: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಜೊತೆಗೆ, ನಾಲ್ಕು ರಾಜ್ಯಗಳ ಅಸೆಂಬ್ಲಿ ಚುನಾವಣೆಯನ್ನೂ ಚುನಾವಣಾ ಆಯೋಗ ನಡೆಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ರಾಜ್ಯದ ಅಸೆಂಬ್ಲಿ ಚುನಾವಣೆಯನ್ನು ಆಯೋಗ, ಲೋಕಸಭಾ ಚುನಾವಣೆಯ ಜೊತೆಗೆ ನಡೆಸುವ ಬಗ್ಗೆ, ಚಿಂತನೆ ನಡೆಸುತ್ತಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

      ಈ ಎಲ್ಲಾ ರಾಜ್ಯಗಳ ಹಾಲೀ ವಿಧಾನಸಭೆಯ ಅವಧಿ, ಬರುವ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದರ ಜೊತೆಗೆ, ಅವಧಿಗೆ ಮುನ್ನ ಅಸೆಂಬ್ಲಿ ವಿಸರ್ಜನೆಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಚುನಾವಣೆಯನ್ನೂ ಆಯೋಗ ಕೈಗೆತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

       Five states assembly poll alongwith Loksabha election likely, EC sources

      ಅಸೆಂಬ್ಲಿ ವಿಸರ್ಜನೆಗೊಂಡ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕಾಗಿರುವುದರಿಂದ, ಜಮ್ಮು ಮತ್ತು ಕಾಶ್ಮೀರದ ಚುನಾವಣೆಯೂ, ಸಾರ್ವತ್ರಿಕ ಚುನಾವಣೆಯ ಜೊತೆಗೆ ಅಥವಾ ಅದಕ್ಕೂ ಮುನ್ನ ನಡೆಯಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

      ಲೋಕಸಭಾ ಚುನಾವಣೆಯ ವೇಳೆ, ಈ ಎಲ್ಲಾ ರಾಜ್ಯಗಳಲ್ಲಿ ಭದ್ರತೆಯನ್ನು ಹೇಗೂ ಒದಗಿಸಬೇಕಾಗುತ್ತದೆ, ಅದರ ಜೊತೆಗೆ ವಿಧಾನಸಭಾ ಚುನಾವಣೆಯೂ ನಡೆದರೆ, ಹೆಚ್ಚುವರಿ ಖರ್ಚನ್ನು ತಗ್ಗಿಸಬಹುದಾಗಿದೆ ಎನ್ನುವುದು ಆಯೋಗದ ಲೆಕ್ಕಾಚಾರ.

      ಐದು ರಾಜ್ಯಗಳ ಹಾಲೀ ಅಸೆಂಬ್ಲಿಯ ಅವಧಿ ಎಲ್ಲಿಯವರೆಗಿದೆ? ಇಲ್ಲಿದೆ ಮಾಹಿತಿ:

      ಜಮ್ಮು ಮತ್ತು ಕಾಶ್ಮೀರ : 21.05.2019 ( ಈ ದಿನಾಂಕದೊಳಗೆ ಚುನಾವಣಾ ಪ್ರಕ್ರಿಯೆ ಮುಗಿದಿರಬೇಕು)
      ಸಿಕ್ಕಿಂ : 27.05.2019
      ಅರುಣಾಚಲ ಪ್ರದೇಶ: 01.06.2019
      ಆಂಧ್ರಪ್ರದೇಶ: 18.06.2019
      ಒಡಿಶಾ : 11.06.2019

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+