ಮಾವೋವಾದಿಗಳ ಅಟ್ಟಹಾಸಕ್ಕೆ ಐವರು ಪೊಲೀಸರ ಬಲಿ

Posted By:
Subscribe to Oneindia Kannada

ಭುವನೇಶ್ವರ, ಫೆಬ್ರವರಿ 1: ರಾಜ್ಯ ಹೆದ್ದಾರಿಯಲ್ಲಿ ಮಾವೋವಾದಿಗಳು ಅಡಗಿಸಿಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡ ಪರಿಣಾಮ ಐವರು ಪೊಲೀಸರು ಮೃತಪಟ್ಟಿರುವ ಘಟನೆ ಒಡಿಶಾ- ಆಂಧ್ರಪ್ರದೇಶ ಗಡಿ ಭಾಗದಲ್ಲಿ ನಡೆದಿದೆ.

ಕೋರಾಪತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸರಲ್ಲಿ 12 ಮಂದಿಯನ್ನು ಕಟಕ್ ಗೆ ತರಬೇತಿಗಾಗಿ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಿನಿ ಬಸ್ಸೊಂದನ್ನು ಹತ್ತಿಕೊಂಡಿದ್ದ ಆ ಹನ್ನೆರಡು ಜನ ಪೊಲೀಸರು ಕಟಕ್ ನತ್ತ ಪ್ರಯಾಣ ಬೆಳೆಸಿದ್ದರು.

Five police personel killed in Maoist attack at Odisha-Andhra Pradesh Border

ಬಸ್ಸು, ಸುಂಕಿ-ಸಾಲೋರ್ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಾ ಮೊಗರ್ಗುಮಾ ಎಂಬ ಹಳ್ಳಿಯ ಬಳಿ ಬಂದಾಗ, ರಸ್ತೆಯಡಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕ (ಇಂಪ್ರೂವ್ಡ್ ಎಕ್ಸ್ ಪ್ಲೋಸಿವ್ ಡಿವೈಸ್ - ಐಇಡಿ) ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಂಡಿತು.

ಈ ಸ್ಫೋಟಕ್ಕೆ ಸಿಲುಕಿದ ಬಸ್ ನಲ್ಲಿದ್ದ ಐವರು ಪೊಲೀಸರು ಹಾಗೂ ಒಬ್ಬ ನಾಗರಿಕ ಅಸುನೀಗಿದ್ದಾರೆ. ಸ್ಫೋಟದ ಪ್ರಮಾಣ ಭೀಕರವಾಗಿದ್ದು ಸ್ಫೋಟಿಸಿದ ಸ್ಥಳದಲ್ಲಿ ಏಳು ಅಡಿಯಷ್ಟು ಗುಂಡಿಯು ಸೃಷ್ಟಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four policemen died in a Maoist attack in Koraput, near the Odisha-Andhra Pradesh border. The policemen were part of a convoy which was going from Koraput to Cuttack for training.
Please Wait while comments are loading...